ಐಸಿಎಂಆರ್‌ನಿಂದ 54 ಸಾಮಾನ್ಯ ರೋಗಗಳ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ
Team Udayavani, Jul 14, 2022, 6:50 AM IST
ನವದೆಹಲಿ:ಒಟ್ಟು 11 ವೈದ್ಯಕೀಯ ಶಾಖೆ(ಸ್ಪೆಷಾಲ್ಟಿ)ಗಳ 54 ಸಾಮಾನ್ಯ ಕಾಯಿಲೆಗಳಿಗೆ ವೈದ್ಯರು ನೀಡಬಹುದಾದ ಹೊಸ ಚಿಕಿತ್ಸಾ ಮಾರ್ಗಸೂಚಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಬುಧವಾರ ಬಿಡುಗಡೆ ಮಾಡಿದೆ. ಇದರ ಜೊತೆಗೆ ಮೊಬೈಲ್ ಆ್ಯಪ್‌ವೊಂದನ್ನೂ ಅನಾವರಣ ಮಾಡಲಾಗಿದೆ.
ಸಾರ್ವಜನಿಕ ಆರೋಗ್ಯಸೇವೆಯ ಎಲ್ಲ ಹಂತಗಳಲ್ಲೂ ಫಿಸೀಷಿಯನ್‌ಗಳು ಇದನ್ನು ಬಳಸಬಹುದು ಎಂದು ಐಸಿಎಂಆರ್ ತಿಳಿಸಿದೆ.
“ಸ್ಟಾಂಡರ್ಡ್ ಟ್ರೀಟ್‌ಮೆಂಟ್ ವರ್ಕ್‌ಫ್ಲೋಸ್’ನ 3ನೇ ಸಂಪುಟದಲ್ಲಿ ಔಷಧಗಳ ಅನಿಯಮಿತ ಬಳಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಂಶಗಳಿವೆ. ಚರ್ಮರೋಗ, ಅಂತಃಸ್ರಾವ ಶಾಸ್ತ್ರ, ಗ್ಯಾಸ್ಟ್ರೋ ಎಂಟರಾಲಜಿ, ಜನರಲ್ ಸರ್ಜರಿ, ನವಜಾತಶಾಸ್ತ್ರ, ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ ಸೇರಿದಂತೆ 11 ಶಾಖೆಗಳಿಗೆ ಸಂಬಂಧಿಸಿದ 54 ಕಾಯಿಲೆಗಳಿಗೆ ನೀಡಬಹುದಾದ ಚಿಕಿತ್ಸಾ ವಿಧಾನಗಳು ಇದರಲ್ಲಿವೆ.
2019ರಲ್ಲಿ ಐಸಿಎಂಆರ್ 53 ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಮಾರ್ಗಸೂಚಿಯುಳ್ಳ ಮೊದಲ ಸಂಪುಟವನ್ನು, ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದ 18 ಕಾಯಿಲೆಗಳಿಗೆ ಚಿಕಿತ್ಸಾ ಮಾರ್ಗಸೂಚಿಯುಳ್ಳ 2ನೇ ಸಂಪುಟವನ್ನು ಬಿಡುಗಡೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.