ಸುರಕ್ಷತಾ ಕ್ರಮಗಳು ಅನುಸರಿಸದ ಕೈಗಾರಿಕಾ ಘಟಕಗಳು

ಪ್ರಾಣ ಹಾನಿ ಸಂಭವಿಸುತ್ತಿದ್ದರೂ ಸುರಕ್ಷತೆಗೆ ನೀಡುತ್ತಿಲ್ಲ ಮಹತ್ವ!

Team Udayavani, Jul 14, 2022, 1:14 PM IST

9factory

ಹುಮನಾಬಾದ: ಕೈಗಾರಿಕಾ ಪ್ರದೇಶದಲ್ಲಿ ಔಷಧ ತಯಾರಿಸುವ ಕಾರ್ಖಾನೆಗಳಲ್ಲಿ ಪ್ರಮಾಣಿತ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ಕಾರ್ಖಾನೆಗಳ ಮಾಲೀಕರು ಹಾಗೂ ಸೂಕ್ತ ಸಮಯಕ್ಕೆ ಪರಿಶೀಲನೆ ನಡೆಸದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವೈಫಲ್ಯದಿಂದಾಗಿ ಕೈಗಾರಿಕಾ ಪ್ರದೇಶದಲ್ಲಿ ಮತ್ತೊಂದು ಅವಘಡ ಸಂಭವಿಸಿದ ಪರಿಣಾಮ ಬುಧವಾರ ಕೇಮಿಸ್ಟ್ ನೊಬ್ಬನ ಸಾವು ಸಂಭವಿಸಿದೆ.

ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಸ್ಯೂಟಿಕ್ ಲ್ಯಾಬ್ ಕಾರ್ಖಾನೆಯಲ್ಲಿ ಕೆಮಿಕಲ್ ಮಿಶ್ರಣ ಸಂದರ್ಭದಲ್ಲಿ ಅವಘಡ ಸಂಭವಿಸಿದ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಪಟ್ಟಣಪೊಡಿ ಗ್ರಾಮದ ನಿವಾಸಿ ಗುರುಪ್ರಸಾದ ಮೃತಪಟ್ಟಿದ್ದಾನೆ.

ಗುರುಪ್ರಸಾದ ಕಳೆದ 25 ವರ್ಷಗಳಿಂದ ವಿವಿಧಡೆ ಕೇಮಿಸ್ಟ್ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಪುಣೆ, ಗೋವಾ ಹಾಗೂ ಕರ್ನಾಟಕದಲ್ಲಿ ಕೂಡ ಕೆಲಸ ಮಾಡಿದ್ದಾನೆ. ಇದೇ ತಿಂಗಳು ಹುಮನಾಬಾದ ಸ್ಯೂಟಿಕ್ ಲ್ಯಾಬ್‌ನಲ್ಲಿ ಕೆಲಸಕ್ಕೆ ಬಂದಿದ್ದು, ಸುರಕ್ಷತೆ ಇಲ್ಲದ ಕಾರಣಕ್ಕೆ ಅವಘಡ ಸಂಭವಿಸಿ ಪ್ರಾಣ ಹಾನಿ ಸಂಭವಿಸಿರಬೇಕು ಎಂದು ಮೃತವ್ಯಕ್ತಿಯ ಸಹೋದರ ದೀಪಕ್‌ ಅಳಲು ತೊಡಿಕೊಂಡಿದ್ದಾರೆ. ಅಲ್ಲದೆ, ಕಾರ್ಖಾನೆಯಲ್ಲಿ ಸ್ವಸ್ಥಗೊಂಅಡಿದ ವಿಷ್ಣು, ಶಂಭೂ ಶರ್ಮಾ, ಗಿರೀಶ ರೆಡ್ಡಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಸುರಕ್ಷತೆ ಹೆಚ್ಚು: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ 20ಕ್ಕೂ  ಅಧಿಕ ರಾಸಾಯನಿಕ, ಬಹು ಔಷಧಿಗಳ ತಯಾರಿಸುವ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಕೆಲ ವರ್ಷಗಳಿಂದ ನಿರಂತವಾಗಿ ಇಲ್ಲಿನ ಕಾರ್ಖಾನೆಗಳಲ್ಲಿ ಅವಘಡಗಳು ಸಂಭವಿಸುತ್ತಿವೆ. ಈ ಹಿಂದೆ ಎಸ್.ಕೆ ಆರ್ಗ್ಯಾನಿಕ್ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಪೋಟದಿಂದ ಕೇಮಿಸ್ಟ್ ವೆಂಕಟೇಶ ಮೃತಪಟ್ಟಿದ್ದರು. ಈ ಘಟನೆ ಇಡೀ ಹುಮನಾಬಾದ ಹಾಗೂ ಸುತ್ತಲ್ಲಿನ 15 ಕಿ.ಮಿ ದೂರದ ವರೆಗಿನ ಜನರಿಗೆ ಆತಂಕ ಉಂಟುಮಾಡಿತ್ತು. ಸ್ಪೋಟದ ತೀವ್ರತೆಯಿಂದ ಸುತ್ತಲ್ಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದ ಸದ್ದು ಹಾಗೂ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು.

ಅದೇ ರೀತಿ ಗ್ರೀಸ್ ತಯಾರಿಸುವ, ಕಬ್ಬಿಣ ತಯಾರಿಸುವ, ಆರ್ಗ್ಯಾನಿಯ ಉತ್ಪನಗಳು ತಯಾರಿಸುವ ಕಾರ್ಖಾನೆಗಳಲ್ಲಿ ಅನೇಕ ಅವಘಡಗಳು ಸಂಭವಿಸಿದ ಉದಾಹರಣೆಗಳು ಇಲ್ಲಿವೆ. ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಭೇಟಿ ನೀಡುವ ಸಂದರ್ಭದಲ್ಲಿ ಕಾರ್ಖಾನೆಗಳ ಮುಖಂಡರು ಅನುರಿಸುವ ವಿವಿಧ ಸುರಕ್ಷತಾ ಕ್ರಮಗಳನ್ನು ಪ್ರತಿ ದಿನ ಎಲ್ಲಾ ಸಿಬ್ಬಂದಿಗಳಿಗೆ ಪರಿಕರಗಳು ನೀಡಿದರೆ ಇಂತಹ ಘಟನೆಗಳು ಘಟಿಸಿದರೂ ಪ್ರಾಣ ಹಾನಿ ಸಂಭವಿಸುವುದು ವಿರಳ ಎನ್ನುತ್ತಾರೆ ಕಾರ್ಖಾನೆಗಳ ಕಾರ್ಮಿಕರು.

ಇದನ್ನೂ ಓದಿ: ಪ್ರಾಣಿಗಳಿಗೂ ಬರಲಿಗೆ ಸ್ಮಾರ್ಟ್‌ ವಾಚ್‌

ಜೀವಕ್ಕೆ ಇಲ್ಲ ಬೆಲೆ; ಇಲ್ಲಿನ ಕಾರ್ಖಾನೆಗಳು ಮನುಷ್ಯನ ಜೀವಕ್ಕೆ ಬೆಲೆ ಇಲ್ಲದ ಹಾಗೆ ಕೆಲಸ ನಿರ್ವಹಿಸುತ್ತಿವೆ ಎಂಬ ಆರೋಪಗಳು ಇವೆ. ಕಾರ್ಖಾನೆಗಳ ಒಳಗೆ ಕೆಲಸ ಮಾಡುವವರಿಗೂ ಸುರಕ್ಷತೆ ಇಲ್ಲ. ಕಾರ್ಖಾನೆಗಳಿಂದ ಹೊರ ಬರುವ ತ್ಯಾಜ್ಯದಿಂದ ಸುತ್ತಲ್ಲಿನ ಲಕ್ಷಾತಂರ ಜನರಿಗೂ ನೆಮ್ಮದಿ ಇಲ್ಲದಂತಾಗಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯದಿಂದ ಜನ-ಜಾನುವಾರುಗಳು ಸಂಕಷ್ಟ ಎದುರಿಸುತ್ತಿದ್ದರು ಕೂಡ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ಕಾನೂನು ಮೀರುವ ಕಾರ್ಖಾನೆಗಳ ವಿರುದ್ದ ದಿಟ್ಟ ಕ್ರಮ ತೆಗೆದುಕೊಂಡ ಉದಾಹರಣೆಗಳು ಇಲ್ಲ. ಒಟ್ಟಾರೆ ಹಣ ಗಳಿಸುವ ಏಕಮಾತ್ರ ಉದ್ದೇಶದಿಂದ ಮನುಷ್ಯ ಜೀವಗಳಿಗೆ ಉಳ್ಳುವರು ಬೆಲೆ ನೀಡುತ್ತಿಲ್ಲ ಎಂದು ಮಾಜಿ ತಾಪಂ ಸದಸ್ಯ ಗಜೇಂದ್ರ ಕನಕಟ್ಟಕರ್  ಆರೋಪಿಸುತ್ತಿದ್ದಾರೆ.

ಜಿಲ್ಲಾಧಿಕಾರಿ-ಎಸ್ಪಿ ಭೇಟಿ

ಘಟನೆಯ ಮಾಹಿತಿ ಪಡೆದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಬೀದರ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಬುಧವಾರ ರಾತ್ರಿ ಔಷಧಿ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೆಮಿಕಲ್ ಮಿಕ್ಸ್ ಪ್ರೋಸೆಸ್ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಇದರಿಂದ ಸುತ್ತಲ್ಲಿನ ಪ್ರದೇಶದಲ್ಲಿ ಯಾವುದೇ ಆತಂಕ ಉಂಟುಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ಸಂಭವಿಸಿದ್ದು ಹೇಗೆ ?

ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ಕಲಬುರಗಿ  ಅವರ ಪ್ರಾಥಮಿಕ ವರದಿ ಪ್ರಕಾರ ಸ್ಪೂಟಿಕ್ ಲ್ಯಾಬ್ ಉತ್ಪಾದಕ ಘಟಕ 1ರಲ್ಲಿ ರಿಯಾಕ್ಟ್ರ್ ನಲ್ಲಿ ಗ್ಯಾಸ್ ಲೀಕ್ ಆಗಿ ಅವಘಡ ಸಂಭವಿಸಿದೆ. ನಿಗದಿತ ಪ್ರಮಾಣದ ಕೆಮಿಕಲ್ ನಿಗದಿತ ಅವಧಿಯಲ್ಲಿ ಬಳಸುವ ಬದಲಿಗೆ ಕಡಿಮೆ ಅವಧಿಯಲ್ಲಿ ಬಳಸಿದ ಕಾರಣಕ್ಕೆ ರಿಯಾಕ್ಟರ್ ನಲ್ಲಿ ಒತ್ತಡ ಹೆಚ್ಚಾಗಿದ ಕಾರಣಕ್ಕೆ ನಾಲ್ಕು ಜನರು ಅಸ್ವಸ್ತಗೊಂಡಿದ್ದಾರೆ ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ ಎಂದು -ಜಿಲ್ಲಾಧಿಕಾರಿಗಳಿಗರ ವರದಿ ಸಲ್ಲಿಸಿದ್ದಾರೆ.

-ದುರ್ಯೋಧನ ಹೂಗಾರ 

ಟಾಪ್ ನ್ಯೂಸ್

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Hubli; CM-DCM issue not to be debated on sidewalks: RB Thimmapura

Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ

ಪ್ರಹ್ಲಾದ ಜೋಶಿ

Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು

rape

Bidar; 9 ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

Chaluvarayaswamy

Farmers; ಬೆಳೆ ವಿಮೆ ‘ಷರತ್ತು’ ಬದಲಾವಣೆ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

Swamijis should talk to High command about CM change: Chaluvarayaswamy

CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ‌

Bidar; I was defeated for our selfishness says Bhagwanth Khuba

Bidar; ನಮ್ಮವರ ಸ್ವಾರ್ಥಕ್ಕಾಗಿ ನನಗೆ ಸೋಲಾಯಿತು…: ಭಗವಂತ ಖೂಬಾ ಬೇಸರ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.