ಔಷಧಿಗೆ ಅಫೀಮು ತಯಾರಿಕೆ: ಕೇಂದ್ರದ ಅನುಮತಿ
Team Udayavani, Jul 15, 2022, 10:10 AM IST
ನವದೆಹಲಿ: ನೋವು ನಿವಾರಕ, ಕಫ್ ಸಿರಪ್, ಕ್ಯಾನ್ಸರ್ ಔಷಧ ಸೇರಿ ಅನೇಕ ಔಷಧಗಳಲ್ಲಿ ಬಳಸಲಾಗುವ ಅಲ್ಕಲೋಯ್ಡ್ಸ್ ಅನ್ನು ಅಫೀಮಿನಿಂದ ತಯಾರಿಸಲು ಕೇಂದ್ರ ಸರ್ಕಾರವು ಬಜಾಜ್ ಹೆಲ್ತ್ ಕೇರ್ ಸಂಸ್ಥೆಗೆ ಅನುಮತಿ ನೀಡಿದೆ. ಇದೇ ಮೊದಲನೇ ಬಾರಿಗೆ ಅಫೀಮು ಪ್ರಕ್ರಿಯೆಗೆ ಖಾಸಗಿ ಸಂಸ್ಥೆಗೆ ಅನುಮತಿ ಕೊಡಲಾಗಿದೆ.
ಈಗಾಗಲೇ ಉತ್ತರ ಪ್ರದೇಶದ ಗಾಜಿಪುರ್ ಮತ್ತು ಮಧ್ಯಪ್ರದೇಶದ ನೀಮುಚ್ ಪ್ರದೇಶದಲ್ಲಿ ಸರ್ಕಾರದ ಅಫೀಮು ಪ್ರಕ್ರಿಯೆ ಘಟಕಗಳಿವೆ. ಅವುಗಳಲ್ಲಿ ವರ್ಷಕ್ಕೆ 800 ಟನ್ ಅಫೀಮು ಗಮ್ ತಯಾರಿಸಲಾಗುತ್ತಿದೆ.
ನಂತರ ಅದರಿಂದ ಅಲ್ಕಲೋಯ್ಡ್ಸ್ ತೆಗೆಯಲಾಗುವುದು. ಈಗ ಥಾಣೆಯಲ್ಲಿ ಬಜಾಜ್ ಹೆಲ್ತ್‌ಕೇರ್ ಘಟಕದೊಂದಿಗೆ ಸರ್ಕಾರ ವರ್ಷಕ್ಕೆ 500 ಟನ್ ಅಫೀಮು ಗಮ್ ತಯಾರಿಸಿ ಕೊಡುವಂತೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಅದನ್ನು ವರ್ಷಕ್ಕೆ 800 ಟನ್‌ವರೆಗೆ ಹೆಚ್ಚಿಸುವುದಕ್ಕೂ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.