ಮೈಸೂರಿನಲ್ಲಿ ಶಿಲಾಶಾಸನಗಳ ಡಿಜಿಟಲೀಕರಣ: ಜಗತ್ತಿನ ಎಲ್ಲರಿಗೂ ಲಭ್ಯವಾಗಲಿವೆ ಶ್ರೀಮಂತ ಶಾಸನಗಳು
Team Udayavani, Jul 17, 2022, 7:13 AM IST
ಹೊಸದಿಲ್ಲಿ: ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ)ಯ ಸಂಗ್ರಹ ದಲ್ಲಿರುವ ಶ್ರೀಮಂತ ಶಿಲಾಶಾಸನ ಸಂಗ್ರಹ ಶೀಘ್ರದಲ್ಲೇ ಡಿಜಿಟಲ್ ರೂಪದಲ್ಲಿ ಜಗತ್ತಿಗೆ ಲಭ್ಯವಾಗಲಿದೆ. ವಿಶೇಷವೆಂದರೆ, ಈ ಕೆಲಸ ಆರಂಭವಾಗಿರುವುದು ಮೈಸೂರಿನಲ್ಲಿ.
1887ರಿಂದೀಚೆಗೆ ಇಲ್ಲಿ ಸಂಗ್ರಹಿಸಿರುವ ಶಾಸನಗಳ ಡಿಜಿಟಲೀಕರಣಕ್ಕೆ ಪ್ರಕ್ರಿಯೆಗೆ ಮೈಸೂರಿನಲ್ಲಿ ಇರುವ ಪ್ರಾಚ್ಯವಸ್ತು ಇಲಾಖೆಯ ಶಿಲಾಶಾಸನ ವಿಭಾಗದ ಕಚೇರಿಯಲ್ಲಿ ಶನಿವಾರ ಎಎಸ್‌ಐ ಪ್ರಧಾನ ನಿರ್ದೇಶಕಿ ವಿದ್ಯಾವತಿ ಚಾಲನೆ ನೀಡಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡಾಗ ಆಸಕ್ತರ ಅಧ್ಯಯನಕ್ಕೆ ಲಭ್ಯವಾಗಲಿವೆ.
ಮೈಕ್ರೋಫಿಲ್ಮ್ ರೂಪ
ಡಿಜಿಟಲೀಕರಣಗೊಂಡ ದತ್ತಾಂಶವನ್ನು ಮೈಕ್ರೋಫಿಲ್ಮ್ ಗಳ ರೂಪದಲ್ಲಿ ಆರ್ಕ್‌ಟಿಕ್ ವರ್ಲ್ಡ್ ಆರ್ಕೈವ್ (ಎಡಬ್ಲ್ಯುಎ)ನಲ್ಲಿ ವಿಶ್ವದ ನಾಗರಿಕತೆಯ ನೆನಪಾಗಿ ಶಾಶ್ವತವಾಗಿ ಇರಿಸಲಾಗುತ್ತದೆ. ಮೈಸೂರಿನ ಘಟಕವು 1887ರಿಂದ ಹಸ್ತಚಾಲಿತವಾಗಿ ತೆಗೆದಿರುವ ಶಾಸನಗಳ ಕಾಗದದ ಪ್ರತಿಗಳ ಭಂಡಾರ ವಾಗಿದೆ.
ಕನ್ನಡ ಸೇರಿ ಹಲವು ಭಾಷೆಗಳ ಶಾಸನ
ಕನ್ನಡ, ತಮಿಳು, ಸಂಸ್ಕೃತ, ಪಾಲಿ, ಪ್ರಾಕೃತ, ತೆಲುಗು, ಬಂಗಾಳಿ, ಅರೇಬಿಕ್, ಪರ್ಷಿಯನ್ ಸಹಿತ ಹಲವು ಭಾಷೆಗಳ ಸುಮಾರು ಒಂದು ಲಕ್ಷದಷ್ಟು ಶಿಲಾಶಾಸನಗಳು ಮೈಸೂರಿನಲ್ಲಿವೆ.
ಈಗ ಇಲ್ಲಿ ಸುಮಾರು 40 ಶಾಸನಶಾಸ್ತ್ರಜ್ಞರು ಮತ್ತು ಪುರಾತತ್ವಜ್ಞರು ಶಿಲಾಶಾಸನಗಳ ದೃಢೀಕರಣ ಕೆಲಸ ಆರಂಭಿಸಿದ್ದಾರೆ. 20 ಡೇಟಾ ಎಂಟ್ರಿ ಆಪರೇಟರ್‌ಗಳು ಇವುಗಳನ್ನು ಮೆಟಾ ಡೇಟಾ ಮಾದರಿಯಲ್ಲಿ ಲಭ್ಯವಾಗುವಂತೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಪಾರ್ಜೆಕ್ಟ್‌ನಲ್ಲಿ ಭಾರತೀಯರು ಮಾತ್ರವಲ್ಲದೆ ಐರೋಪ್ಯ ದೇಶಗಳ ತಜ್ಞರು ಕೂಡ ಭಾಗಿಯಾಗಿದ್ದಾರೆ.
ಏನಿದು ಆರ್ಕ್‌ಟಿಕ್ ವರ್ಲ್ಡ್ಆರ್ಕೈವ್?
2017ರಲ್ಲಿ ಸ್ಥಾಪನೆಯಾದ ಆರ್ಕ್‌ಟಿಕ್ ವರ್ಲ್ಡ್ ಆರ್ಕೈವ್ (ಎಡಬ್ಲ್ಯುಎ) ಸುಮಾರು 15ಕ್ಕೂ ಹೆಚ್ಚು ದೇಶಗಳ ಮೌಲ್ಯಯುತ ಡಿಜಿಟಲ್ ಕಲಾಕೃತಿಗಳು ಮತ್ತು ಮಾಹಿತಿಯ ಸಂಪತ್ತನ್ನು ಹೊಂದಿದೆ. ನಾರ್ವೆಯ ಸ್ವಾಲ್‌ಬಾರ್ಡ್ ದ್ವೀಪ ಸಮೂಹದಲ್ಲಿರುವ ಆರ್ಕ್‌ಟಿಕ್ ಪರ್ವತವೊಂದರ ಒಳಗೆ ಇದನ್ನು ನಿರ್ಮಿಸಲಾಗಿದೆ. ಈ ಪ್ರದೇಶವನ್ನು 42 ದೇಶಗಳು ಸೇನಾ ರಹಿತ ವಲಯವೆಂದು ಘೋಷಿಸಿವೆ. ಎಲ್ಲ ರೀತಿಯ ಸೈಬರ್ ಮತ್ತು ಪರಮಾಣು ದಾಳಿಯಿಂದ ಜಗತ್ತಿನ ದತ್ತಾಂಶ ಗಳನ್ನು ಸುರಕ್ಷಿತವಾಗಿಡುವ ಕೆಲಸವನ್ನು ಈ ಕೇಂದ್ರ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.