ಮಹಾರಾಷ್ಟ್ರಕ್ಕೆ ಅಪ್ಪಳಿಸಿದ ಮಳೆ: ಪಾಲ್ಘರ್, ನಾಸಿಕ್‌ನಲ್ಲಿ ಭೂಕುಸಿತ, ರೆಡ್ ಅಲರ್ಟ್
ಗುಜರಾತ್, ನವದೆಹಲಿ, ತೆಲಂಗಾಣ, ಹಿ. ಪ್ರದೇಶದಲ್ಲೂ ಭಾರಿ ಮಳೆ
Team Udayavani, Jul 13, 2022, 10:31 PM IST
ನವದೆಹಲಿ/ಮುಂಬೈ: ರಾಷ್ಟ್ರರಾಜಧಾನಿ ನವದೆಹಲಿ, ಮಹಾರಾಷ್ಟ್ರ, ಗುಜರಾತ್, ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ.
ಮಂಗಳವಾರ-ಬುಧವಾರ ನಡುವಿನ 24 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ 18 ಮಂದಿ ಮಳೆ ಸಂಬಂಧಿತ ಅವಗಢಗಳಲ್ಲಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್, ನಾಸಿಕ್‌ಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅತ್ತ, ಗುಜರಾತ್, ನವದೆಹಲಿ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಾಲ್ಗಾರ್, ನಾಸಿಕ್‌ಗೆ “ರೆಡ್ ಅಲರ್ಟ್’
ಮಹಾರಾಷ್ಟ್ರದ ಪಾಲ್ಗಾರ್, ನಾಸಿಕ್‌ಗಳಲ್ಲಿ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆಗಳಿವೆ ಎಂದಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಜೊತೆಗೆ, ಮುಂದಿನ ಮೂರು ನಾಲ್ಕು ದಿನಗಳವರೆಗೆ ಮುಂಬೈ, ಥಾಣೆ ಸೇರಿ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪಾಲ್ಗಾರ್ ಜಿಲ್ಲೆಯ ವಾಸೈ ಎಂಬ ಕಡೆ ಸಂಭವಿಸಿದ ಭೂಕುಸಿತದಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿದ್ದಾರೆ.
ಪುಣೆಯಲ್ಲಿ ಮುಥಾ ನದಿಯಲ್ಲಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದಾರೆ. ನಾಸಿಕ್ ಜಿಲ್ಲೆಯಲ್ಲಿ ವಿವಿಧ ಘಟನೆಗಳಲ್ಲಿ ಆರು ಜನರು ನದಿ ಅಥವಾ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆಗಳು ಜರುಗಿವೆ. ಇದರೊಂದಿಗೆ, ಈ ಬಾರಿಯ ಮಳೆಯಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 89ಕ್ಕೇರಿದೆ.
ಮುಂಬೈ ಹಾಗೂ ಅದರ ಸುತ್ತಲಿನ ಸ್ಥಳಗಳಲ್ಲಿ ಏಕಾಏಕಿ ಸುರಿದ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಭಾರೀ ತೊಂದರೆ ಉಂಟಾಗಿದೆ. ರೈಲು, ಬಸ್ಸುಗಳ ಸಂಚಾರಕ್ಕೂ ಅಡಚಣೆಯಾಗಿದ್ದು ಜನರು ಪರದಾಡುವಂತಾಗಿದೆ. ಗಾಡಿcರೋಲಿಯಲ್ಲಿ 24 ಗಂಟೆಗಳಲ್ಲಿ 97.1 ಮಿ.ಮೀಟರ್ ಮಳೆಯಾಗಿದ್ದು, ಸುಮಾರು 2000 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜು. 16ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಂಗೋಲಿ ಜಿಲ್ಲೆಯ ಕುರುಂಡಾ ಎಂಬ ಹಳ್ಳಿಯು ಜಲಾವೃತ ವಾಗಿರುವುದರಿಂದ ನಾಲ್ಕು ದಿನಗಳಿಂದ ಊಟವಿಲ್ಲದೆ ಜನರು ಪರದಾಡುವಂಥ ಪರಿಸ್ಥಿತಿ ಬಂದೊದಗಿದೆ.
ಗುಜರಾತ್‌ನ ನವಾÕರಿಯಲ್ಲಿ ಅತಂತ್ರ ಪರಿಸ್ಥಿತಿ
ಗುಜರಾತ್‌ನ ರಂಗೂನ್ ನಗರ್, ಭಾರೀ ಮಳೆ ಸುರಿದಿದ್ದು ಅನೇಕ ಸ್ಥಳಗಳು ಜಲಾವೃತವಾಗಿವೆ. ಇದರಿಂದಾಗಿ, ಸಾವಿರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸ್ಥಳಕ್ಕೆ ಧಾವಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜ್‌ಕೋಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನ್ಯಾರಿ ಅಣೆಕಟ್ಟು ತುಂಬಿ ಹೊರಹರಿಯುತ್ತಿದೆ.
ಹಿ. ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತ
ಹಿಮಾಚಲ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನಾಲಿಯ ಪ್ರಮುಖ ಬಸ್‌ಸ್ಟಾಂಡ್ ಜಲಾವೃತವಾಗಿದೆ. ಹಲವಾರು ಬಸ್‌ಗಳು ಪ್ರವಾಹದ ನೀರಿನಿಂದಾಗಿ ಕೊಚ್ಚಿ ಹೋಗಿ ಜಖಂಗೊಂಡಿವೆ. ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.
ದೆಹಲಿಯಲ್ಲೂ ಜನಜೀವನ ತತ್ತರ
ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಎನ್‌ಸಿಆರ್ ಪ್ರಾಂತ್ಯದಲ್ಲಿ ಬುಧವಾರದಂದು ಭಾರೀ ಮಳೆಯಾಗಿದೆ. ಎನ್‌ಸಿಆರ್ ಪ್ರಾಂತ್ಯದ ಲೋನಿ ದೆಹಾತ್, ಹಿಂಡಾನ್ ಎಎಫ್ ಸ್ಟೇಷನ್, ಗಾಜಿಯಾಬಾದ್, ಇಂದಿರಾಪುರಂ, ಛಪ್ರೌಲಾ, ನೊಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾದಲ್ಲಿ ಭಾರೀ ಮಳೆಯಾಗಿದೆ. ನವದೆಹಲಿಗೆ ಹತ್ತಿರವಾಗಿರುವ ಹರ್ಯಾಣದ ನರ್ವಾಣಾ, ಬರ್ವಾಲಾ, ಚಕ್ರಿ ದಾದ್ರಿ, ಮಟ್ಟನ್‌ಹಾಯ್ಲಿ, ಝಜ್ಜರ್, ಫಾರೂಖ್ ನಗರ್, ಕೊಸಾಲಿ, ಮಹೇಂದರ್ ಗಢ (ಹರ್ಯಾಣ), ನಾಜಿಯಾಬಾದ್, ಬಿಜಾ°ರ್, ಚಂದಾಪುರ, ಅನ್ರೋಹಾ (ಉತ್ತರ ಪ್ರದೇಶ) ಮುಂತಾದೆಡೆ ಭಾರೀ ಮಳೆಯಾಗಿದೆ.
ಅಮರನಾಥ ಯಾತ್ರೆ ಪುನಃ ಸ್ಥಗಿತ
ಇತ್ತೀಚೆಗಷ್ಟೇ ಪುನರಾರಂಭಗೊಂಡಿದ್ದ ಅಮರನಾಥ ಯಾತ್ರೆ ಪುನಃ ಸ್ಥಗಿತಗೊಂಡಿದೆ. ಬೇಸ್‌ಕ್ಯಾಂಪ್‌ಗ್ಳಿರುವ ಪ್ರಾಂತ್ಯಗಳಲ್ಲಿ ಅತೀವ ಮಳೆಯಾಗಿ, ಪ್ರವಾಹದಂಥ ಪರಿಸ್ಥಿತಿ ಉಂಟಾಗಿರುವುದು ಹಾಗೂ ಬೇಸ್‌ಕ್ಯಾಂಪ್‌ಗ್ಳಿಗೂ ನೀರು ನುಗ್ಗಿ ಅಲ್ಲಿದ್ದ ಯಾತ್ರಾರ್ಥಿಗಳಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಬದ್ರಿನಾಥ್ ಹೈವೇ ಬಂದ್: ಉತ್ತರಾಖಾಂಡದ ಚಮೋಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವಾರು ಕಡೆ ಭೂಕುಸಿತ ಉಂಟಾಗಿದೆ. ಬದ್ರಿನಾಥ್ ಹೆದ್ದಾರಿಯ ಅಲ್ಲಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಆ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.