ತ್ಯಾಜ್ಯ ನಿರ್ವಹಣೆಗೆ ಟೆಂಡರ್ ಅಂತಿಮ
ಹೊಸ ಸಂಸ್ಥೆಯ ಹೆಗಲೇರಲಿದೆ ತ್ಯಾಜ್ಯ ನಿರ್ವಹಣೆ
Team Udayavani, Jul 12, 2022, 10:05 AM IST
ಲಾಲ್‌ಬಾಗ್: ಮುಂದಿನ 5 ಅಥವಾ 7 ವರ್ಷದ ಅವಧಿಗೆ ಮಂಗಳೂರಿನ 60 ವಾರ್ಡ್‌ಗಳ ತ್ಯಾಜ್ಯ ನಿರ್ವಹಣೆಗಾಗಿ ಹೊಸ ಟೆಂಡರ್ ಕರೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಒಂದೆ ರಡು ತಿಂಗಳೊಳಗೆ ಹೊಸ ಸಂಸ್ಥೆಗೆ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ದೊರೆ ಯುವ ಸಾಧ್ಯತೆಯಿದೆ.
ತ್ಯಾಜ್ಯ ನಿರ್ವಹಣೆಯ ಕಾರ್ಯ ವಿಧಾನದ ಕುರಿತಾಗಿ ಸರಕಾರದ ಸೂಚನೆ ಮೇರೆಗೆ ಪಾಲಿಕೆಯಿಂದ ಇತ್ತೀಚೆಗೆ ಕಳುಹಿಸಿದ್ದ ಡಿಪಿಆರ್‌ಗೆ ತಾಂತ್ರಿಕ ಸಮಿತಿ ಅನುಮೋದನೆ ನೀಡಿದೆ. ಮುಂದೆ, ಉನ್ನತ ಮಟ್ಟದ ಸಮಿತಿಯಲ್ಲಿ ಪರಿಶೀಲಿಸಿ, ಆರ್ಥಿಕ ಇಲಾಖೆಯಲ್ಲಿ ಅವಲೋಕಿಸಲಾಗುತ್ತದೆ. ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಇದಾಗಿದೆ. ಕೆಲವೇ ದಿನದಲ್ಲಿ ಈ ಪ್ರಕ್ರಿಯೆ ನಡೆದು ಅದರ ವಿವರ ಪಾಲಿಕೆಗೆ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಹೊಸ ಅಂದಾಜುಪಟ್ಟಿ ತಯಾರಿಸಿ ಮತ್ತೂಮ್ಮೆ ಸರಕಾರದಿಂದ ಅನುಮೋದನೆ ಪಡೆದು ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದರಲ್ಲಿ ಅರ್ಹತೆಯಿರುವ ಯಾವು ದೇ ಸಂಸ್ಥೆಗಳು ಭಾಗವಹಿಸಲು ಅವ ಕಾಶವಿದೆ. ಹೀಗಾಗಿ ಮುಂದಿನ ತ್ಯಾಜ್ಯ ನಿರ್ವಹಣೆ ಯಾರ ಹೆಗಲೇರಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಸದ್ಯ ತ್ಯಾಜ್ಯ ನಿರ್ವಹಣೆ ಹಾಗೂ ಹೊಸದಾಗಿ ಟೆಂಡರ್ ಪಡೆಯುವ ಸಂಸ್ಥೆಯ ಜವಾಬ್ದಾರಿ ವ್ಯತ್ಯಾಸ ಇದೆಯೇ? ಎಂಬ ಬಗ್ಗೆ ಸ್ಪಷ್ಟ ಉತ್ತರ ದೊರಕಿಲ್ಲ. ಆರ್ಥಿಕ ಸಭೆಯ ಬಳಿಕ ಇದು ತೀರ್ಮಾನವಾಗಲಿದೆ. ಆದರೆ ಮುಂಬರುವ ಟೆಂಡರ್ ಪಡೆ ಯುವ ಸಂಸ್ಥೆಯಿಂದ ವಾಹನ, ಡ್ರೈವರ್, ಲೋಡರ್ ಅನ್ನು ಮಾತ್ರ ಪಡೆದುಕೊಂಡು, ಪಾಲಿಕೆ ನೇಮಿಸಿದ ಸ್ವತ್ಛತಾ ಕಾರ್ಮಿಕರನ್ನೇ ನಿಯೋಜಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. 2
ಡಿಪಿಆರ್ ಸೇರಿಸಿ ಒಂದೇ ಡಿಪಿಆರ್!
ಮಂಗಳಾ ರಿಸೋರ್ಸ್ ಮ್ಯಾನೇ ಜ್‌ಮೆಂಟ್ ಹಾಗೂ ಪಾಲಿಕೆ ಕಳು ಹಿಸಿದ್ದ ಡಿಪಿಆರ್ ಅನ್ನು ಸರಕಾರಕ್ಕೆ ಕಳುಹಿಸಲಾಗಿತ್ತು. ಇದನ್ನು ಪರಿಶೀ ಲಿಸಿದ ಸರಕಾರ 2 ಡಿಪಿಆರ್‌ನಲ್ಲಿರುವ ಅಂಶಗಳಲ್ಲಿ ಆಯ್ದವುಗಳನ್ನು ಪಡೆದು ಕೊಂಡು ಹೊಸ ಡಿಪಿಆರ್ ಸಿದ್ಧಮಾಡಿ ಕಳುಹಿಸುವಂತೆ ಸರಕಾರ ಪಾಲಿಕೆಗೆ ತಿಳಿಸಿತ್ತು. ಅದರಂತೆ ಒಂದು ಡಿಪಿಆರ್ ಅನ್ನು ಸಿದ್ಧಮಾಡಿ ಸರಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗಿದೆ. ಈ ಮಧ್ಯೆ, ಎಲೆಕ್ಟ್ರಿಕಲ್ ವಾಹನ ಸಹಿತ ವಿಶೇಷ ಸ್ವರೂಪದಲ್ಲಿ ತ್ಯಾಜ್ಯ ನಿರ್ವಹಣೆಗೆ ಮಂಗಳಾದೇವಿ ವಾರ್ಡ್ ಅನ್ನು ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಪ್ರಾಯೋಗಿಕವಾಗಿ ನೀಡಲಾಗಿದ್ದು, ಶೀಘ್ರ ಕಾರ್ಯ ಚಟುವಟಿಕೆ ಆರಂಭವಾಗಲಿದೆ.
ಮನೆ ಮನೆ ಕಸ ಸಂಗ್ರಹಣೆಗೆ ಆ್ಯಂಟೊನಿ ವೇಸ್ಟ್ ಹ್ಯಾಂಡ್‌ಲಿಂಗ್ ಸೆಲ್ ಪ್ರೈ.ಲಿ.ನ 7 ವರ್ಷಗಳ ಅವಧಿ 2022ರ ಜನವರಿಗೆ ಅಂತ್ಯಗೊಂಡಿತ್ತು. ಮುಂದೆ ಹೊಸ ಟೆಂಡರ್ ಆಗುವವರೆಗೆ ಮತ್ತೆ ಆ್ಯಂಟೊನಿ ಸಂಸ್ಥೆಗೆ ಅವಧಿ 2023 ಜ.31ರವರೆಗೆ ವಿಸ್ತರಿಸಲಾಗಿದೆ.
ತ್ಯಾಜ್ಯ ನಿರ್ವಹಣೆಗೆ ಹೆಚ್ಚು ಒತ್ತು ನೀಡುವ ಪಾಲಿಕೆ ತ್ಯಾಜ್ಯ ಸಂಸ್ಕರಣೆಯನ್ನು ವೈಜ್ಞಾನಿಕ ಮಾದರಿಯಲ್ಲಿ ನಡೆಸುವ ಬಗ್ಗೆ ಆದ್ಯತೆ ನೀಡಿದಂತಿಲ್ಲ. ಹೀಗಾಗಿಯೇ ಬಹುಪಾಲು ತ್ಯಾಜ್ಯ ಈಗಲೂ ಭೂಮಿಯೊಳಗೆ ಸೇರಿಕೊಳ್ಳುತ್ತಿದೆ; ಅಂದಹಾಗೆ, ನಗರ ವ್ಯಾಪ್ತಿಯಿಂದ ನಿತ್ಯ ಸುಮಾರು 250-300 ಟನ್ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಇದನ್ನು ಸಂಸ್ಕರಣಾ ಘಟಕಕ್ಕೆ ತಂದು ಸಂಸ್ಕರಿಸಿ ಉಳಿಕೆಯಾಗುವ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲಾಗುತ್ತದೆ. ಇದರ ಹೊರತಾಗಿ ಉಳ್ಳಾಲ, ಬಂಟ್ವಾಳದಿಂದ ನಿತ್ಯ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ನೇರವಾಗಿ ಡಂಪಿಂಗ್ ಯಾರ್ಡ್ ನಲ್ಲಿ ಸುರಿಯಲಾಗುತ್ತದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಸುಮಾರು 77.93 ಎಕರೆ ಜಾಗವಿದೆ. ಇದರಲ್ಲಿ 10 ಎಕರೆ ವ್ಯಾಪ್ತಿಯಲ್ಲಿ ತ್ಯಾಜ್ಯ ತುಂಬಿಸಿ ಅದನ್ನು ಮಣ್ಣು ಹಾಕಿ ಹಲವು ವರ್ಷದ ಹಿಂದೆಯೇ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲಿಯೇ ಸುಮಾರು 12 ಎಕರೆ ಜಾಗದಲ್ಲಿ ಕಳೆದ 12 ವರ್ಷಗಳಿಂದ ತ್ಯಾಜ್ಯ ಸುರಿಯಲಾಗುತ್ತಿದೆ. ಇತ್ತೀಚೆಗೆ ತ್ಯಾಜ್ಯ ಕುಸಿತದ ಪರಿಣಾಮ ಮಂದಾರ ವ್ಯಾಪ್ತಿಯ ಸುಮಾರು 2 ಕಿ.ಮೀ. ಜಾಗವನ್ನು ತ್ಯಾಜ್ಯ ಅಪೋಶನ ಪಡೆದಿದೆ. ಹೀಗೆ ಭೂಮಿ ಸೇರುವ ತ್ಯಾಜ್ಯವನ್ನು ತಡೆಯುವ ವೈಜ್ಞಾನಿಕ ವಿಧಾನ ಈ ಬಾರಿಯಾದರೂ ಬರಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಆ್ಯಂಟನಿ ಸಂಸ್ಥೆಗೆ ಮತ್ತೆ ಅವಕಾಶ?
ಮುಂದಿನ ತ್ಯಾಜ್ಯ ನಿರ್ವಹಣೆಗೆ ಮಂಗಳೂರು ಪಾಲಿಕೆಯಲ್ಲಿ ಹೊಸ ಟೆಂಡರ್ ಕರೆಯುವ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗುತ್ತದೆ. ಟೆಂಡರ್‌ನಲ್ಲಿ ಅರ್ಹತೆ ಇರುವ ಯಾರೂ ಕೂಡ ಭಾಗವಹಿಸಲು ಶಕ್ತರಿರುತ್ತಾರೆ. ತಾಂತ್ರಿಕ ಸಾಮರ್ಥಯ ಪರಿಶೀಲಿಸಿ ಬಳಿಕ ಕಡಿಮೆ ಬಿಡ್ ಮಾಡುವ ಸಂಸ್ಥೆಗೆ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ಸಿಗಲಿದೆ. ಈ ನಿಟ್ಟಿನಲ್ಲಿ ಆ್ಯಂಟನಿ ಸಂಸ್ಥೆಯೂ ಇದರಲ್ಲಿ ಭಾಗವಹಿಸುವ ಸಾಧ್ಯತೆ ಅಧಿಕವಿದೆ ಎನ್ನಲಾಗುತ್ತಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.