ಸಿಕ್ಕ 1.50ಲಕ್ಷ ಠಾಣೆಗೆ ನೀಡಿದ ಮೇಸ್ತ್ರಿ
Team Udayavani, Jul 13, 2022, 2:57 PM IST
ಚಿಂಚೋಳಿ: ವ್ಯಕ್ತಿಯೊಬ್ಬರು ಮಂಗಳವಾರ ಬೆಳಗಿನ ಜಾವ ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲ್ ವೊಂದಕ್ಕೆ ಉಪಹಾರ ಸೇವಿಸಲು ಹೊರಟಿದ್ದಾಗ ಸಿಕ್ಕ 1.50ಲಕ್ಷ ರೂ.ಗಳನ್ನು ಪೊಲೀಸ್ ಠಾಣೆಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಭೀಮಶೆಟ್ಟಿ ಪಾರ ಎನ್ನುವರ ಬಳಿ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿರುವ ಮೇಸ್ತ್ರಿ ಶರಣು ನಿರ್ಣಾ ಎನ್ನುವರು ರಸ್ತೆಯಲ್ಲಿ ಹೋಗುವಾಗ ಈ ಹಣದ ಚೀಲ ದೊರೆತಿತ್ತು. ಪಟ್ಟಣದ ಶೆಳ್ಳಗಿ ಡ್ರೆಸ್ಸೆಸ್ ಮಾಲೀಕ ಲೋಕೇಶ ಶೆಳ್ಳಗಿ ಎನ್ನುವರು ಮಳೆಯಲ್ಲೇ ಬೈಕ್‌ನಲ್ಲಿ ಬ್ಯಾಂಕ್‌ಗೆ ಹಣ ತುಂಬಲು ಹೊರಟಿದ್ದಾಗ ಅದು ಕೆಳಕ್ಕೆ ಬಿದ್ದಿತ್ತು. ಆ ನಂತರ ಬ್ಯಾಂಕ್‌ನಲ್ಲಿ ಹಣದ ಚೀಲ ಇಲ್ಲದ್ದನ್ನು ಗಮನಿಸಿದ ಶೆಳ್ಳಗಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಇದೇ ವೇಳೆ ಶರಣು ನಿರ್ಣಾ ಠಾಣೆಗೆ ಆಗಮಿಸಿ ಹೆಡ್ ಕಾನಸ್ಟೆಬಲ್ ಗೌರಿಶಂಕರ ಅವರಿಗೆ ನೀಡಿದರು.
ಪ್ರಮಾಣಿಕತೆ ಮೆರೆದ ಶರಣು ನಿರ್ಣಾ ಅವರಿಗೆ ಪೊಲೀಸರ ಸಮ್ಮುಖದಲ್ಲಿ ಲೋಕೇಶ ಶೆಳ್ಳಗಿ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು. ಪಿಎಸ್‌ಐ ಮಂಜುನಾಥರೆಡ್ಡಿ, ಡಿವೈಎಸ್ಪಿ ಕಚೇರಿ ಹೆಡ್ ಕಾನಸ್ಟೆಬಲ್ ರೇವಣಸಿದ್ಧ ಹೂವಿನಭಾವಿ, ಸಿಬ್ಬಂದಿಗಳಾದ ಶಿವಾನಂದ ಮತ್ತು ಶಿಲ್ಪಕಲಾ,ನಾಗರಾಜ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.