ಮಧ್ಯಪ್ರದೇಶದಲ್ಲಿ ಮಳೆ ಹಾವಳಿ: ಮಳೆ ರಾದ್ಧಾಂತ; ಪಾಲ್ಗಾರ್ ಜಿಲ್ಲೆಗೆ ರೆಡ್ ಅಲರ್ಟ್
ತೆಲಂಗಾಣ, ಹರಿಯಾಣ, ಮಹಾರಾಷ್ಟ್ರದಲ್ಲಿ ಅವಘಡ
Team Udayavani, Jul 16, 2022, 12:16 AM IST
ಹೊಸದಿಲ್ಲಿ: ಮುಂಗಾರು ಮಾರುತದ ಅಲೆಗಳ ಪ್ರಭಾವ ಮತ್ತಷ್ಟು ಜೋರಾಗಿದ್ದು ಇಡೀ ದೇಶದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಮಧ್ಯಪ್ರದೇಶದ ನರ್ಮದಾಪುರಂ ಪ್ರಾಂತದ ಮೂರು ಜಿಲ್ಲೆಗಳಿಗೆ “ಆರೆಂಜ್ ಅಲರ್ಟ್’ ನೀಡಲಾಗಿದೆ. ಮಹಾ ರಾಷ್ಟ್ರದ ಪಾಲ್ಗಾರ್‌ನಲ್ಲಿ “ರೆಡ್ ಅಲರ್ಟ್’ ಘೋಷಿಸಲಾಗಿದೆ.
ತೆಲಂಗಾಣದಲ್ಲಿ ಮಳೆಯ ಹಾನಿ ಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತರೊಬ್ಬರು ಪ್ರವಾಹದಲ್ಲಿ ಕೊಚ್ಚಿ ಕೊಂಡು ಹೋಗಿದ್ದಾರೆ. ಹರಿಯಾಣದಲ್ಲಿ ಎರಡು ಸಾವು ಸಂಭವಿಸಿವೆ. ಶುಕ್ರವಾರದ ಮಳೆಯ ರಾದ್ಧಾಂತದಲ್ಲಿ ಮಹಾ ರಾಷ್ಟ್ರದಲ್ಲಿ ನಾಲ್ಕು ಜನರು ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 99ಕ್ಕೇರಿದೆ.
ಮಧ್ಯಪ್ರದೇಶದಲ್ಲಿ ಹಾವಳಿ: ಕಳೆದೆರಡು ದಿನಗಳಿಂದ ಧಾರಾಕಾರ ವಾಗಿ ಮಳೆಯಾಗುತ್ತಿರುವ ನರ್ಮ ದಾಪುರಂ ಪ್ರಾಂತದಲ್ಲಿ ರೈಲು ಹಳಿಗಳು ಕಿತ್ತು ಹೋಗಿ, ರೈಲು ಸಂಚಾರ ಅಸ್ತವ್ಯಸ್ತವಾಗಿತ್ತು. ಅದರಲ್ಲೂ ವಿಶೇಷವಾಗಿ, ಮಹಾರಾಷ್ಟ್ರದ ನಾಗ್ಪುರಕ್ಕೆ ಸಂಪರ್ಕ ಕಲ್ಪಿಸುವ ರೈಲು ಸಂಚಾರ ಸ್ತಬ್ಧವಾಗಿತ್ತು. ಅದರ ಬೆನ್ನಲ್ಲೇ ಈ ಪ್ರಾಂತದ ನರ್ಮದಾಪುರಂ, ಹಾರ್ದಾ ಹಾಗೂ ಬೇತುಲ್ ಜಿಲ್ಲೆಗಳಲ್ಲಿ ಭಾರಿಯಿಂದ ಅತೀ ಭಾರಿಯಾಗಿ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ. ಅಂದಾಜು 64.5 ರಿಂದ 204 ಮಿ.ಮೀ.ನಷ್ಟು ಮಳೆ ಯಾಗುತ್ತದೆ ಎಂದು ಹೇಳಲಾಗಿದೆ.
ಇದಲ್ಲದೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್, ಜಬಲ್ಪುರ ಸೇರಿದಂತೆ 21 ಜಿಲ್ಲೆಗಳಿಗೆ ಎಲ್ಲೊ ಅಲರ್ಟ್ ನೀಡಲಾಗಿದೆ.
ಮನೆ ಕುಸಿತದಿಂದ ವ್ಯಕ್ತಿ ಸಾವು: ತೀವ್ರ ಮಳೆಗೆ ತುತ್ತಾಗಿರುವ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಬಾಬುಲ್‌ಖೇಡಾ ಪ್ರಾಂತದ ತೀನ್ ಮುಂಡಿ ಚೌಕ್‌ನಲ್ಲಿ ಮನೆಯೊಂದು ಕುಸಿದ ಪರಿಣಾಮ, ಕಿಶೋರ್ ಕೋಸರ್ವಾರ್ (45) ಎಂಬ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಪತ್ನಿ ಕೌಸಲ್ಯಾ (40) ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಹರಿಯಾಣದಲ್ಲಿ 2 ಸಾವು: ಬಿರುಗಾಳಿ ಸಹಿತ ಮಳೆಗೆ ಅಂಗಡಿ ಮುಂಗಟ್ಟುಗಳು ಕುಸಿದ ಪರಿಣಾಮವಾಗಿ ಇಬ್ಬರು ಸಾವಿಗೀಡಾಗಿರುವ ಘಟನೆ ಹರಿ ಯಾಣದ ಸೋನಿಪತ್‌ನ ಗೊಹಾನಾ ಪ್ರಾಂತದಲ್ಲಿ ನಡೆದಿದೆ. ಮೃತ ಪಟ್ಟವರಿಬ್ಬರೂ ತರಕಾರಿ ವರ್ತಕರೆಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿ 2 ಸಾವು: ಉತ್ತರ ಪ್ರದೇಶದ ಮವೂ ಜಿಲ್ಲೆಯಲ್ಲಿ ನವಾಲ್ಪುರ ಎಂಬ ಹಳ್ಳಿಯಲ್ಲಿ ಸಿಡಿಲು ಬಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ಉಷಾ ಚೌಹಾನ್ (35) ಮತ್ತು ದೇವ್ ಲಾಲಿ (34) ಎಂಬುವವರು ಸ್ಥಳದವಲ್ಲಿಯೇ ಮೃತಪಟ್ಟಿದ್ದಾರೆ. ಇವರ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಕೌಸಲ್ಯಾ ಎಂಬ ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಹಾರಾಷ್ಟ್ರದಲ್ಲಿ 4 ಸಾವು: ಮಹಾರಾಷ್ಟ್ರದಲ್ಲಿ ಶುಕ್ರವಾರದಂದು ಮಳೆಗೆ ಸಂಬಂಧಿಸಿದ ಪ್ರತ್ಯೇಕ
ದುರ್ಘ ಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ, ಜೂ. 1ರಿಂದ ಇಲ್ಲಿಯ ವರೆಗೆ ಮಳೆಯಿಂದಾಗಿ ಮರಣ ಹೊಂದಿದವರ ಸಂಖ್ಯೆ 99ಕ್ಕೇರಿದೆ. ಗಾಡಿcರೋಲಿ, ಭಂಡಾರಾ, ಪಾಲ್ಗಾರ್, ಚಂದ್ರಾಪುರ, ಗೊಂಡಿಯಾ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿ ತಗ್ಗು ಪ್ರದೇಶ ಜಲಾವೃತವಾಗಿರುವ ಬಗ್ಗೆ ವರದಿಯಾಗಿದೆ.
ದಕ್ಷಿಣದಲ್ಲಿ ನಿಲ್ಲದ ವರುಣನ ಅಬ್ಬರ
ದಕ್ಷಿಣ ಭಾರತದಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ತೆಲಂಗಾಣದಲ್ಲಿ ನೆರೆ ಸ್ಥಳಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ತಂಡಗಳಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುವಂತೆ ಅಧಿಕಾರಿಗಳು ಮುಖ್ಯಂತ್ರಿ ಕೆ.ಚಂದ್ರಶೇಖರ್ ರಾವ್ ಆದೇಶಿಸಿದ್ದಾರೆ. ಅಗತ್ಯವಿರುವಲ್ಲಿ ಹೆಲಿಕಾಪ್ಟರ್‌ನೂ° ಬಳಸಿ ಜನರನ್ನು ರಕ್ಷಿಸಲು ಸೂಚಿಸಲಾಗಿದೆ. ಜು.12ರಂದು ರಾಯ್ಕಲ್ ಜಿಲ್ಲೆಯಲ್ಲಿ ಪ್ರವಾಹದ ಬಗ್ಗೆ ವರದಿ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಪತ್ರಕರ್ತ ಜಮೀರ್(36) ಮೃತದೇಹವು ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಕೇರಳದ ಕೋಜಿಕೋಡ್‌ನ ವೆಲ್ಲಯಿಲ್ ಕರಾವಳಿ ತೀರದ ಬಳಿ ಶುಕ್ರವಾರ ಬೆಳಗ್ಗೆ ಚಂಡಮಾರುತ ಎದ್ದಿದ್ದು, ಸ್ಥಳೀಯರ ಜನಜೀವನಕ್ಕೆ ಅಡ್ಡಿ ಮಾಡಿದೆ. ಸುಮಾರು 10 ನಿಮಿಷಗಳ ಕಾಲ ಉಂಟಾದ ಚಂಡಮಾರುತದಿಂದಾಗಿ ಅನೇಕ ದೋಣಿಗಳು ತಲೆ ಕೆಳಗಾಗಿವೆ ಹಾಗೂ ಹತ್ತಿರದ ಮನೆಗಳಿಗೆ ಹಾನಿಯುಂಟಾಗಿದೆ.
ವರನ ಮನೆಗೆ ದೋಣಿ ಪ್ರಯಾಣ
ಜಲಾವೃತವಾಗಿದ್ದ ರಸ್ತೆಯಲ್ಲಿ ಪ್ರಯಾಣಿಸಲಾಗದೆ, ವಧುವೊಬ್ಬರು ವರನ ಮನೆಗೆ ದೋಣಿಯಲ್ಲಿ ಪ್ರಯಾಣಿಸಿ ಮದುವೆಯಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕೋಣಸೀಮ ಜಿಲ್ಲೆಯ ಪ್ರಶಾಂತಿ ಅದೇ ಜಿಲ್ಲೆಯ ವರ ಅಶೋಕ್‌ರನ್ನು ಇತ್ತೀಚೆಗೆ ವರಿಸಿದ್ದಾರೆ.
ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ನಗರಗಳು ಮತ್ತು ರಸ್ತೆಗಳು ಜಲಾವೃತವಾಗಿದೆ. ಆದರೆ ಮದುವೆ ಮುಂದೆ ಹಾಕಲು ಒಪ್ಪದ ಪ್ರಶಾಂತಿ ದೋಣಿ ಮೂಲಕ ಅಶೋಕ್ ಮನೆಗೆ ತೆರಳಲು ನಿರ್ಧರಿಸಿದ್ದಾರೆ. ವಧುವಾಗಿ ಸಿಂಗಾರಗೊಂಡ ಪ್ರಶಾಂತಿ ತಮ್ಮ ಕುಟುಂಬದ ಜತೆ ದೋಣಿಯಲ್ಲಿ ಅಶೋಕ್ ಮನೆಯತ್ತ ತೆರಳುತ್ತಿರುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.