ಸ್ವದೇಶದಲ್ಲಿ ಖರ್ಜೂರ ಬೆಳೆದು ಸೈ ಎನಿಸಿಕೊಂಡ ರೈತ
ವಿನೂತನ ಪ್ರಯೋಗಕ್ಕೆ ಕೈ ಹಾಕಿದ ಲಕ್ಷ್ಮೀ ನಾರಾಯಣಪ್ಪ , ಖರೀದಿ ನೆಪದಲ್ಲಿ ಫಸಲು ನೋಡಲು ಮುಗಿಬಿದ ಕೃಷಿಕರು
Team Udayavani, Jul 13, 2022, 12:10 PM IST
ಗುಡಿಬಂಡೆ: ಖರ್ಜೂರ ಎಂದರೆ ವಿದೇಶಗಳಿಂದಲೇ ಬರಬೇಕು ಎನ್ನುವ ಕಾಲದಲ್ಲಿ, ಕೃಷಿಯಲ್ಲಿ ಹೊಸ ಹಾದಿಯನ್ನು ಹುಡಕುತ್ತಾ, ವಿನೂತನ ಪ್ರಯೋಗ ಮಾಡಿರುವ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ರೈತ ಖರ್ಜೂರ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ.
ಈಗಾಗಲೇ ಆಪಲ್, ಡ್ಯಾಗನ್ ಫ್ರೂಟ್, ಖರ್ಜೂರ ಮೊದಲಾದ ವಾಣಿಜ್ಯ ಹಣ್ಣುಗಳನ್ನು ನಾವು ದೇಶ ವಿದೇಶಗಳಲ್ಲಿ ಮಾತ್ರ ಕಾಣಬಹುದಿತ್ತು. ಇತ್ತೀಚಿನ ದಿನಗಳಲ್ಲಿ ರೈತರು ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಅವಲಂಭಿಸದೇ, ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಾ, ಡ್ಯಾಗನ್ ಫ್ರೂಟ್ ಬೆಳಯುವಲ್ಲಿ ಕೆಲವು ರೈತರು ಯಶಸ್ವಿಯಾದರೆ, ಇನ್ನು ಕೆಲವರು ನೇರಳೆ, ಮಾವು ಸೇರಿದಂತೆ ವಿವಿಧ ಬೆಳೆಗಳತ್ತ ಮುಖ ಮಾಡಿದ್ದಾರೆ. ಇಲ್ಲೊಬ್ಬ ರೈತ ಅರಬ್ ರಾಷ್ಟ್ರಗಳಲ್ಲಿ ಬೆಳೆವ ಖರ್ಜೂರಗಳನ್ನು ಗುಡಿಬಂಡೆಯಲ್ಲಿ ಬೆಳೆದು, ಭರಪೂರ ಲಾಭ ಗಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೂ ಹಣ್ಣು ತರಕಾರಿ ಬೆಳೆಗೆ ಖ್ಯಾತಿ, ಆದ್ರೆ ಇತ್ತೀಚಿಗೆ ಸಂಪ್ರದಾಯ ಬದ್ಧ ಬೆಳೆಯಿಂದ ಆದ ನಷ್ಟದ ಮೇಲೆ ನಷ್ಟವನ್ನು ತಡೆದುಕೊಳ್ಳಲಾಗದ ರೈತ ಲಕ್ಷ್ಮೀನಾರಾಯಪ್ಪ ಎಲ್ಲರೂ ಬೆಳೆಯುವ ಬೆಳೆಯನ್ನು ಹೊರತುಪಡಿಸಿ, ಉಷ್ಣ ವಲಯದಲ್ಲಿ ಬೆಳೆಯುವ ಖರ್ಜೂರವನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ತೋಟಕ್ಕೆ ಆಗಮಿಸಿ ಖರೀದಿ: ತಮಿಳುನಾಡಿನಿಂದ ಸುಮಾರು 260 ಕ್ಕೂ ಹೆಚ್ಚು ಗಿಡಗಳನ್ನು ತಂದು 4 ವರ್ಷಗಳ ಹಿಂದೆ ನಾಟಿ ಮಾಡಿದ್ದು, ಇವುಗಳ ಪೈಕಿ ಈಗಾಗಲೇ ಕೆಲವು ಗಿಡಗಳು ಫಸಲು ನೀಡುತ್ತಿವೆ. ಇನ್ನೂ ಕೆಲವು ಫಸಲು ನೀಡಲು ಪ್ರಾರಂಭಿಸಿವೆ. ಈ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿರುವುರಿಂದ, ಸ್ಥಳಿಯರು ಹಾಗೂ ಸುತ್ತಮುತ್ತಲ ತಾಲೂಕಿನವರು ತೋಟಕ್ಕೆ ಬಂದು ಕೆ.ಜಿ.ಗೆ 200 ರಂತೆ ತಾಜಾ ಖರ್ಜೂರವನ್ನು ಖರೀದಿಸುತ್ತಿದ್ದಾರೆ.
ಇನ್ನೂ ಗಿಡಗಳಲ್ಲಿ ಹಳದಿ ಹಾಗೂ ಕೆಂಪು ಬಣ್ಣದ ಖರ್ಜೂರ ಗೊನೆಗಳಿದ್ದು, ಎಲ್ಲರನ್ನು ಆಕರ್ಷಸುತ್ತಿವೆ. ಗ್ರಾಹಕರಂತು ಖರ್ಜೂರ ಖರೀದಿಸುವ ನೆಪದಲ್ಲಿ ಗಿಡಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ.
4 ಎಕರೆಯಲ್ಲಿ ಖರ್ಜೂರ :
ಹೂವು, ತರಕಾರಿ, ಕೃಷಿ ಬೆಳೆಗಳನ್ನು ಬೆಳೆದು ಫಸಲು ಬಂದ ಸಮಯದಲ್ಲಿ ಬೆಲೆಯಿಲ್ಲದೆ, ಬೆಲೆಯಿದ್ದ ಸಮಯದಲ್ಲಿ ಫಸಲು ಭಾರದೆ ಇರುವುದರಿಂದ ಬೆಸತ್ತ ರೈತ ಲಕ್ಷ್ಮೀನಾರಾಯಣಪ್ಪ, ತನಗೆ ಇದ್ದ 10 ಎಕರೆ ಜಮೀನಿನಲ್ಲಿ 4 ಎಕರೆಯಲ್ಲಿ ಖರ್ಜೂರದ ಗಿಡಗಳನ್ನು ಬೆಳೆಸಿ, ಈ ಭಾಗದಲ್ಲೂ ಸಹ ಬೆಳೆಯಬಹುದು ರೈತರಿಗೆ ತೋರಿಸಿಕೊಟ್ಟಿದ್ದಾರೆ.
10 ಎಕರೆ ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆದು ಕೈ ಸುಟ್ಟುಕೊಂಡಿದ್ದು, ಕೃಷಿಯಲ್ಲಿ ಏನಾದರೂ ವಿನೂತನ ಪ್ರಯೋಗ ಮಾಡಬೇಕೆಂಬ ದೃಷ್ಟಿಯಿಂದ ಖರ್ಜೂರ ಬೆಳೆಯಲು ಪ್ರಾರಂಭಿಸಿದೆ. ಕೆಲವು ಖರ್ಜೂರದ ಗಿಡ ಫಸಲು ಬಿಟ್ಟಿದ್ದು, ಮುಂದಿನ ವರ್ಷ ಇನ್ನು ಒಳ್ಳೆಯ ಫಸಲು ಸಿಗುವ ಸಾಧ್ಯತೆಯಿದೆ. – ಲಕ್ಷ್ಮೀನಾರಾಯಣಪ್ಪ, ಖರ್ಜೂರ ಬೆಳೆದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.