ಬ್ಯಾಟಿಂಗ್ ಕ್ಲಿಕ್ ಆದರಷ್ಟೇ ಸರಣಿ ಲಕ್: ಮ್ಯಾಂಚೆಸ್ಟರ್‌ನಲ್ಲಿ ನಿರ್ಣಾಯಕ ಏಕದಿನ
ವಿಶ್ವ ಚಾಂಪಿಯನ್ನರನ್ನು ಮಣಿಸೀತೇ ಭಾರತ?
Team Udayavani, Jul 17, 2022, 7:00 AM IST
ಮ್ಯಾಂಚೆಸ್ಟರ್: ಲಾರ್ಡ್ಸ್ ನಲ್ಲೇ ಏಕದಿನ ಸರಣಿ ವಶಪಡಿಸಿಕೊಳ್ಳ ಬಹುದಾದ ಅವಕಾಶವನ್ನು ಕೈಯಾರೆ ಕಳೆದುಕೊಂಡ ಭಾರತವೀಗ, ರವಿವಾ ರದ ಮ್ಯಾಂಚೆಸ್ಟರ್ ಮುಖಾಮುಖಿಯನ್ನು ತೀವ್ರ ಒತ್ತಡದಲ್ಲಿಯೇ ಆಡಬೇಕಿದೆ. ಮೊದಲೆರಡು ಪಂದ್ಯ ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ “ಭವಿಷ್ಯ’ ನುಡಿಯುವುದಾದರೆ ಬ್ಯಾಟಿಂ ಗ್‌ನಲ್ಲಿ ಕ್ಲಿಕ್ ಆದ ತಂಡಕ್ಕಷ್ಟೇ ಸರಣಿ ಗೆಲುವಿನ ಲಕ್ ಎನ್ನಬೇಕಾಗುತ್ತದೆ.
ಓವಲ್‌ನಲ್ಲಿ ಇಂಗ್ಲೆಂಡ್ 110ಕ್ಕೆ ಕುಸಿದುದರಿಂದ ಭಾರತದ ಬ್ಯಾಟಿಂಗ್ ಸರದಿಯ ಮೇಲೆ ಯಾವುದೇ ಒತ್ತಡ ಬೀಳಲಿಲ್ಲ. ರೋಹಿತ್ ಶರ್ಮ-ಶಿಖರ್ ಧವನ್ ಇಬ್ಬರೇ ಸೇರಿ ಈ ಮೊತ್ತವನ್ನು ಬೆನ್ನಟ್ಟಿದರು. ಆದರೆ ಲಾರ್ಡ್ಸ್‌ನಲ್ಲಿ ಪರಿಸ್ಥಿತಿ ಉಲ್ಟಾ ಹೊಡೆಯಿತು. ಇಲ್ಲಿ ಲಭಿಸಿದ್ದು 247 ರನ್ ಟಾರ್ಗೆಟ್. ಇದೇನೂ ದೊಡ್ಡ ಸವಾಲಲ್ಲ. ಆದರೆ ಇಂಗ್ಲೆಂಡ್ ಬೌಲರ್ ತಿರುಗಿ ಬಿದ್ದರು; ರೀಸ್ ಟಾಪ್ಲಿ ಟಾಪ್ ಕ್ಲಾಸ್ ಬೌಲಿಂಗ್ ಪ್ರದರ್ಶಿಸಿದರು. ಭಾರತದ ಬ್ಯಾಟಿಂಗ್ ಲಯ ತಪ್ಪಿತು. ಪರಿಣಾಮ, 100 ರನ್ನುಗಳ ದೊಡ್ಡ ಸೋಲು.
ಆಕ್ರಮಣಕಾರಿ ಆಟ ಅಗತ್ಯ
ಎಚ್ಚರಿಕೆಯಿಂದ ಕೂಡಿದ ಆಕ್ರಮಣಕಾರಿ ಹಾಗೂ ನಿರ್ಭೀತ ಆಟವೊಂದೇ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರವಾಗಬಲ್ಲದು. ನಾಯಕ ರೋಹಿತ್ ಶರ್ಮ ಮುನ್ನುಗ್ಗಿ ಬಾರಿಸತೊಡಗಿದರೆ ಟೀಮ್ ಇಂಡಿಯಾದ ಅರ್ಧದಷ್ಟು ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ರೋಹಿತ್ ಓವಲ್‌ನಲ್ಲಿ ಸಿಡಿದ ಪರಿಣಾಮ ಟೀಮ್ ಇಂಡಿಯಾಕ್ಕೆ ನೋಲಾಸ್ ಜಯ ಒಲಿಯಿತು.
ಲಾರ್ಡ್ಸ್ ನಲ್ಲಿ ರೋಹಿತ್ ಸೊನ್ನೆ ಸುತ್ತಿದರು, ಸತತ 4 ಓವರ್ ಮೇಡನ್ ಆಯಿತು, ಭಾರತದ ಬ್ಯಾಟಿಂಗ್ ಹಳಿ ತಪ್ಪಿತು. ಒಂದರಲ್ಲಿ 10 ವಿಕೆಟ್ ಜಯವಾದರೆ, ಇನ್ನೊಂದರಲ್ಲಿ 100 ರನ್ ಸೋಲು. ತಂಡವೊಂದರ ಅಸ್ಥಿರ ಆಟಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.
ವಿರಾಟ್ ಕೊಹ್ಲಿ ರನ್ ಬರಗಾಲ ದಲ್ಲಿದ್ದಾರೆ ಎಂಬುದನ್ನು ಹೊರತು ಪಡಿಸಿದರೆ ಭಾರತ ಬ್ಯಾಟಿಂಗ್ ಖಂಡಿತ ವಾಗಿಯೂ ಕಳಪೆಯಲ್ಲ. ಮಧ್ಯಮ ಕ್ರಮಾಂಕ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಅವರಂಥ ಹೊಡಿಬಡಿ ಆಟಗಾರಿಂದಲೇ ತುಂಬಿದೆ. ಇವರೆಲ್ಲ ಹೆಚ್ಚು ಜವಾಬ್ದಾರಿಯುತವಾಗಿ ಆಡಿ ಕ್ರೀಸ್ ಆಕ್ರಮಿಸಿಕೊಳ್ಳಬೇಕಾದುದು ಮುಖ್ಯ. ಒಂದಿಬ್ಬರು ಸಿಡಿದರೂ ಸವಾಲನ್ನು ಸುಲಭದಲ್ಲಿ ಮೆಟ್ಟಿ ನಿಲ್ಲಬಹುದು.
ಅರ್ಧ ಶತಕ ಬಾರಿಸದ ಇಂಗ್ಲೆಂಡ್!
ಎರಡೂ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ಪರಿಣಾಮಕಾರಿಯಾ ಗಿಯೇ ಇತ್ತು. ವಿಶ್ವ ಚಾಂಪಿಯನ್ನರಿಗೆ ಸರಣಿಯಲ್ಲಿ ಈವರೆಗೆ ಒಂದೂ ಅರ್ಧ ಶತಕ ಬಾರಿಸಲು ಸಾಧ್ಯವಾಗಲಿಲ್ಲ ಎಂಬುದು ಭಾರತದ ಬೌಲಿಂಗ್ ಪಡೆಯ ಹೆಗ್ಗಳಿಕೆಯೇ ಆಗಿದೆ. ಆಂಗ್ಲರ ಬ್ಯಾಟಿಂಗ್ ಸರದಿಯನ್ನೊಮ್ಮೆ ನೋಡಿ… 7ನೇ ಕ್ರಮಾಂಕದ ತನಕ ಬಿಗ್ ಹಿಟ್ಟರ್‌ಗಳೇ ತುಂಬಿದ್ದಾರೆ. ರಾಯ್, ಬೇರ್‌ಸ್ಟೊ, ರೂಟ್, ಸ್ಟೋಕ್ಸ್, ಬಟ್ಲರ್, ಲಿವಿಂಗ್‌ಸ್ಟೋನ್ ಮತ್ತು ಅಲಿ. ಇವರಲ್ಲಿ 2-3 ಮಂದಿ ಕ್ರೀಸ್ ಆಕ್ರಮಿಸಿಕೊಂಡರೂ ಸಾಕು, ಮುನ್ನೂರರ ಮೊತ್ತಕ್ಕೇನೂ ಕೊರತೆ ಇಲ್ಲ. ಭಾರತ ಈ ಎಚ್ಚರಿಕೆಯಲ್ಲೇ ಬೌಲಿಂಗ್ ಸಂಘಟಿಸಬೇಕಿದೆ.
ಇಂದು 3ನೇ ಏಕದಿನ
ಸ್ಥಳ: ಮ್ಯಾಂಚೆಸ್ಟರ್
ಆರಂಭ: 3.30
ಪ್ರಸಾರ: ಸೋನಿ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್
BJP: ಅಶಿಸ್ತಿನ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿ: ಡಿವಿಎಸ್
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.