ಮೆಕ್ಸಿಕೋ:ನಟೋರಿಯಸ್ ಡ್ರಗ್ ಲಾರ್ಡ್ಸ್ ರಾಫೆಲ್ ಬಂಧನದ ಬೆನ್ನಲ್ಲೇ ಹೆಲಿಕಾಪ್ಟರ್ ಪತನ;14 ಸಾವು
ರಾಫೆಲ್ ನನ್ನು ಅಮೆರಿಕಕ್ಕೆ ಗಡಿಪಾರು ಮಾಡುವಂತೆ ಮನವಿ ಮಾಡಿಕೊಂಡಿದೆ.
Team Udayavani, Jul 16, 2022, 1:35 PM IST
ಮೆಕ್ಸಿಕೋ: ಕುಖ್ಯಾತ ಮಾದಕ ವಸ್ತು ಕಳ್ಳಸಾಗಣೆದಾರನನ್ನು ಬಂಧಿಸಿದ ನಂತರ ಬ್ಲ್ಯಾಕ್ ಹವಾಕ್ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ 14 ಮಂದಿ ಸಾವನ್ನಪ್ಪಿರುವ ಘಟನೆ ಸಿನಾಲೋವಾದಲ್ಲಿ ನಡೆದಿರುವುದಾಗಿ ಮೆಕ್ಸಿಕೋ ನೌಕಾ ಪಡೆ ತಿಳಿಸಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ 1.80 ಕೋಟಿ ವಂಚನೆ: ನಿರ್ಮಾಪಕ ಸೆರೆ
ಹೆಲಿಕಾಪ್ಟರ್ ಪತನದ ಕಾರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಆದರೆ ಮಾದಕ ಕಳ್ಳಸಾಗಣೆ ದೊರೆ ರಾಫೆಲ್ ಕ್ಯಾರೋ ಕ್ವಿಂಟೆರೊನಾ ಬಂಧನದ ವೇಳೆ ಈ ದುರಂತ ಸಂಭವಿಸಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನೌಕಾಪಡೆ ಪ್ರಕಟಣೆಯಲ್ಲಿ ಹೇಳಿದೆ.
ಶುಕ್ರವಾರ ಮೆಕ್ಸಿಕೋ ನೌಕಾಪಡೆ 1985ರಲ್ಲಿ ಅಮೆರಿಕದ ಮಾದಕ ವಸ್ತು ನಿಗ್ರಹ ಪಡೆಯ ಏಜೆಂಟ್ ಗೆ ಕಿರುಕುಳ ನೀಡಿ ಹತ್ಯೆಗೈದ ಪ್ರಕರಣದಲ್ಲಿ ದೋಷಿಯಾಗಿದ್ದ ನಟೋರಿಯಸ್ ಡ್ರಗ್ ಲಾರ್ಡ್ ರಾಫೆಲ್ ಕ್ಯಾರೋ ಕ್ವಿಂಟೆರೊನಾನನ್ನು ಬಂಧಿಸಿತ್ತು.
ಕುಖ್ಯಾತ ಮಾದಕ ವಸ್ತು ಕಳ್ಳಸಾಗಣೆದಾರ ರಾಫೆಲ್ ಬಂಧನದ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ, ಮೆಕ್ಸಿಕೋ ನೌಕಾಪಡೆ ಅಧಿಕಾರಿಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದೆ. ಸಮಯವನ್ನು ವ್ಯರ್ಥ ಮಾಡದೇ ಶೀಘ್ರವಾಗಿ ರಾಫೆಲ್ ನನ್ನು ಅಮೆರಿಕಕ್ಕೆ ಗಡಿಪಾರು ಮಾಡುವಂತೆ ಮನವಿ ಮಾಡಿಕೊಂಡಿದೆ.
ಮೆಕ್ಸಿಕೋದ ಮಾದಕ ವಸ್ತು ಕಳ್ಳಸಾಗಣೆಯ ಕೇಂದ್ರ ಸ್ಥಾನವಾದ ಸಿನಾಲೋವಾ ಪ್ರದೇಶದಲ್ಲಿ ಕ್ಯಾರೋ ಕ್ವಿಂಟೆರೊನಾನನ್ನು ಬಂಧಿಸಲಾಗಿದೆ ಎಂದು ಮೆಕ್ಸಿಕೋ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.