“ಅಸಂಸದೀಯ ಪದ’ದ ನೆಪದಲ್ಲಿ ಚರ್ಚೆ ಕುಂಠಿತವಾಗದಿರಲಿ


Team Udayavani, Jul 15, 2022, 6:00 AM IST

“ಅಸಂಸದೀಯ ಪದ’ದ ನೆಪದಲ್ಲಿ ಚರ್ಚೆ ಕುಂಠಿತವಾಗದಿರಲಿ

ಮುಂದಿನ ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಇದರ ಬೆನ್ನ ಹಿಂದೆಯೇ ಅಸಂಸದೀಯ ಪದಗಳ ನಿರ್ಬಂಧ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಲೋಕಸಭೆ ಕಾರ್ಯಾಲಯ ಈ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಅಸತ್ಯ, ಭ್ರಷ್ಟತೆ ಸೇರಿದಂತೆ ಕೆಲವೊಂದು ಪದಗಳನ್ನು ಬಳಕೆ ಮಾಡದಂತೆ ನಿರ್ಬಂಧಿಸಲಾಗಿದೆ. ವಿಪಕ್ಷಗಳ ಪ್ರಕಾರ, ಇದೊಂದು ಪ್ರಜಾಸತ್ತಾತ್ಮಕ ವಿರೋಧಿ ನಡೆಯಾಗಿದ್ದು, ಸಂಸತ್‌ನಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂಥ ಪರಿಸ್ಥಿತಿ ಉದ್ಭವವಾಗಬಹುದು ಎಂದು ಆರೋಪಿಸಿವೆ.

ಅಸಂಸದೀಯ ಪದ ಎಂದರೆ, ಸಂಸತ್‌ನ ಘನತೆಗೆ ಧಕ್ಕೆ ತರುವ ಪದಗಳು. ದೇಶದ ಅತ್ಯುನ್ನತ ಸದನವಾಗಿ, ಜನರ ಹಿತದೃಷ್ಟಿಯಿಂದ ಶಾಸನ ರೂಪಿಸುವ ಈ ಸದನದಲ್ಲಿ ಕೀಳು ಅಭಿರುಚಿಯ ಪದಗಳನ್ನು ಸಂಸದರು ಬಳಕೆ ಮಾಡಬಾರದು ಎಂಬುದು ಈಗ ಹೊರಡಿಸಿರುವ ನಿಯಮದ ತಾತ್ಪರ್ಯ. ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ, ಕೆಲವು ಪದಗಳಿಗೆ ಮಿತಿ ಹೇರುವುದು ಉತ್ತಮವೇ. ಹಾಗಂತ ತೀರಾ ದಿನನಿತ್ಯದ ರಾಜಕೀಯ ಚರ್ಚೆಯಲ್ಲಿ ಬಳಕೆ ಮಾಡುವಂಥ ಪದಗಳನ್ನು ನಿರ್ಬಂಧ ಪಟ್ಟಿಗೆ ಸೇರಿಸಿರುವುದು ಉಚಿತವಾದ ಕ್ರಮವಲ್ಲ.

ಈ ಕುರಿತಂತೆ ವಿವಾದ ಏರ್ಪಟ್ಟ ಮೇಲೆ ಸ್ಪೀಕರ್‌ ಓಂ ಬಿರ್ಲಾ ಅವರೇ ಸ್ಪಷ್ಟನೆ ನೀಡಿದ್ದು, ಯಾರ ಮಾತಿಗೂ ನಿರ್ಬಂಧ ಹೇರಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಸಂಸತ್‌ನ ಘನತೆ ಕಾಪಾಡಬೇಕಾದದ್ದು ಆಡಳಿತ ಮತ್ತು ವಿಪಕ್ಷಗಳಲ್ಲಿ ಇರುವ ಸದಸ್ಯರ ಆದ್ಯ ಕರ್ತವ್ಯ ಎಂದೂ ಹೇಳಿದ್ದಾರೆ.

ಅಸಂಸದೀಯ ಪದ ವಿಚಾರವಾಗಿ ಇದೇ ಮೊದಲ ಬಾರಿಗೆ ಇಂಥ ನಿಯಮಗಳನ್ನೇನೂ ಹೊರಡಿಸಿಲ್ಲ. 1999ರಲ್ಲೇ ಇಂಥ ಪ್ರಯತ್ನ ಶುರು ವಾಗಿ 2002ರ ಹೊತ್ತಿಗೆ 900 ಪುಟಗಳ ಒಂದು ಪುಸ್ತಕವನ್ನೇ ಸಿದ್ಧ ಮಾಡಲಾಗಿದೆ. ಹಾಗೆಯೇ ಯುಪಿಎ ಸರಕಾರದ ಅವಧಿಯ 2012ರಲ್ಲಿಯೂ ಇಂಥ ಕೈಪಿಡಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿಯೂ ಕೆಲವೊಂದು ಪದಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ಪಟ್ಟಿಗೆ ಈಗ ಹೊಸದಾಗಿ 62 ಹೊಸ ಪದಗಳನ್ನು ಸೇರಿಸಲಾಗಿದೆ ಎಂಬುದು ಕೇಂದ್ರ ಸರಕಾರದ ಸಮಜಾಯಿಷಿ. ಆದರೆ ಈಗ ಬಹುತೇಕರ ಆಕ್ಷೇಪವಿರುವುದು ಭ್ರಷ್ಟಾಚಾರಿ, ಸುಳ್ಳು  ಗಾರ, ಅಸಮರ್ಥ, ಅಸತ್ಯ, ಮೋಸ, ಸುಳ್ಳು, ನಾಟಕ, ದಾರಿ ತಪ್ಪಿಸುವಿಕೆ ಸೇರಿದಂತೆ ಪ್ರಮುಖ ಪದಗಳ ಬಗ್ಗೆ. ಯಾವುದೇ ಪಕ್ಷದ ಆಡಳಿತವಿರಲಿ ಸರಕಾರದ ವಿರುದ್ಧ ಟೀಕೆ ಮಾಡುವಾಗ ವಿಪಕ್ಷಗಳು ಇಂಥ ಪದಗಳನ್ನು ಬಳಕೆ ಮಾಡಲೇಬೇಕು. ಆದರೆ ಈ ಪದಗಳನ್ನು ಬಿಟ್ಟು ಬೇರೆ ಯಾವ ಪದಗಳನ್ನು ಉಪಯೋಗಿಸಲಿ ಎಂಬುದು ವಿಪಕ್ಷಗಳ ಆಕ್ಷೇಪ.

ವಿಶೇಷವೆಂದರೆ, ಕೆಲವು ಅಧಿಕಾರಿಗಳು ಹೇಳುವಂತೆ, ದೇಶದ ಎಲ್ಲ ವಿಧಾನಸಭೆಗಳ ಕಡತದಿಂದ ತೆಗೆದುಹಾಕಿರುವ ಪದಗಳನ್ನು ನೋಡಿಯೇ ಈಗ ನಿರ್ಬಂಧದ ಸೂಚನೆ ನೀಡಲಾಗಿದೆ. ಅಂದರೆ 2021ರಲ್ಲಿ ರಾಜಸ್ಥಾನ ವಿಧಾನಸಭೆಯಲ್ಲಿ ಅಸತ್ಯ, 1980ರ ಜುಲೈನಲ್ಲಿ ಸಂಸತ್‌ನಲ್ಲಿ ಭ್ರಷ್ಟ ಮತ್ತು ಭ್ರಷ್ಟಾಚಾರಿ ಪದಗಳನ್ನು ತೆಗೆದುಹಾಕಲಾಗಿದೆ. ಅಸಮರ್ಥ ಸಚಿವರು ಎಂಬ ಪದವನ್ನು 1976ರ ನವೆಂಬರ್‌ನಲ್ಲಿ ತೆಗೆಯಲಾಗಿದೆ.
ಈ ಸಂಗತಿಗಳನ್ನು ನೋಡಿದರೆ, ಯಾವುದೇ ಪಕ್ಷಗಳಿದ್ದರೂ ಅವುಗಳು ತಮ್ಮ ಮೂಗಿನ ನೇರಕ್ಕೆ ಇಂಥ ನಿಯಮಗಳನ್ನು ಮಾಡಿಕೊಳ್ಳುತ್ತವೆ ಎಂಬುದು ಗೊತ್ತಾಗುತ್ತದೆ. ಆದರೆ ಏನೇ ಆಗಲಿ ಪದಗಳ ಮೇಲಿನ ನಿರ್ಬಂಧದಿಂದ ಸಂಸತ್‌ ಅಥವಾ ವಿಧಾನಸಭೆಗಳಲ್ಲಿ ಉತ್ತಮ ಚರ್ಚೆಗೆ ಅವಕಾಶ ಸಿಗದಂತೆ ಆಗಬಾರದು.

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.