ಅಂಜನಾದ್ರಿ ಆಯ್ತು ಇದೀಗ ಪಂಪಾಸರೋವರ ನಮ್ಮದೇನ್ನುತ್ತಿದೆ ಗುಜರಾತ್
ಗುಜರಾತ್ ಪ್ರವಾಸೋದ್ಯಮ ವೆಬ್ ಸೈಟ್ ನಲ್ಲಿ ಪಂಪಾಸರೋವರದ ಬಗ್ಗೆ ಮಾಹಿತಿ
Team Udayavani, Jul 11, 2022, 6:07 PM IST
ಗಂಗಾವತಿ: ದೇಶದ ನಾಲ್ಕು ಪವಿತ್ರ ಸರೋವರಗಳಲ್ಲಿ ಕರ್ನಾಟಕದ ಗಂಗಾವತಿಯ ಪಂಪಾ ಸರೋವರ ಪವಿತ್ರ ಕ್ಷೇತ್ರವೂ ಒಂದಾಗಿದೆ ಕೂಡ ಒಂದಾಗಿದೆ. ಇದೆ ಪಂಪಾಸರೋವರದ ಬಗ್ಗೆ ಗುಜರಾತ್ ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ನಲ್ಲಿ ಹೊಸ ಮಾಹಿತಿಯೊಂದು ಹರಿದಾಡುತ್ತಿದೆ .
ಗುಜರಾತ್ ರಾಜ್ಯದ ದಾಗ್ ಜಿಲ್ಲೆಯ ಪೂರ್ಣಾ ನದಿ ದಡದಲ್ಲಿ ಪವಿತ್ರ ಪಂಪಾಸರೋ ಇಲ್ಲಿ ಶ್ರೀರಾಮಚಂದ್ರ ಲಕ್ಷ್ಮಣರು ಶಬರಿಯನ್ನು ಭೇಟಿಯಾಗಿದ್ದರು ಎಂಬ ಉಲ್ಲೇಖವುಳ್ಳ ಮಾಹಿತಿ ಗುಜರಾತ್ ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ನಲ್ಲಿ ಇದೆ .
ಈ ಕುರಿತು ಸಾರ್ವಜನಿಕರು ಇದುವರೆಗೂ ಅಂಜನಾದ್ರಿ ಜನಿಸಿದ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಬಗ್ಗೆ ಆಂಧ್ರಪ್ರದೇಶ ಮಹಾರಾಷ್ಟ್ರ ಗೋವಾ ಸೇರಿದಂತೆ ಅನೇಕ ರಾಜ್ಯಗಳು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದವು ಇದೀಗ ಪವಿತ್ರ ಪಂಪಾಸರೋವರ ಕ್ಷೇತ್ರದ ಬಗ್ಗೆಯೂ ಗುಜರಾತ್ ರಾಜ್ಯ ಪ್ರವಾಸೋದ್ಯಮ ಇಲಾಖೆ ತನ್ನ ಹಕ್ಕನ್ನು ಪ್ರತಿಪಾದಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ .
ದೇಶದ ಪವಿತ್ರ ಗ್ರಂಥಗಳಾದ ರಾಮಾಯಣ ಮಹಾಭಾರತ ಸೇರಿದಂತೆ ವಿವಿಧ ಗ್ರಂಥಗಳಲ್ಲಿ ಕಿಷ್ಕಿಂದಾ ಅಂಜನಾದ್ರಿ, ಋಷ್ಯ ಮುಖ ಪರ್ವತ ಚಿಂತಾಮಣಿ,
ವಾಲಿ ಗುಹೆ, ಪಂಪಾ ಸರೋವರ ಸೇರಿದಂತೆ ಅನೇಕ ಕ್ಷೇತ್ರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ .ಹನುಮಂತ ಕಿಷ್ಕಿಂದಾ ಅಂಜನಾದ್ರಿ ಯಲ್ಲಿ ಜನಿಸಿದ ಎನ್ನುವ ದಾಖಲೆ ಗಳು ಲಭ್ಯವಿದ್ದರೂ ಆಂಧ್ರಪ್ರದೇಶ ಮಹಾರಾಷ್ಟ್ರ ಗೋವಾ ಛತ್ತೀಸ್ ಗಢ ರಾಜ್ಯದ ಪ್ರವಾಸೋದ್ಯಮ ಇಲಾಖೆಯರು ಆಂಜನೇಯ ನಮ್ಮಲ್ಲಿ ಜನಿಸಿದ ಎಂದು ಇತ್ತೀಚೆಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ .
ಇದನ್ನೂ ಓದಿ : ಮೈಸೂರಲ್ಲಿ ತಲೆ ಎತ್ತಲಿದೆ ಯುದ್ಧ ಸ್ಮಾರಕ; ಸರ್ಕಾರದಿಂದ 1.41 ಕೋಟಿ ಅನುದಾನ
ಇದೀಗ ಹೊಸದಾಗಿ ನಮ್ಮ ಪಂಪಾಸರೋವರದ ಬಗ್ಗೆ ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪಿಸಿರುವುದು ಕಂಡುಬಂದಿದೆ .ಗುಜರಾತ್ ರಾಜ್ಯದ ಜಿಲ್ಲೆಯ ದಾಗ್ ಜಿಲ್ಲೆ ಪೂರ್ಣಾ ನದಿ ಪಕ್ಕದಲ್ಲಿ ಪಂಪಾ ಸರೋವರವಿದ್ದು ಇಲ್ಲಿ ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರ ಲಕ್ಷ್ಮಣರು ವನವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಬರಿಯ ಭೇಟಿಯಾಗಿ ಅವಳಿಂದ ಹಣ್ಣುಹಂಪಲು ಸ್ವೀಕರಿಸಿದರು ಎಂಬ ಉಲ್ಲೇಖ ಮಾಡಲಾಗಿದೆ .ಇದಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಕಿಷ್ಕಿಂದೆ ಪ್ರದೇಶದಲ್ಲಿ ಪಂಪಾ ಸರೋವರ ವಿದೆ ಈ ಹಿಂದೆ ಪ್ರಸ್ತುತ ಇರುವ ತುಂಗಭದ್ರಾ ಪಂಪಾ ನದಿ ಎಂದು ಕರೆಯಲ್ಪಡುತ್ತಿತ್ತು ನಂತರ ತುಂಗಭದ್ರ ನದಿ ಆಗಿದೆ .ಇಲ್ಲಿ ಪಂಪಾಸರೋವರವಿದ್ದು ಇಲ್ಲಿ ಶಿವ ಪಾರ್ವತಿಯರ ದೇವಾಲಯವಿದ್ದು ಅದನ್ನು ಈಗ ವಿಜಯಲಕ್ಷ್ಮಿ ದೇವಾಲಯವೆಂದು ಕರೆಯುತ್ತಾರೆ. ಇಲ್ಲಿ ಎರಡು ಸರೋವರಗಳಿದ್ದು ಒಂದು ಚಿಕ್ಕ ಮತ್ತು ಇನ್ನೊಂದು ದೊಡ್ಡ ಗಾತ್ರದ ಸರೋವರವಿದೆ. ಪ್ರತಿನಿತ್ಯ ಉತ್ತರಭಾರತದ ಅನೇಕ ಪ್ರವಾಸಿಗರು ಕಿಷ್ಕಿಂದ ಪ್ರದೇಶವನ್ನು ವೀಕ್ಷಣೆ ಮಾಡಲು ಆಗಮಿಸಿ ಪಂಪಾಸರೋವರದ ಜಲವನ್ನು ತೆಗೆದುಕೊಂಡು ಹೋಗುತ್ತಾರೆ ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ .ಇದೀಗ ಗೊಂದಲ ಮೂಡಿಸುವ ನಿಟ್ಟಿನಲ್ಲಿ ಗುಜರಾತ್ ಪ್ರವಾಸೋದ್ಯಮ ಇಲಾಖೆ ಕಾರ್ಯ ಮಾಡುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪು ಮಾಹಿತಿ ಸಲ್ಲದು : ಇತಿಹಾಸ ಮತ್ತು ಪವಿತ್ರ ಕ್ಷೇತ್ರಗಳ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಗುಜರಾತ್ ಪ್ರವಾಸೋದ್ಯಮ ಇಲಾಖೆ ಪಂಪಾಸರೋವರ ಗುಜರಾತ್ ರಾಜ್ಯಕ್ಕೆ ಸೇರಿದ್ದು ಇಲ್ಲಿಯ ಶ್ರೀ ರಾಮಚಂದ್ರ ಲಕ್ಷ್ಮಣ ಮತ್ತು ಶಬರಿ ಭೇಟಿಯಾಗಿದ್ದರು ಎಂಬ ಮಾಹಿತಿಯುಳ್ಳ ಫೋಟೋವನ್ನು ಗುಜರಾತ್ ಪ್ರವಾಸೋದ್ಯಮ ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿರುವುದು ತಪ್ಪು ಇತಿಹಾಸವನ್ನು ಜನರಿಗೆ ತಿಳಿಸುವುದು ಸರಿಯಲ್ಲ. ಕರ್ನಾಟಕ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆ ಕನ್ನಡ ಸಂಸ್ಕೃತಿ ಇಲಾಖೆ ಪುರಾತತ್ವ ಇಲಾಖೆ ಕೂಡಲೇ ಈ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿ ಗುಜರಾತ್ ಸರ್ಕಾರಕ್ಕೆ ಪತ್ರ ಬರೆಯಬೇಕು ಕೂಡಲೇ ಗುಜರಾತ್ ರಾಜ್ಯದಲ್ಲಿದೆ ಪಂಪಾ ಸರೋವರ ಎನ್ನುವ ಮಾಹಿತಿಯನ್ನು ಗುಜರಾತ್ ಪ್ರವಾಸೋದ್ಯಮ ಇಲಾಖೆ ವೆಬ್ ಸೈಟ್ ನಿಂದ ತೆಗೆದು ಹಾಕಿಸುವಂತೆ ಹಂಪಿ ಆನೆಗುಂದಿ ಪ್ರವಾಸಿ ಗೈಡ್ ಮಲ್ಲಿಕಾರ್ಜುನ ಹೊಸಕೇರಾ ಉದಯವಾಣಿ ವೆಬ್ ಸೈಟ್ ಜೊತೆ ಮಾತನಾಡಿ ಒತ್ತಾಯಿಸಿದ್ದಾರೆ .
– ಕೆ. ನಿಂಗಜ್ಜ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.