ನೀರೆ: ಕುಸಿತಗೊಂಡ ಮಣ್ಣು ತೆರವುಗೊಳಿಸಿದ ಗ್ರಾ.ಪಂ.
ಅಪಾಯದಲ್ಲಿ ಅಂಗನವಾಡಿ ಕೇಂದ್ರ, ಪರಿಹಾರ ಅಗತ್ಯ
Team Udayavani, Jul 15, 2022, 12:16 PM IST
ಕಾರ್ಕಳ: ನೀರೆ ಗ್ರಾಮದ ಹೆದ್ದಾರಿ ಬಳಿ ಅಂಗನವಾಡಿ ಕೇಂದ್ರದ ಕಾಂಪೌಂಡ್ ಪಕ್ಕದಲ್ಲಿ ಭಾರೀ ಮಳೆಗೆ ಜು.13ರಂದು ಮಣ್ಣು ಭೂಕುಸಿತವಾಗಿದ್ದು, ನೀರೆ ಗ್ರಾ.ಪಂ. ವತಿಯಿಂದ ಮಣ್ಣು ತೆರವಿಗೆ ಕಾರ್ಯ ಗುರುವಾರ ನಡೆದಿದೆ.
ಹೆದ್ದಾರಿ ಪಕ್ಕದಲ್ಲೇ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ನೀರೆ ಅಂಗನವಾಡಿ ಕೇಂದ್ರವಿದೆ. ಅಂಗನವಾಡಿ ಕೇಂದ್ರದಲ್ಲಿ 10 ಮಂದಿ ಪುಟಾಣಿಗಳಿದ್ದಾರೆ. ಅಂಗನವಾಡಿ ಕೇಂದ್ರ ಹೆದ್ದಾರಿ ಬದಿಯಲ್ಲೆ ಇದ್ದು ಕೇಂದ್ರದ ಮುಂಭಾಗದ ಕಾಂಪೌಂಡ್ ಇರುವಲ್ಲಿ ಮಳೆಯಿಂದ ಭೂಕುಸಿತ ನಡೆದಿತ್ತು. ಸ್ಥಳಕ್ಕೆ ನೀರೆ ಗ್ರಾ.ಪಂ ಪಿಡಿಒ ಅಂಕಿತ ಹಾಗೂ ಇತರ ಅಧಿಕಾರಿಗಳು ತೆರಳಿ ಪರಿಶೀಲಿಸಿ, ಕುಸಿತಗೊಂಡ ಜಾಗದ ಮಣ್ಣು ಅನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ, ನೀರು ಹರಿದು ಹೋಗುವಂತೆ ಮಾಡಿ ಕುಸಿತ ಹೆಚ್ಚಾಗದಂತೆ ತಡೆಯುವ ತಾತ್ಕಾಲಿಕ ಕೆಲಸವನ್ನು ಗ್ರಾ.ಪಂ. ವತಿಯಿಂದ ಮಾಡಲಾಗಿದೆ. ಇದರಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದರೂ ಭೀತಿ ಹಾಗೆ ಮುಂದುವರೆದಿದೆ.
ಉಡುಪಿ ಕಾರ್ಕಳ ಜಿಲ್ಲಾ ಮುಖ್ಯ ರಸ್ತೆ ಈ ಹಿಂದೆ ಆಗಿತ್ತು. ಬಳಿಕ ಈ ರಸ್ತೆ ಪೇತ್ರಿ ಹಿರಿಯಡ್ಕ ಕಾರ್ಕಳ ರಾಜ್ಯ ಹೆದ್ದಾರಿಯಾಗಿ ಮೇಲ್ದಜೇìಗೇರಿಸಲಾಗಿದೆ. ನೀರೆ ಹೆದ್ದಾರಿ ಬಳಿ ಅಂಗನವಾಡಿ ಕೇಂದ್ರವಿದೆ. ಹೆದ್ದಾರಿ ಬದಿಯಲ್ಲಿ ಅಂಗನವಾಡಿ ಕೇಂದ್ರವಿದ್ದು ಅಂಗನವಾಡಿ ಕೇಂದ್ರವಿರುವ ಕೆಳಭಾಗ ಕುಸಿಯುತ್ತ ಮುಂದುವರಿದಲ್ಲಿ ಅಂಗನ ವಾಡಿಗೆ ಹಾನಿಯಾಗುವ ಸಂಭವವಿದೆ. ಪುಟಾಣಿ ಮಕ್ಕಳಿಗೆ ಸುರಕ್ಷತೆಯ ಭಯ ಕೂಡ ಎದುರಾಗಿದೆ.
ಹೆದ್ದಾರಿಗೂ ಮಣ್ಣು ಕುಸಿಯುವ ಭೀತಿಯಿದ್ದು, ಸಂಚಾರಕ್ಕೂ ತೊಡಕಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಅಂಗನ ವಾಡಿ ಕೇಂದ್ರದ ಮೇಲಕ್ಕೆ ಸರಕಾರಿ ಪ್ರಾಥಮಿಕ ಶಾಲೆಯೂ ಇದೆ. ಬರೆ ಕುಸಿಯುತ್ತ ಮುಂದುವರಿದಲ್ಲಿ ಅಂಗನ ಜನಪರ ಕಾಳಜಿ ಸುದಿನ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವುಗೊಳಿಸಲಾಯಿತು. ವಾಡಿ ಕೇಂದ್ರ, ಶಾಲೆಗೂ ಹಾನಿಯಾಗಿ ಅವಘಡ ಸಂಭವಿಸುವುದರ ಜತೆಗೆ ಹೆದ್ದಾರಿ ರಸ್ತೆಗೆ ಹಾನಿಯಾಗಿ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ.
ಸುರಕ್ಷಿತ ಕ್ರಮವಾಗಿ ಗುಡ್ಡ ಕುಸಿತ ಮುಂದುವರಿಯದಂತೆ ಗಟ್ಟಿ ತಡೆಗೋಡೆ ನಿರ್ಮಿಸುವ ಆವಶ್ಯಕತೆಯಿದೆ. ಮಳೆ ಮುಂದುವರಿದಿದ್ದು ಸುರಕ್ಷಿತ ಕ್ರಮ ಜರಗಿಸದೇ ಇದ್ದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಸುರಕ್ಷತೆಯ ಭರವಸೆ ದೊರಕಿದೆ: ಮಣ್ಣು ಕುಸಿತವಾಗಿರುವ ಅಂಗನವಾಡಿ ಕೇಂದ್ರದ ಬಳಿ ಮಣ್ಣು ತೆರವುಗೊಳಿಸಿ ಒಂದಷ್ಟು ಸುರಕ್ಷತೆ ಕ್ರಮ ಜರಗಿಸಿದ್ದೇವೆ. ಶಾಶ್ವತ ಪರಿಹಾರ ಕ್ರಮಗಳಿಗಾಗಿ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಲೊಕೋಪಯೋಗಿ ಇಲಾಖೆ ಗಮನಕ್ಕೂ ತಂದಿದ್ದೇವೆ. ಅವರಿಂದ ಸುರಕ್ಷತೆ ಕ್ರಮ ವಹಿಸುವ ಬಗ್ಗೆ ಭರವಸೆ ದೊರಕಿದೆ. -ಅಂಕಿತಾ, ಪಿಡಿಒ ನೀರೆ ಬೈಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.