ಯಗಚಿ ಡ್ಯಾಂ ಭರ್ತಿ: 2500 ಕ್ಯೂಸೆಕ್‌ ನೀರು ಹೊರಕ್ಕೆ

ಯಗಚಿಯನ್ನು ನಂಬಿರುವ ಅನ್ನದಾತರು ಹಾಗೂ ಲಕ್ಷಾಂತರ ಜನರಲ್ಲಿ ಅಪಾರ ಸಂತೋಷ ಮೂಡಿಸಿದೆ.

Team Udayavani, Jul 15, 2022, 6:00 PM IST

ಯಗಚಿ ಡ್ಯಾಂ ಭರ್ತಿ: 2500 ಕ್ಯೂಸೆಕ್‌ ನೀರು ಹೊರಕ್ಕೆ

ಬೇಲೂರು: ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜೀವನದಿ ಯಗಚಿ ಜಲಾಶಯ ತನ್ನ ಒಡಲು ತುಂಬಿ ಕೊಂಡಿದ್ದು ಯಗಚಿಯನ್ನು ನಂಬಿರುವ ಅನ್ನದಾತರು ಹಾಗೂ ಲಕ್ಷಾಂತರ ಜನರಲ್ಲಿ ಅಪಾರ ಸಂತೋಷ ಮೂಡಿದ್ದು, ಹೆಚ್ಚುವರಿ ನೀರನ್ನು ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ.

ಯಗಚಿ ರಾಜ್ಯದ ಪಶ್ಚಿಮಘಟ್ಟದ ಮಲೆನಾಡು ಭೂಪ್ರದೇಶದಲ್ಲಿ ಹರಿಯುವ ನದಿ, ಹೇಮಾವತಿಗೆ ಉಪನದಿಯಾಗಿದೆ. ಕಾμನಾಡಿನಲ್ಲಿ ಹುಟ್ಟಿ ದಕ್ಷಿಣ ಭಾಗಕ್ಕೆ ಹರಿ ಯುವ ಯಗಚಿ ಹಾಸನದ ಗೊರೂರು ಬಳಿಯ ಹೇಮಾವತಿ ಡ್ಯಾಂಗೆ ಸೇರುತ್ತದೆ. ಜಲಾಶಯ ಸಮುದ್ರ ಮಟ್ಟದಿಂದ 965 ಅಡಿ ಎತ್ತವಿರದ್ದು, ಒಟ್ಟು 3.60 ಟಿಎಂಸಿ ಸಾಮಾರ್ಥ್ಯ ಇರುವ ಜಲಾಶಯದಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಎಡಬಿಡದೆ ಸುರಿದ ಮಳೆಯಿಂದ ಅಣ್ಣೆಕಟ್ಟೆ ಭರ್ತಿಯಾಗಿದೆ ಡ್ಯಾಂಗೆ ಸುಮಾರು 2535 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.ಅಣ್ಣೆಕಟ್ಟೆಯ ಐದು ಕ್ರೆಸ್ಟ್‌ ಗೇಟಿನ ಮೂ ಲಕ 2500 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಯಿತು.

3.603 ಟಿಎಂಸಿ ನೀರು ಸಂಗ್ರಹ ಸಾರ್ಮಥ್ಯ: ಜುಲೈ ತಿಂಗಳಿಂದ ತಾಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ, ಬಿಕ್ಕೂಡು, ಗೆಂಡೇಹಳ್ಳಿ. ಬೇಲೂರು ಪಟ್ಟಣ, ಹಳೇಬೀಡು ಮತ್ತು ಮಾದಿಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಜಲಾಶಯದ ಒಳ ಹರಿವು ಹೆಚ್ಚುತ್ತಿದೆ ಅಲ್ಲದೆ ಯಗಚಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಆಲ್ದೂರು ಭಾಗಗಳಲ್ಲಿ ಮಳೆ ಬೀಳುತ್ತಿರುವುದರಿಂದ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದೆ. 964. 603 ಮೀಟರ್‌ ಎತ್ತರವಿರುವ ಅಣೆಕಟ್ಟೆಯಲ್ಲಿ 3.603 ಟಿಎಂಸಿ ನೀರು ಸಂಗ್ರಹದ ಸಾರ್ಮಥ್ಯ ಹೊಂದಿರುವ ಜಲಾಶಯದಲ್ಲಿ 3.416 ಟಿ.ಎಂ.ಸಿ ನೀರು ಸಂಗ್ರಹ ವಾಗಿದ್ದು 2535 ಕ್ಯೂಸೆಕ್‌ ನೀರು ಒಳ ಹರಿವು, 2500 ಕ್ಯೂಸೆಕ್‌ ನೀರನ್ನು ಹೊರ ಹರಿಸಲಾಗುತ್ತಿದೆ.

ಮಳೆ ವಿವರ: ತಾಲೂಕಿನಾದ್ಯಂತ ಜು.1ರಿಂದ 14ವರೆಗೆ 1496.6 ಮಿ.ಮೀ. ಮಳೆಯಾಗಿದ್ದು ಬೇಲೂರು 173.2, ಹಳೇಬೀಡು 100.9, ಹಗರೆ 155.2, ಬಿಕ್ಕೋ ಡು 295, ಗೆಂಡೆಹಳ್ಳಿ 307.5, ಅರೇಹಳ್ಳಿ 464..8 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ತಾಲೂಕಿನಲ್ಲಿ ವರ್ಷದಲ್ಲಿ 1031 ಮಿ.ಮೀ. ವಾಡಿಕೆ ಮಳೆ ಬರಬೇಕಿದ್ದು, 14ರವರೆಗೆ ಸಾರಾಸರಿ 3618.6 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದ್ದು, ಇದುವರವಿಗೂ ಹೋಬಳಿವಾರು ಬಿದ್ದಿರುವ ಮಳೆ ವಿವರ ಇಂತಿದೆ. ಬೇಲೂರು 502.3 ಹಳೇಬೀಡು 444.5 ಹಗರೆ 552ಬೀಕ್ಕೂಡು 480.4ಗೆಂಡೆಹಳ್ಳಿ 600 ಅರೇಹಳ್ಳಿ 522.6 ಮಿ.ಮಿ ಮಳೆಯಾಗಿರುವ ವರದಿಯಾಗಿದೆ.

● ಡಿ.ಬಿ.ಮೋಹನ್‌ ಕುಮಾರ್‌

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-alur

Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.