ಸೈಕಲ್‌ ಸಂಚಾರದ “ಓಣಿ ರಸ್ತೆ’ಗೆ ಕೆಂಪು ಡಾಮರು!

ಆಕರ್ಷಕವಾಗಿ ಕಾಣಿಸಲಿವೆ ನಗರದ ಒಳ ರಸ್ತೆಗಳು

Team Udayavani, Jul 14, 2022, 2:05 PM IST

10

ಓಣಿಕೆರೆ: ಕಪ್ಪು ಟಾರು ರಸ್ತೆ, ಮಣ್ಣಿನ ಕಚ್ಚಾ ರಸ್ತೆ, ಕಾಂಕ್ರೀಟ್‌ ರಸ್ತೆ ಇವೆಲ್ಲ ನೋಡಿದ್ದೇವೆ. ಈಗ ಮಂಗಳೂರಿನ ಕೆಲವೆಡೆ ಜನರಿಗೆ ಇನ್ನು ಮುಂದೆ ಕೆಂಪು ಬಣ್ಣದ ಡಾಮರು ರಸ್ತೆಯನ್ನೂ ಕಾಣಬಹುದು!

ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಕೆಲವು ಓಣಿಗಳಲ್ಲಿರುವ ಡಾಮರು ರಸ್ತೆಯು ಕೆಂಪು ಬಣ್ಣದಿಂದ ಕಂಗೊಳಿಸಲಿದೆ. ಯಾಕೆಂದರೆ; ಸ್ಮಾರ್ಟ್‌ಸಿಟಿಯಲ್ಲಿ ಸೈಕಲ್‌ ಟ್ರ್ಯಾಕ್‌ ಯೋಜನೆಗೆ ಗುರುತಿಸಲಾದ ರಸ್ತೆ ಕೆಂಪು ಬಣ್ಣದಲ್ಲಿರಲಿದೆ. ನಗರದ ಮೋರ್ಗನ್ಸ್‌ಗೇಟ್ ನ ಓಣಿಕೆರೆಯಲ್ಲಿ ಕೆಲವು ಮೀಟರ್‌ವರೆಗೆ ಸದ್ಯ ಇಂತಹ ಡಾಮರು ಹಾಕಲಾಗಿದೆ.

ಸೈಕಲ್‌ ಟ್ರ್ಯಾಕ್‌ಗೆ ಸಂಬಂಧಿಸಿ ಅಂತಾರಾಷ್ಟ್ರೀಯ ನಿಯಮಾವಳಿಯ ಪ್ರಕಾರ ಬಣ್ಣದ ರಸ್ತೆಗೆ ಉದ್ದೇಶಿಸಲಾಗಿದೆ. ಇದನ್ನು ʼಪಿಗ್ಮೆಂಟೆಡ್‌ ಸೈಕಲ್‌ ಟ್ರ್ಯಾಕ್‌ ‘ ಎಂದು ಕರೆಯುತ್ತಾರೆ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಡೈರಕ್ಟರೇಟ್‌ ಆಫ್‌ ಅರ್ಬನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ ವತಿಯಿಂದ ಮಂಗಳೂರಿನಲ್ಲಿ ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ.

ನಗರದ ಓಣಿಗಳು, ರಸ್ತೆ ಬದಿಗಳಲ್ಲಿ ಟ್ರ್ಯಾಕ್‌ ಸಾಗಲಿದೆ. ಬೋಳಾರ ಬೋಟ್‌ ರಿಪೇರಿ ಯಾರ್ಡ್‌ನಿಂದ ಟಿಎಂಎ ಪೈ ಕನ್ವೆನ್ಶನ್‌ ಸಭಾಂಗಣದವರೆಗೆ ಹಾಗೂ ಮಾರ್ನಮಿಕಟ್ಟೆಯಿಂದ ಮತ್ತೂಂದು ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ.

ಕೆಂಪು, ಹಳದಿ ಎಂಬ ಎರಡು ಪ್ರತ್ಯೇಕ ಪಥವಿರಲಿವೆ. ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದ್ದು, ಇದು ನಗರದ ಓಣಿ ರಸ್ತೆಗಳಲ್ಲಿ ಸಾಗಲಿದೆ.

ʼಓಣಿ’ಗಳಿಗೆ ಹೊಸ ರೂಪ

ಹಳದಿ ಪಥ ಸುಮಾರು 4 ಕಿ.ಮೀ. ಇರಲಿದೆ. ಇದು ರಸ್ತೆ ಬದಿಯಲ್ಲಿ ಸಾಗಲಿದೆ. ನಗರದೊಳಗೆ ಅಲ್ಲಲ್ಲಿ ಇರುವ ಓಣಿಗಳನ್ನೇ ಸೈಕಲ್‌ ಪಥಗಳಾಗಿ ಮಾಡ ಲಾಗುತ್ತದೆ. ಈ ಪರಿಕಲ್ಪನೆಯಲ್ಲಿ ಮೂಡಿರುವುದೇ ಸೈಕಲ್‌ ಓಣಿ ಯೋಜನೆ. ನಮ್ಮಲ್ಲಿರುವ ಹಳೆಯ, ಜನರು ಕಾಲ್ನಡಿಗೆಗೆ ಬಳಸುವಂತಹ ಸುವ್ಯವಸ್ಥಿತ ಓಣಿಗಳು ಅದೃಷ್ಟವಷಾತ್‌ ಇನ್ನೂ ಉಳಿದುಕೊಂಡಿವೆ. ಇಲ್ಲಿ ಹೆಚ್ಚು ವಾಹನಗಳ ಭರಾಟೆಯಿಲ್ಲ; ಅವುಗಳನ್ನು ಬಳಸಿದರೆ ಸುರಕ್ಷಿತವಾಗಿ ಸೈಕಲ್‌ನಲ್ಲಿ ತೆರಳುವುದು ಸಾಧ್ಯ.

ಸೈಕಲ್‌ ಲೇನ್‌ಗಳನ್ನು ವಿದ್ಯಾರ್ಥಿಗಳೂ ಸಹಿತ ನಾಗರಿಕರು ಬಳಸಬಹುದಾಗಿದೆ. ಈ ಮೂಲಕ ನಗರದ ವಾಹನದಟ್ಟಣೆ ಕಡಿಮೆಗೊಳಿಸುವುದು, ಪರಿಸರ ಮಾಲಿನ್ಯ ಮುಕ್ತಗೊಳಿಸುವುದು ಗುರಿ.

ಉದ್ದೇಶಿತ ಸೈಕಲ್‌ ಟ್ರ್ಯಾಕ್‌ ರೂಟ್‌

*ಬೋಳಾರ ಬೋಟ್‌ ರಿಪೇರ್‌ ಯಾರ್ಡ್‌-ಕಾಸಿಯ ಸ್ಕೂಲ್‌-ಮಣಿಪಾಲ್‌ ಸ್ಕೂಲ್‌-ರೈಲ್ವೇ ನಿಲ್ದಾಣ-ಪುರಭವನ-ಸೆಂಟ್ರಲ್‌ ಮಾರುಕಟ್ಟೆ-ರಥಬೀದಿ ಹೂವಿನ ಮಾರುಕಟ್ಟೆ-ಬಿಇಎಂ ಶಾಲೆ-ಕೆನರಾ ಶಾಲೆ-ಶಾರದಾ ವಿದ್ಯಾಲಯ-ಕೆನರಾ ಕಾಲೇಜು-ಎಸ್‌ಡಿಎಂ ಕಾಲೇಜು-ಟಿಎಂಎ ಪೈ ಕನ್ವೆನ್ಷನ್‌ ಸೆಂಟರ್‌-ಶ್ರೀ ದೇವಿ ಕಾಲೇಜು

*ಮಾರ್ನಮಿಕಟ್ಟೆ ರೈಲ್ವೇ ಓವರ್‌ ಬ್ರಿಡ್ಜ್- ಸೈಂಟ್‌ ಜೋಸೆಫ್‌ ಕಾಲೇಜು-ರೋಶನಿ ನಿಲಯ-ಹೈಲ್ಯಾಂಡ್‌ ಕಾಫಿ ವರ್ಕ್‌-ತೆರಿಗೆ ಕಚೇರಿ.

ಏನಿದು ಬಣ್ಣದ ರಸ್ತೆ?

ಡಾಮರು ಸಿದ್ಧಪಡಿಸುವಾಗಲೇ ಅದಕ್ಕೆ  ʼಪಿಗ್ಮೆಂಟೆಡ್‌ʼಎಂಬ ಕೆಮಿಕಲ್‌ ಸೇರಿಸಲಾಗುತ್ತದೆ. ಈ ಮೂಲಕ ಡಾಮರಿನ ಬಣ್ಣ ಬದಲಾಗುತ್ತದೆ. ಈ ಬಣ್ಣ ಮಳೆ-ಬಿಸಿಲಿಗೂ ಹೋಗುವುದಿಲ್ಲ. ಶಾಶ್ವತವಾಗಿ ಇರುತ್ತದೆ. ಈ ರಸ್ತೆಗಳು ಇತರ ರಸ್ತೆಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಸದ್ಯ ಓಣಿಕೆರೆಯಲ್ಲಿ ಇಂತಹ ರಸ್ತೆ ನಿರ್ಮಿಸಲಾಗಿದೆ. ಮುಂದೆ ಇದನ್ನು ಉಳಿದ ಕಡೆಯಲ್ಲಿಯೂ ಜಾರಿ ಮಾಡಲಾಗುತ್ತದೆ ಎನ್ನುತ್ತಾರೆ ಸ್ಮಾರ್ಟ್‌ ಸಿಟಿ ಜನರಲ್‌ ಮ್ಯಾನೇಜರ್‌ ಅರಣ್‌ ಪ್ರಭ.

ಆಕರ್ಷಕ ರಸ್ತೆ: ನಗರದ ಪ್ರಮುಖ ರಸ್ತೆಗಳಲ್ಲಿನ ವಾಹನದ ಭರಾಟೆಯಲ್ಲಿ ಸೈಕಲ್‌ ಬಳಸುವವರಿಗೆ ಜಾಗವಿಲ್ಲದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎರಡು ಕಡೆಗಳಲ್ಲಿ ಪ್ರತ್ಯೇಕ ಸುಸಜ್ಜಿತ ಸೈಕಲ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ಆಕರ್ಷಕವಾಗಿ ಮಾಡುವ ಕಾರಣದಿಂದ ರಸ್ತೆಗೆ ಕೆಂಪು ಬಣ್ಣ ಇರುತ್ತದೆ.  – ಪ್ರೇಮಾನಂದ ಶೆಟ್ಟಿ, ಮೇಯರ್‌ ಪಾಲಿಕೆ

 

ಟಾಪ್ ನ್ಯೂಸ್

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.