ಚೀನ ಮೊಬೈಲ್ ಕಳ್ಳಾಟ: ಸಮಗ್ರ ನೋಟ ಇಲ್ಲಿದೆ…
Team Udayavani, Jul 16, 2022, 6:40 AM IST
ಭಾರತದಲ್ಲೇ ವಹಿವಾಟು ನಡೆಸಿ, ಬಂದ ಲಾಭವನ್ನು ಅಡ್ಡದಾರಿಯಲ್ಲಿ ಚೀನಗೆ ಕಳುಹಿಸುತ್ತಿದ್ದ ಮೊಬೈಲ್ ಕಂಪೆನಿಗಳ ಜಾಲ ಈಗ ಬಹಿರಂಗ ವಾಗಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳು ಇಂಥ ಎರಡು ಮೊಬೈಲ್ ಕಂಪೆನಿಗಳ ವಿರುದ್ಧ ಕ್ರಮ ಜರಗಿಸಿವೆ. ಚೀನ ಲೋನ್ ಆ್ಯಪ್ ಹಾವಳಿಯ ನಡುವೆ ಇಂಥ ಘಟನೆಗಳು ಆಕ್ರೋಶಕ್ಕೂ ಕಾರಣವಾಗಿದೆ. ಹಾಗಾದರೆ ಚೀನದ ಕಂಪೆನಿಗಳು ಮಾಡುತ್ತಿದ್ದ ತೆರಿಗೆ ಮೋಸವೇನು? ಅವುಗಳ ಮೇಲೊಂದು ಸಮಗ್ರ ನೋಟ ಇಲ್ಲಿದೆ.
ಒಪ್ಪ ಓರಣದ 4,389 ಕೋಟಿ ರೂ. ವಂಚನೆ
ಮೂಲತಃ ಚೀನದ ಗ್ವಾಂಗ್ ಡಾಂಗ್ ಪ್ರಾಂತದಲ್ಲಿ ಕಾರ್ಯವೆಸಗುವ ಗ್ವಾಂಗ್‌ಡಾಂಗ್ ಒಪ್ಪೋ ಮೊಬೈಲ್ ಟೆಲೆಕಮ್ಯುನಿಕೇಶನ್ಸ್ ಕಾರ್ಪೊರೇಶನಲ್ ಲಿಮಿಟೆಡ್‌ನ ಸಹವರ್ತಿ ಸಂಸ್ಥೆ ಒಪ್ಪೋ ಇಂಡಿಯಾವೇ ಈಗ 4,390 ಕೋಟಿ ರೂ. ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಂಪೆನಿಯ ವಿರುದ್ಧ 4,389 ಕೋಟಿ ರೂ. ಕಸ್ಟಮ್ಸ್ ಸುಂಕ ವಂಚನೆ ಮಾಡಿದ ಆರೋಪಕ್ಕೆ ಸಂಬಂ ಧಿಸಿದಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ವಿತ್ತ ಸಚಿವಾಲಯದ ಹೇಳಿಕೆ ಪ್ರಕಾರ ಒಪ್ಪೋ ಇಂಡಿಯಾ 2,981 ಕೋಟಿ ರೂ. ಮೌಲ್ಯದಷ್ಟು ತೆರಿಗೆ ವಿನಾಯಿತಿ ಪಡೆದುಕೊಂಡಿತ್ತು. ಇದಲ್ಲದೆ ಗೌರವಧನ ಮತ್ತು ಪರವಾನಿಗೆ ಶುಲ್ಕವನ್ನು ಚೀನದಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀಡಿತ್ತು. ಆ ಶುಲ್ಕ ಅಲ್ಲಿಂದ ಆಮದು ಮಾಡಿದ ವಸ್ತುಗಳ ಮೌಲ್ಯಕ್ಕೆ ಸಮನಾಗಿ ಇರಲಿಲ್ಲ ಎನ್ನುವುದು ತನಿಖೆಯಲ್ಲಿ ಕಂಡುಬಂದಿದ್ದ ಅಂಶ.
ವಿವೋದಿಂದ 62,476 ಕೋಟಿ ರೂ. ಮೋಸ
ವಿವೋ ಕಮ್ಯುನಿಕೇಶನ್ ಟೆಕ್ನಾಲಜಿ ಕೊ. ಲಿ. ಎನ್ನುವುದು ಚೀನದ ಗ್ವಾಂಗ್‌ಡಾಂಗ್ ಪ್ರಾಂತದ ಡಾಗುವ್ಗನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪೆನಿ. ದೇಶಕ್ಕೆ ಸಂಬಂಧಿಸಿದಂತೆ ಅದರ ಪ್ರಧಾನ ಕಚೇರಿ ಇರುವುದು ಗುರುಗ್ರಾಮದಲ್ಲಿ ಮತ್ತು ವಿವೋ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ವಿವಿಧ ಮಾದರಿಗಳ ಮೊಬೈಲ್‌ಗಳನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಕೇಂದ್ರ ಸರಕಾರಕ್ಕೆ ನೀಡಬೇಕಾಗಿರುವ 62,476 ಕೋಟಿ ರೂ.ಮೌಲ್ಯದ ಮೊತ್ತವನ್ನು ಚೀನಕ್ಕೆ ವರ್ಗಾವಣೆ ಮಾಡಿ ತೆರಿಗೆ ವಂಚನೆ ಮಾಡಿದೆ ಎಂಬ ಆರೋಪ ಈ ಕಂಪೆನಿಯ ಮೇಲೆ ಇದೆ. ಜಾರಿ ನಿರ್ದೇಶ ನಾಲಯದ ತನಿಖೆಯ ಪ್ರಕಾರ ವಂಚನೆ ಮಾಡಿರುವ ಮೊತ್ತ ದೇಶದಲ್ಲಿ ವಿವೋ ಹೊಂದಿರುವ 1,25,185 ಕೋಟಿ ರೂ. ಮೊತ್ತದ ವಹಿವಾಟಿನ ಅರ್ಧದಷ್ಟಾಗಿದೆ. 2018ರಿಂದ 2021ರ ಅವಧಿಯಲ್ಲಿ ಕಂಪೆನಿಯ ಪ್ರಧಾನ ಹುದ್ದೆಗಳಲ್ಲಿ ಇರುವ ಮೂವರು ಚೀನ ನಾಗರಿಕರು ದೇಶ ತೊರೆದ ಬಳಿಕ ನಡೆಸಲಾಗಿರುವ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಇನ್ನೊಂದು ಮಹತ್ವದ ಅಂಶವೆಂದರೆ ವಿವೋ 23 ಇತರ ಕಂಪೆನಿಗಳನ್ನೂ ಸ್ಥಾಪಿಸಿತ್ತು ಮತ್ತು ಅವುಗಳ ಮೂಲಕವೇ 62,476 ಕೋಟಿ ರೂ. ಮೊತ್ತವನ್ನು ವರ್ಗಾಯಿಸಿತ್ತು. ಜತೆಗೆ ಕಂಪೆನಿಯ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಲಾಗಿತ್ತು. ದಿಲ್ಲಿ ಹೈಕೋರ್ಟ್ ನಲ್ಲಿ ನಡೆದಿದ್ದ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯಕ್ಕೆ 950 ಕೋಟಿ ರೂ. ಖಾತರಿ ಮೊತ್ತ ನೀಡಿ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.
ಶಿಯೋಮಿ ಇಂಡಿಯಾ
ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ ವಿರುದ್ಧ ಈ ವರ್ಷದ ಜನವರಿಯಲ್ಲಿ ತೆರಿಗೆ ವಂಚನೆ ಆರೋಪಗಳು ಕೇಳಿ ಬಂದಿದ್ದವು. 653 ಕೋಟಿ ರೂ. ಕಸ್ಟಮ್ಸ್ ಸುಂಕ ಪಾವತಿ ಮಾಡಿಲ್ಲ ಎಂದು ಅದರ ವಿರುದ್ಧ ಆರೋಪ ಹೊರಿಸಲಾಗಿತ್ತು. ಮೊಬೈಲ್ ಮತ್ತು ಅದರ ಬಿಡಿ ಭಾಗಗಳನ್ನು ದೇಶಕ್ಕೆ ತರಿಸಿಕೊಳ್ಳುವ ಸಂದರ್ಭದಲ್ಲಿ ರಾಯಧನ ಮತ್ತು ಪರವಾನಿಗೆ ಶುಲ್ಕ ಪಾವತಿ ಮಾಡುವುದನ್ನು ತಪ್ಪಿಸಿಕೊಂಡಿತ್ತು ಎನ್ನುವುದು ಆರೋಪ. 2017 ಎಪ್ರಿಲ್‌ನಿಂದ 2020 ಜೂನ್‌ವರೆಗಿನ ಅವಧಿಯಲ್ಲಿ ಮೂರು ಬಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.
ಇತರ ಕಂಪೆನಿಗಳು
ಜೆಡ್‌ಟಿಇ: ಚೀನದ ಗ್ವಾಂಗ್ ಡಾಂಗ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಕಂಪೆನಿ ದೂರಸಂಪರ್ಕ ಕಂಪೆನಿಗಳಿಗೆ ಬೇಕಾಗಿರುವ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತದೆ. 2021ರ ಆಗಸ್ಟ್‌ನಲ್ಲಿ ಆದಾಯ ತೆರಿಗೆ ಇಲಾಖೆ ಗುರುಗ್ರಾಮದಲ್ಲಿರುವ ಕಂಪೆನಿಯ ಕಚೇರಿ, ದೇಶದಲ್ಲಿರುವ ಸಂಸ್ಥೆಯ ಹಿರಿಯ ಶ್ರೇಣಿಯ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿತ್ತು.
ವಾವೆ (Huawei): ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರು, ಹೊಸದಿಲ್ಲಿ ಮತ್ತು ಗುರುಗ್ರಾಮದಲ್ಲಿರುವ ಕಂಪೆನಿ ಕಚೇರಿ ಮತ್ತು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಕಂಪೆನಿ ಹೊಂದಿರುವ ಬ್ಯಾಂಕ್ ಖಾತೆಗಳು, ಹಣಕಾಸು ವಿಚಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಒನ್ ಪ್ಲಸ್: ಈ ಮೊಬೈಲ್ ಕಂಪೆನಿ ವಿರುದ್ಧವೂ 2021ರ ಡಿಸೆಂಬರ್‌ನಲ್ಲಿ ತೆರಿಗೆ ವಂಚನೆಯ ಆರೋಪಗಳು ಕೇಳಿ ಬಂದಿದ್ದವು. ಬೆಂಗಳೂರು, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್), ಮುಂಬಯಿ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು.
ಆದಾಯ ತೆರಿಗೆ ಇಲಾಖೆ ಮಾತ್ರವಲ್ಲದೆ, ಕಂದಾಯ ಗುಪ್ತಚರ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯಗಳು ಕೂಡ ಹಲವು ನಿಯಮಗಳನ್ನು ಮೇಲ್ಗಂಡ ಮೊಬೈಲ್ ಕಂಪೆನಿಗಳು ಉಲ್ಲಂಘಿಸಿವೆ ಎಂದು ಆರೋ ಪಿಸಿವೆ. ಜತೆಗೆ ತನಿಖೆಯನ್ನು ಈಗಾಗಲೇ ಕೈಗೊಂಡಿವೆ.
ಆ್ಯಪ್ ಎಂಬ ಸಾಲದ ಶೂಲ
ಲೈಫ್ ವ್ಯಾಲೆಟ್, ಬಾಕ್ಸ್ ಕ್ಯಾಶ್, ದತ್ತಾ ರುಪೀ, ಮಾಲೂ ವ್ಯಾಲೆಟ್… ಇದೆಲ್ಲ ಸುಲಭದಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸಿ ಜೀವಕ್ಕೇ ಎರವಾಗುವ ಚೀನ ಸಾಲದ ಆ್ಯಪ್ ಗಳು . 2 ದಿನಗಳ ಹಿಂದಷ್ಟೇ ತೆಲಂಗಾಣದ ಮಹಿಳೆ ಈ ಜಾಲಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜು. 13ರಂದು ಮುಂಬಯಿಯ ಮಿಡ್ ಡೇ ಪತ್ರಿಕೆ ವರದಿ ಪ್ರಕಾರ ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಚೀನದ ಸಾಲದ ಆ್ಯಪ್ ಜಾಲ ಕಾರ್ಯವೆಸಗುತ್ತಿದೆ. ಇಂಥ ಆ್ಯಪ್ ಗಳ ಐಪಿ ವಿಳಾಸದ ಮೂಲ ಪತ್ತೆ ಮಾಡಿದಾಗ ಚೀನ ಮೂಲವನ್ನೇ ತೋರಿಸುತ್ತಿತ್ತು. ಅದರ ಕಿಂಗ್‌ಪಿನ್‌ಗಳು ನೇಪಾಲ ಮತ್ತು ಬಾಂಗ್ಲಾದೇಶದಲ್ಲಿ ಇರುವ ಬ್ರಾಂಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಬಳಕೆ ಮಾಡಿ, ವಾಟ್ಸ್‌ಆ್ಯಪ್ ನಂಬರ್‌ಗಳ ಮೂಲಕ ಸಾಲ ಪಡೆದವರಿಗೆ ಕಿರುಕುಳ ಕೊಡುತ್ತಿದ್ದುದು ಪತ್ತೆಯಾಗಿದೆ. ಜತೆಗೆ ಕರ್ನಾಟಕದಿಂದ ಯುಪಿಐ ಮೂಲಕ ಮೊತ್ತವೂ ಪಾವತಿಯಾಗಿತ್ತು.
ಮೂಲ: ವಿವಿಧ ಆಂಗ್ಲ ವೆಬ್‌ಸೈಟ್‌ಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.