ಪಠ್ಯಗಳಲ್ಲಿ ಭಗವದ್ಗೀತೆ ಸೇರ್ಪಡೆ ಅಗತ್ಯ: ಗುರುವಂದನೆ ಸ್ವೀಕರಿಸಿ ಅದಮಾರು ಹಿರಿಯ ಶ್ರೀ
Team Udayavani, Jul 12, 2022, 6:35 AM IST
ಉಡುಪಿ: ಜೀವನದಲ್ಲಿ ಸಾಧನೆಯ ಹಾದಿಗೆ ಸ್ಫೂರ್ತಿಯಾಗಿರುವ ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಗೊಳಿಸುವ ಅಗತ್ಯವಿದೆ. ಕನಿಷ್ಠ ದಿನಕ್ಕೆ 5 ಶ್ಲೋಕಗಳನ್ನಾದರೂ ಮನೆಯಲ್ಲಿ ಎಲ್ಲರೂ ಪಠನ ಮಾಡಬೇಕು ಎಂದು ಅದಮಾರು ಹಿರಿಯ ಯತಿ ಶ್ರೀ ವಿಶ್ವ ಪ್ರಿಯತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಪೂರ್ಣಪ್ರಜ್ಞ ಆಡಿಟೋರಿ ಯಂನಲ್ಲಿ ನಡೆದ ಶ್ರೀಗಳ ಸನ್ಯಾಸದೀಕ್ಷಾ ಸುವರ್ಣ ಮಹೋತ್ಸವದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಭಗವದ್ಗೀತೆ ಪಠ್ಯಕ್ಕೆ ಸೇರಿಸಿದರೆ ಎಲ್ಲಿ ಕೇಸರೀಕರಣವಾಗುತ್ತದೆಯೋ ಎಂಬ ಭಯ ಕೆಲವರಿಗಿದೆ. ನಮ್ಮ ರಾಷ್ಟ್ರಧ್ವಜದ ಮೇಲಿರುವ ಮೊದಲ ಬಣ್ಣವೇ ಕೇಸರಿ. ಇದು ತ್ಯಾಗದ ಸಂಕೇತವಾಗಿದೆ. ಆದರೆ ನಮ್ಮ ಜನರು ತ್ಯಾಗಕ್ಕೆ ಸಿದ್ಧರಿಲ್ಲ. ಭೋಗಕ್ಕೆ ಸಿದ್ಧರಿದ್ದಾರೆ. ದೇವರು, ದೇಶದ ಮೇಲೆ ನಿಷ್ಠೆ ಇಲ್ಲದವರಿಗೆ ಕೆಂಪು (ಡೇಂಜರ್) ಬಣ್ಣವೇ ಸೂಕ್ತ ಎಂದರು.
ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ
ಓಂಪ್ರಕಾಶ ಭಟ್ ಮತ್ತು ದೇವಿದಾಸ್ ಸಂಪಾದಕತ್ವದಲ್ಲಿ ಹೊರತಂದಿರುವ “ಕೃಷ್ಣಪ್ರಿಯ- ವಿಶ್ವಪ್ರಿಯ’ ಕೃತಿ ಮತ್ತು 2020-22ರ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ “ವಿಶ್ವಪ್ರಿಯ-ಈಶಪ್ರಿಯ’ ಕೃತಿಯನ್ನು ಉಭಯ ಶ್ರೀಗಳು ಬಿಡುಗಡೆ ಮಾಡಿದರು. ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್ಟ ಮುತ್ತೂರು ಅವರಿಗೆ 50 ಸಾವಿರ ರೂ. ನಗದು ಪುರಸ್ಕಾರ ಸಹಿತ “ಶ್ರೀ ನರಹರಿತೀರ್ಥ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವಿದ್ವಾನ್ ಶ್ರೀನಿವಾಸ ಆಚಾರ್ಯ ಕರ್ನೂಲು ಅಭಿವಂದನ ಭಾಷಣ ಮಾಡಿದರು. ಪಾಂಡಿಚೇರಿಯ ಋಷಿ ಧರ್ಮ ಫೌಂಡೇಶನ್ ಅಧ್ಯಕ್ಷ ಡಿ.ಎ. ಜೋಸೆಫ್, ಶಾಸಕ ರಘುಪತಿ ಭಟ್, ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯದ ಸಂಚಾಲಕ ಎಂ.ಬಿ. ಪುರಾಣಿಕ್ ಉಪಸ್ಥಿತರಿದ್ದರು. ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದರಾಜ್ ಸ್ವಾಗತಿಸಿದರು. ವಿ| ಶ್ರೀನಿವಾಸ ಪೆಜತ್ತಾಯ ಪ್ರಸ್ತಾವನೆ ಗೈದರು. ಗಣೇಶ್ ಹೆಬ್ಟಾರ್ ವಂದಿಸಿ, ಡಾ| ಟಿ.ಎಸ್. ರಮೇಶ್ ನಿರೂಪಿಸಿದರು.
ರಾಷ್ಟ್ರ ಭಕ್ತಿ ಜಾಗೃತವಾಗಲಿ
ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಜ್ಞಾನ ಸಂಪಾದನೆಗೆ ದೇವರು ಮಾನವ ಶರೀರ ನೀಡಿದ್ದಾನೆ. ಈ ವಿಚಾರವನ್ನು ತಿಳಿದವರು ಸಾಧಕರಾಗುತ್ತಾರೆ. ದೇಹವನ್ನು ಜ್ಞಾನಕ್ಕಾಗಿ ಮೀಸಲಿಡಬೇಕು. ಇದಕ್ಕೆ ಗುರುಗಳ ಕೃಪೆ ಅಗತ್ಯ. ಯಾವುದೇ ದೇಶದಲ್ಲಿ ಸಾಧನೆಗೆ ಪೂರಕ ವಾತಾ ವರಣವಿರಬೇಕು. ಸಮಾನ ಚಿಂತನೆಗಳನ್ನು ಹೊಂದಿರುವ ವರ್ಗ ಬೇಕು. ಇದಕ್ಕಾಗಿ ಎಲ್ಲರಲ್ಲೂ ರಾಷ್ಟ್ರ ಭಕ್ತಿ ಜಾಗೃತವಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.