ತಾಯಿಯ ಬುದ್ಧಿವಾದ; ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪುತ್ರ
Team Udayavani, Jul 12, 2022, 1:59 AM IST
ಕೋಟ: ಮಳೆಯಲ್ಲಿ ಆಟವಾಡದಂತೆ ಮನೆಯವರು ಬುದ್ಧಿ ಹೇಳಿದ್ದಕ್ಕೆ ಮನನೊಂದು ಒಂಬತ್ತನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸಾಲಿಗ್ರಾಮ ಸಮೀಪದ ಕಾರ್ಕಡದಲ್ಲಿ ಜು. 11ರಂದು ಸಂಭವಿಸಿದೆ.
ಕಾರ್ಕಡದ ಲಕ್ಷ್ಮೀ ಪೂಜಾರಿ¤ ಅವರ ಪುತ್ರ ನಾಗೇಂದ್ರ (14) ಆತ್ಮಹತ್ಯೆಗೆ ಶರಣಾದ ಬಾಲಕ. ಈತ ಕೋಟದ ಖಾಸಗಿ ಹೈಸ್ಕೂಲ್ವೊಂದರ ವಿದ್ಯಾರ್ಥಿಯಾಗಿದ್ದು, ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆ ಕಾರ್ಕಡ ಶಾಲಾ ಮೈದಾನಲ್ಲಿ ಆಟವಾಡಲು ತೆರಳಿದ್ದ. ಅಪರಾಹ್ನ ಮನೆಗೆ ಬಂದು ಊಟ ಬಡಿಸಲು ಹೇಳಿದಾಗ ಮಳೆಯಲ್ಲಿ ಆಟವಾಡದಂತೆ ತಾಯಿ ಬುದ್ಧಿ ಹೇಳಿದ್ದರು.
ಅದೇ ಸಂದರ್ಭ ಕ್ಯಾಂಟೀನ್ನಲ್ಲಿ ಗಿರಾಕಿಗಳಿದ್ದು, ಮನೆಗೆ ಹೋಗಿ ಊಟ ಮಾಡುವಂತೆ ಮಗನಿಗೆ ತಿಳಿಸಿದ್ದರು. ಇಷ್ಟಕ್ಕೇ ಹಠ ಸ್ವಭಾವದ ನಾಗೇಂದ್ರ ಸಿಟ್ಟುಗೊಂಡು ಮನೆ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇಂದ್ರ ಅವರ ತಂದೆ ಕೃಷ್ಣ ಪೂಜಾರಿ ಎರಡು ವರ್ಷದ ಹಿಂದೆ ಮೃತಪಟ್ಟಿದ್ದು, ಅವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಸಾಲ ಮಾಡಲಾಗಿತ್ತು. ಗಂಡನ ಸಾವಿನ ಅನಂತರ ಲಕ್ಷ್ಮೀ ಪೂಜಾರಿ¤ಯವರು ಚಿಕ್ಕ ವಯಸ್ಸಿನ ಮಗ, ಮಗಳೊಂದಿಗೆ ಪುಟ್ಟ ಕ್ಯಾಂಟೀನ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಮನೆಗೆ ಆಧಾರವಾಗಬೇಕಿದ್ದ ಮಗನೂ ಆತ್ಮಹತ್ಯೆಗೆ ಶರಣಾಗಿದ್ದರಿಂದ ತಾಯಿಗೆ ದಿಕ್ಕೇ ತೋಚದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharstra: ಬೈಕ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು
Bengaluru: ದೆಹಲಿಯ ನೇಲ್ ಆರ್ಟಿಸ್ಟ್ ನೇಣಿಗೆ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.