ಮೈಸೂರಲ್ಲಿ ತಲೆ ಎತ್ತಲಿದೆ ಯುದ್ಧ ಸ್ಮಾರಕ; ಸರ್ಕಾರದಿಂದ 1.41 ಕೋಟಿ ಅನುದಾನ
ಪಾರಂಪರಿಕ ಶೈಲಿಯಲ್ಲೇ ಚೌಕಾಕಾರದಲ್ಲಿ ಸ್ಮಾರಕ ಇರಲಿದೆ.
Team Udayavani, Jul 11, 2022, 6:01 PM IST
ಮೈಸೂರು: ಮೈಸೂರಿಗರ ಬಹುದಿನಗಳ ಕನಸಾಗಿದ್ದ ಯುದ್ಧ ಸ್ಮಾರಕ ನಿರ್ಮಾಣ ಶೀಘ್ರದಲ್ಲೇ ಈಡೇರಲಿದೆ. ಪಾರಂಪರಿಕ ಶೈಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ನಿರ್ಧರಿಸಲಾಗಿದ್ದು, ಸರ್ಕಾರ 1.41 ಕೋಟಿ ರೂ. ಅನುದಾನ ನೀಡಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಮೀಪದಲ್ಲಿರುವ ಉದ್ಯಾನದಲ್ಲಿ ಉದ್ದೇಶಿತ ಸ್ಮಾರಕ ನಿರ್ಮಾಣಕ್ಕೆ ಶೀಘ್ರವೇ ಶಂಕುಸ್ಥಾಪನೆ ನೆರವೇರಲಿದ್ದು, ಈಗಾಗಲೇ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾ ಪಾರಂಪರಿಕ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ. ಜತೆಗೆ ಇದರ ವಿನ್ಯಾಸಕ್ಕೂ ಸಮ್ಮತಿ ಸಿಕ್ಕಿದ್ದು, ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ವಿಧಾನ ಪರಿಷತ್‌ನ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆಯಿಂದ ಶಂಕುಸ್ಥಾಪನೆ ತಡವಾಗಿದ್ದು, ಕೆಲವೇ ದಿನಗಳಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ತಯಾರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
33 ಅಡಿ ಎತ್ತರ ಸ್ತಂಭ: ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ 45 ಅಡಿ ಎತ್ತರ ಬರಲಿದೆ. 33 ಅಡಿ ಎತ್ತರ ಸ್ತಂಭ, 10 ಅಡಿ ಬುನಾದಿ ಇರಲಿದೆ. ಕಲ್ಲಿನ ಮೇಲೆ 5 ಅಡಿ ಎತ್ತರದ ಅಶೋಕ ಲಾಂಛನ ಅಳವಡಿಸಲಾಗುತ್ತದೆ. ಸ್ಮಾರಕಕ್ಕೆ ಬಳಸುವ ಕಲ್ಲಿಗೆ ಪಾಲಿಶ್ ಮಾಡಿದ ನಂತರ ಅಕ್ಷರ ಮಾಸದಂತೆ ಅಮೆರಿಕನ್ ವೈಟ್ ಪೇಯಿಂಟ್‌ನಿಂದ ಬರೆಯಲಾಗುತ್ತದೆ. ಪಾಲಿಶ್ ಮಾಡಿದ ಬಳಿಕ ಜೆಟ್ ಬ್ಲಾಕ್ ಕಲರ್ ಆಗುತ್ತದೆ.
ಪಾರಂಪರಿಕ ಶೈಲಿಯಲ್ಲೇ ಚೌಕಾಕಾರದಲ್ಲಿ ಸ್ಮಾರಕ ಇರಲಿದೆ. ಒಂದು ಭಾಗದಲ್ಲಿ ಮೂರು ಸೇನಾ ಪಡೆಗಳ ಸಂಕೇತದೊಂದಿಗೆ ದ್ವಾರ ಇರಲಿದ್ದು, ಉಳಿದ ಮೂರು ಬದಿಯಲ್ಲಿ ಭೂಸೇನೆ, ವಾಯುಸೇನೆ, ನೌಕಾದಳದ ಮಹತ್ವ ಸಾರುವ ಯುದ್ಧ ಟ್ಯಾಂಕರ್‌ಗಳು, ಯುದ್ಧ ವಿಮಾನಗಳು, ನೌಕೆ, ಗನ್ ಸೇರಿದಂತೆ ಸಮರದಲ್ಲಿ ಬಳಸುವ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಇದಕ್ಕಾಗಿ ಸರ್ಕಾರದಿಂದ ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದು ಟ್ಯಾಂಕರ್, ಗನ್ ಇನ್ನಿತರ ಪರಿಕರ ತರಲು ಪ್ರಯತ್ನಿಸಲಾಗುತ್ತಿದೆ.
20 ವರ್ಷಗಳ ಹೋರಾಟ: ಮೈಸೂರು ಜಿಲ್ಲೆಯಲ್ಲಿ ಯುದ್ಧ ಸ್ಮಾರಕ ಇರಲಿಲ್ಲ. ಹೀಗಾಗಿ, ಈ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ವಿ ಕೇರ್ ನಿವೃತ್ತ ಸೈನಿಕರ ಟ್ರಸ್ಟ್‌ನ ಎಂ.ಎನ್. ಸುಬ್ರಹ್ಮಣಿ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ 2000ರಲ್ಲಿ ಮನವಿ ಸಲ್ಲಿಸಿದ್ದರು. ಯಾವುದೇ ಪ್ರಗತಿಯಾಗಲಿಲ್ಲ.
ಆದ್ದರಿಂದ 2010ರಲ್ಲಿ ಮತ್ತೂಮ್ಮೆ ಮನವಿ ಸಲ್ಲಿಸಿದ ಪರಿಣಾಮ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಹುಡುಕುವ ಪ್ರಕ್ರಿಯೆ ನಡೆಸಲಾಗಿತ್ತು. ನಂತರ ಇದಕ್ಕೆ ಗ್ರಹಣ ಹಿಡಿದಿತ್ತು. ಆದರೆ, 2012ರಲ್ಲಿ ಮತ್ತೆ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗೆ ಚಾಲನೆ ದೊರೆಯಿತು. 2016ರಲ್ಲಿ ಮೈಸೂರು ಉಪ ವಿಭಾಗಾಧಿಕಾರಿಯಾಗಿದ್ದ ನಿವೃತ್ತ ಯೋಧರೂ ಆದ ಸಿ.ಎಲ್. ಆನಂದ್ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಅಗತ್ಯವಾದ ಪ್ರಕ್ರಿಯೆ ಪೂರ್ಣಗೊಳಿಸಿ ಜಿಲ್ಲಾಡಳಿತದ
ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು.ಇದರ ಫಲವಾಗಿ ಸ್ಮಾರಕ ನಿರ್ಮಾಣದ ದಾರಿ ಸುಗಮವಾಗಿದೆ.
1.41 ಕೋಟಿ ರೂ. ಅನುದಾನ
ಜಿಲ್ಲಾಧಿಕಾರಿ ಕಚೇರಿಯ ಎಡ ಭಾಗದಲ್ಲಿರುವ ಸುಮಾರು 5 ಎಕರೆ ವಿಸ್ತೀರ್ಣದ ಎನ್‌ಸಿಸಿ ಪರೇಡ್ ಮೈದಾನದಲ್ಲಿ ಸ್ಮಾರಕ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಅಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಈ ಜಾಗವನ್ನು ಮಂಜೂರು ಮಾಡಿದ್ದರು. ಈ ಹಿಂದೆ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ನೇತೃತ್ವದಲ್ಲಿ ರಚಿಸಲಾಗಿದ್ದ ಯುದ್ಧ ಸ್ಮಾರಕ ನಿರ್ಮಾಣ ಸಮಿತಿಯ ಸಭೆಯಲ್ಲಿ ಸಿ.ಎಲ್. ಆನಂದ್ ಅವರು ಇದರ ನಕ್ಷೆಯನ್ನು ಹಾಜರುಪಡಿಸಿದ್ದರು. ಸ್ಮಾರಕ ನಿರ್ಮಾಣಕ್ಕೆ
ಸರ್ಕಾರ 1.41 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮತಿ ನೀಡಿ ಮುಂಗಡವಾಗಿ 50 ಲಕ್ಷ ರೂ. ನೀಡಿದೆ.
ಸ್ಮಾರಕ ನಿರ್ಮಾಣಕ್ಕಾಗಿ ಚಾಮರಾಜನಗರ ಜಿಲ್ಲೆಯ ಕಲ್ಲಿನ ಕ್ವಾರಿಯಿಂದ 33 ಕ್ಯೂಬಿಕ್ ಮೀಟರ್ ಕಪ್ಪುಶಿಲೆಯನ್ನು ಮೈಸೂರಿಗೆ ತರಲಾಗಿದೆ. ಸ್ಮಾರಕವನ್ನು ಕಾಂಕ್ರೀಟ್ ಕಟ್ಟಡವಾಗಿಸಬಾರದೆಂಬ ಉದ್ದೇಶದಿಂದ ಉತ್ಕೃಷ್ಟ ಕಲ್ಲು ಬಳಸಿ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಇದಕ್ಕಾಗಿ ಚಾಮರಾಜನಗರ ಎಡಿಸಿಯಾಗಿದ್ದ ಸಿ.ಎಲ್.ಆನಂದ್ ಅವರು ಸರ್ಕಾರಕ್ಕೆ ರಾಜಧನ ಹಾಗೂ ವಿವಿಧ ಶುಲ್ಕವನ್ನು ತಾವೇ ಪಾವತಿಸಿ ಉಚಿತವಾಗಿ ಸ್ಮಾರಕ ನಿರ್ಮಾಣಕ್ಕೆ ಕೊಡುಗೆ ಕೊಡಿಸಿದ್ದರು. ಅಲ್ಲದೆ, ಕ್ವಾರಿಯಿಂದ 300 ಟನ್ ತೂಕದ ಕಚ್ಚಾಶಿಲೆಯನ್ನು ಯಾವುದೇ ಶುಲ್ಕ ಪಡೆಯದೆ ಸ್ಮಾರಕ ನಿರ್ಮಾಣಕ್ಕೆ ಅನುಗುಣವಾಗಿ ಬೇಕಾದ ಆಕಾರದಲ್ಲಿ ಕ್ವಾರಿ ಮಾಲೀಕರು ಕತ್ತರಿಸಿ ಕೊಟ್ಟಿದ್ದಾರೆ. ಕಲ್ಲು ಕತ್ತರಿಸಲು ನೀಡಬೇಕಾಗಿದ್ದ ಶುಲ್ಕ ಸೇರಿದಂತೆ ಸುಮಾರು 1.50 ಕೋಟಿ ರೂ. ವೆಚ್ಚದ 300 ಟನ್ ತೂಕದ ಕಲ್ಲನ್ನು ಸ್ಮಾರಕ ನಿರ್ಮಾಣದ ಸ್ಥಳಕ್ಕೆ 6 ತಿಂಗಳ ಹಿಂದೆಯೇ ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.