ಇಂಗ್ಲೆಂಡ್ ಏಕದಿನ ತಂಡದಿಂದ ಟಿ20 ಬ್ಲಾಸ್ಟ್ ತಂಡಕ್ಕೆ
Team Udayavani, Jul 15, 2022, 11:44 PM IST
ಲಂಡನ್: ಇಂಗ್ಲೆಂಡ್ ಏಕದಿನ ತಂಡದ ಮೂವರು ಆಟಗಾರರನ್ನು ಟಿ20 ಬ್ಲಾಸ್ಟ್ ಪಂದ್ಯಗಳಿಗಾಗಿ ಬಿಡುಗಡೆ ಗೊಳಿಸಲಾಗಿದೆ. ಇವರೆಂದರೆ ಹ್ಯಾರಿ ಬ್ರೂಕ್, ಫಿಲ್ ಸಾಲ್ಟ್ ಮತ್ತು ಮ್ಯಾಟ್ ಪಾರ್ಕಿನ್ಸನ್.
ಟಿ20 ಬ್ಲಾಸ್ಟ್ ಕೂಟದ 2 ಸೆಮಿ ಫೈನಲ್ ಮತ್ತು ಫೈನಲ್ ಜು. 16ರ ಶನಿವಾರ ನಡೆಯಲಿದೆ. ಇದು ಮುಗಿದ ಬೆನ್ನಲ್ಲೇ ಈ 3 ಆಟಗಾರರು ಇಂಗ್ಲೆಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
“ಶುಕ್ರವಾರ ಮೂವರೂ ತಮ್ಮ ತಂಡ ಗಳನ್ನು ಸೇರಿಕೊಳ್ಳಲು ಎಜ್ಬಾಸ್ಟನ್ಗೆ ತೆರಳಿದ್ದಾರೆ. ಈ ಪಂದ್ಯಗಳನ್ನು ಪೂರೈಸಿ ರವಿವಾರದ ಏಕದಿನ ಪಂದ್ಯಕ್ಕಾಗಿ ಮರಳಿ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳುವರು’ ಎಂದು ಇಸಿಬಿ ಪ್ರಕಟಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.