![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 15, 2022, 11:36 AM IST
ಬೆಂಗಳೂರು: ಸಹೋದರನ ಪುತ್ರನಿಂದಲೇ ಚಾಕು ಇರಿತಕ್ಕೊಳಗಾದ ಮಾಜಿ ಕಾರ್ಪೋರೇಟರ್ ಪತಿ ಅಯೂಬ್ ಖಾನ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಈ ಸಂಬಂಧ ಅಯುಬ್ ಖಾನ್ ಸಹೋದರ(ಅಣ್ಣ) ಪ್ಯಾರುಖಾನ್ ಪುತ್ರ ಮತ್ತಿನ್ ಖಾನ್ (25) ಎಂಬಾತನನ್ನು ಬಂಧಿಸಲಾಗಿದೆ.
ಅಯುಬ್ ಖಾನ್ ಪತ್ನಿ ನಾಜಿಮಾ ಖಾನಂ ಈ ಹಿಂದೆ ಬಿಬಿಎಂಪಿ ಸದಸ್ಯರಾಗಿದ್ದರು. ಜತೆಗೆ ಅಯುಬ್ ಖಾನ್ ಟಿಪ್ಪು ನಗರದ ಖುದಾದತ್ ಮಸೀದಿಗೆ 15 ವರ್ಷಗಳಿಂದ ಅಧ್ಯಕ್ಷರಾಗಿದ್ದು, ಮುಂದಿನ ವರ್ಷ ಅವರ ಪುತ್ರ ಸಿದ್ದಿಕ್ ಖಾನ್‌ನನ್ನು ಮುಖ್ಯಸ್ಥನನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಮತ್ತಿನ್ ಖಾನ್, 6 ತಿಂಗಳ ಹಿಂದೆ ತನ್ನನ್ನು ಮಸೀದಿ ಮುಖ್ಯಸ್ಥನನ್ನಾಗಿ ಮಾಡುವಂತೆ ಚಾಕು ಹಿಡಿದು ಗಲಾಟೆ ಮಾಡಿದ್ದ. ಆದರೆ, ಯಾವುದೇ ದೂರು ನೀಡಿರಲಿಲ್ಲ. ಈ ಮಧ್ಯೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಆರೋಪಿ ಮನೆ ಬಳಿ ಬಂದು ಗಲಾಟೆ ತೆಗೆದು ಅಯುಬ್ ಖಾನ್‌ನ ಹೊಟ್ಟೆಗೆ ಇರಿದಿದ್ದಾನೆ. ಈ ಸಂಬಂಧ ಗಂಭೀರವಾಗಿ ಗಾಯಗೊಂಡಿದ್ದ ಅಯುಬ್ ಖಾನ್‌ನನ್ನು ಆಸ್ಪ ತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಚಾಲಕನ ಬಳಿ ಹಣವಿಲ್ಲವೆಂದು ವಾಹನ ಸುಟ್ಟು ಹಾಕಿ ವಿಕೃತಿ ಮೆರದ ಪುಂಡರು
ಆರೋಪಿ ಮತ್ತಿನ್ ಖಾನ್ ನನ್ನು ಬಂಧಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಮಸೀದಿ ಅಧ್ಯಕ್ಷ ಸ್ಥಾನ ಮತ್ತು ಆಸ್ತಿ ವಿಚಾರಕ್ಕೆ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದರು.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.