![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 11, 2022, 6:17 PM IST
ಧಾರವಾಡ: ರಾಯಾಪುರದಲ್ಲಿನ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಗ್ರಾಮೀಣ ಯೋಜನಾ ಕಚೇರಿ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸೋಲಾರ್ ಘಟಕಗಳ ನಿರ್ವಹಣಾ ತರಬೇತಿ ಮತ್ತು 100 ಘಟಕಗಳ ವಿತರಣಾ ಕಾರ್ಯಕ್ರಮ ಜರುಗಿತು.
ಗ್ರಾಮೀಣ ಯೋಜನಾ ಕಚೇರಿಯ ಯೋಜನಾಧಿಕಾರಿ ಮಯೂರ್ ತೋರಸ್ಕರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ, ವಾತ್ಸಲ್ಯ ಕಿಟ್, ನಮ್ಮ ಊರು ನಮ್ಮ ಕೆರೆ, ವಿಮಾ ಗ್ರಾಮ, ಹೊಸದಾಗಿ ನಿರ್ಮಾಣಗೊಳ್ಳುವ ಮತ್ತು ಪುನಶ್ಚೇತನಗೊಳ್ಳುವ ದೇವಸ್ಥಾನಗಳಿಗೆ ಅನುದಾನ ಹಾಗೂ ಇನ್ನೂ ಹಲವಾರು ಸೌಲಭ್ಯಗಳಿವೆ. ಹಸಿರು ಇಂಧನಗಳಾದ ಕುಕ್ಸ್ಟೋ, ಗೋಬರ್ ಗ್ಯಾಸ್ ಮತ್ತು ಸೋಲಾರ್ ಆಧಾರಿತ ಲೈಟ್ ಮತ್ತು ವಾಟರ್ ಹೀಟರ್, ಸೋಲಾರ್ ಆಧಾರಿತ ದಿನಬಳಕೆಯ ಯಂತ್ರೋಪಕರಣ ಬಗ್ಗೆ ಮಾಹಿತಿ ಇದ್ದು, ಸಾರ್ವಜನಿಕರು ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸೆಲ್ಕೋ ಸೋಲಾರ್ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಗುರುಮೂರ್ತಿ ಹೆಗಡೆ ಅವರು ಸೋಲಾರ್ ಘಟಕಗಳ ನಿರ್ವಹಣೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸದಸ್ಯರಿಗೆ ತರಬೇತಿ ಸಂಸ್ಥೆಯಲ್ಲಿನ ಸೋಲಾರ್ ಘಟಕಗಳನ್ನು ಪ್ರಾಯೋಗಿಕವಾಗಿ ತೋರಿಸಿ ಮಾಹಿತಿ ನೀಡಿ, ಆಯ್ದ 100 ಜನರಿಗೆ ಸೋಲಾರ್ ಘಟಕ ವಿತರಣೆ ಮಾಡಲಾಯಿತು. ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘ ಸದಸ್ಯರು, ಸೆಲ್ಕೋ ಸೋಲಾರ್ ಸಂಸ್ಥೆಯ ಸೇಲ್ಸ್ ಎಕ್ಸಿಕ್ಯೂಟಿವ್‌ಗಳಾದ ನಾಗರಾಜ್ ಮತ್ತು ಲೋಕೇಶ್ ಇದ್ದರು. ಕೃಷಿ ಮೇಲ್ವಿಚಾರಕ ರವಿ ಹೊಟ್ಟಿನ ಸ್ವಾಗತಿಸಿದರು. ಸಾಧನಕೇರಿ ವಲಯದ ಸಂಗಪ್ಪ ನಿರೂಪಿಸಿದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.