![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 15, 2022, 2:23 PM IST
ಸ್ಟೇಟ್‌ಬ್ಯಾಂಕ್: ನಗರದ ಬಹುಮುಖ್ಯವಾದ ಎ.ಬಿ. ಶೆಟ್ಟಿ ವೃತ್ತವನ್ನು ಮರುನಿರ್ಮಾಣದೊಂದಿಗೆ ಅಭಿವೃದ್ಧಿಪಡಿಸುವ ಮಹತ್ವದ ತೀರ್ಮಾನವನ್ನು ಮಂಗಳೂರು ಮಹಾನಗರ ಪಾಲಿಕೆ ಕೈಗೊಂಡಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎ.ಬಿ. ಶೆಟ್ಟಿ ವೃತ್ತವನ್ನು ಈ ಹಿಂದೆ ವಿಜಯ ಬ್ಯಾಂಕ್ ವತಿಯಿಂದ ಹಾಲಿ ಇರುವ ಜಂಕ್ಷನ್‌ನಲ್ಲಿ ವೃತ್ತವನ್ನು ಅಭಿವೃದ್ಧಿಪಡಿಸಲಾಗಿತ್ತು. ಅನಂತರ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಯು.ಪಿ. ಮಲ್ಯ ರಸ್ತೆಯಿಂದ ಹ್ಯಾಮಿಲ್ಟನ್ ರಸ್ತೆಯನ್ನು ಏಕಮುಖ ಸಂಚಾರವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಈ ಹಿಂದೆ ಇದ್ದ ಎ.ಬಿ.ಶೆಟ್ಟಿ ವೃತ್ತ ಮರು ನಿರ್ಮಾಣ ಮಾಡಲು ತಾಂತ್ರಿಕ ಸಮಾಲೋಚಕರ ವಿನ್ಯಾಸದಂತೆ ಪ್ರಸ್ತಾವಿಸಲಾಗಿದೆ. ಅದರಂತೆ ಎ.ಬಿ. ಶೆಟ್ಟಿ ವೃತ್ತವನ್ನು ಪ್ರಸ್ತುತ ಅಭಿವೃದ್ಧಿಪಡಿಸಲು ಬ್ಯಾಂಕ್ ಆಫ್ ಬರೋಡಾ ಮುಂದೆ ಬಂದಿದ್ದು, ವಿಶೇಷ ವಿನ್ಯಾಸದಂತೆ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು, ಈ ಹಿಂದೆ ಇದ್ದ ಎ.ಬಿ.ಶೆಟ್ಟಿ ವೃತ್ತದ ಹೆಸರಿನಲ್ಲಿಯೇ ಬ್ಯಾಂಕ್‌ನವರು ಅಭಿವೃದ್ಧಿಪಡಿಸಲು ಒಪ್ಪಿದ್ದಾರೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಪ್ರಾರಂಭವಾಗಲಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.
ಅಂಬೇಡ್ಕರ್ ಜಂಕ್ಷನ್ ಅಭಿವೃದ್ಧಿ
ಬಲ್ಮಠದಲ್ಲಿರುವ ಅಂಬೇಡ್ಕರ್ ಜಂಕ್ಷನ್ ಭಾಗವನ್ನು ಈಗಾಗಲೇ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದೆ. ಡಾ| ಬಿ.ಆರ್. ಅಂಬೇಡ್ಕರ್ ಜಂಕ್ಷನ್ ಭಾಗದಲ್ಲಿನ ಒಳ ವಿನ್ಯಾಸ ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ವೃತ್ತವನ್ನು ಪಾಲಿಕೆ ವತಿಯಿಂದ ಅಭಿವೃದ್ಧಿಯ ಪ್ರಸ್ತಾ ವನೆಯು ಅನುಮೋದನೆಗೊಂಡಿದೆ. ಕಾಮ ಗಾರಿಯನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.