ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಾನ್ಯತೆ ರದ್ದು : ರಘುಪತಿ ಭಟ್
Team Udayavani, Jul 15, 2022, 6:11 AM IST
ಉಡುಪಿ: ಬ್ಯಾಡ್ಮಿಂಟನ್ ಅಸೋಸಿ ಯೇಷನ್ ಆಫ್ ಇಂಡಿಯಾದ (ಬಿಎಐ) ಬೈಲಾ ಹಾಗೂ ಕೇಂದ್ರ ಸರಕಾರದ ಕ್ರೀಡಾ ನೀತಿಗೆ ವಿರುದ್ಧ ವಾಗಿರುವ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಮಾನ್ಯತೆಯನ್ನು ಬಿಎಎಐ ರದ್ದು ಪಡಿಸಿದೆ. ಈ ಮಾನ್ಯತೆಯನ್ನು ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಶನ್‌ಗೆ ನೀಡಬೇಕು ಎಂದು ಇದರ ಅಧ್ಯಕ್ಷ ಹಾಗೂ ಶಾಸಕ ಕೆ. ರಘುಪತಿ ಭಟ್ ಆಗ್ರಹಿಸಿದ್ದಾರೆ.
ಈ ಬಗ್ಗೆ ರಘುಪತಿ ಭಟ್ ಅವರು ಸೂಕ್ತ ವಾದ ದಾಖಲೆಗಳೊಂದಿಗೆ ವರದಿ ಸಿದ್ಧಪಡಿಸಿ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಅದರಂತೆ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯಿಂದ ಕೇಂದ್ರ ಸರಕಾರ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾಗೆ ದಾಖಲೆ ಸಲ್ಲಿಸಲಾಗಿತ್ತು.
ಬೈಲಾಕ್ಕೆ ವಿರುದ್ಧವಾಗಿದ್ದರಿಂದ ಗ್ರಾಮೀಣ ಭಾಗದ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ರೀಡೆಗೆ ಸಂಬಂಧಿಸಿದಂತೆ ಯಾವುದೇ ಉಪಯೋಗವಾಗುತ್ತಿರಲಿಲ್ಲ.
ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿ ಯೇಷನ್ ಇವ ರಿಗೆ ಬ್ಯಾಡ್ಮಿಂಟನ್ ಆಫ್ ಇಂಡಿಯಾ ಇವರು ಕರ್ನಾಟಕದ ಅಫೀಲಿಯೇಶನ್ ನೀಡಬೇಕು. ಇದಕ್ಕೆ ಜಿÇÉಾ ಬ್ಯಾಡ್ಮಿಂಟನ್ ಅಸೋಸಿ ಯೇಷನ್ ಸದಸ್ಯರ ಪ್ರಾತಿನಿಧ್ಯವಿದ್ದು ರಾಜ್ಯದ ಶೇ.50ರಷ್ಟು ಅಫೀಲಿಯೇಶನ್ ಇದೆ ಎಂದು ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.