ಮಂಡಿಯುದ್ದ ಗುಂಡಿಬಿದ್ದು ಕೆರೆಯಂತಾದ ರಸ್ತೆ
Team Udayavani, Jul 17, 2022, 3:51 PM IST
ರಾಮನಗರ: ನಗರದ ಮಾಗಡಿ ಮುಖ್ಯರಸ್ತೆಯ ಅವ್ಯವಸ್ಥೆ ಹಾಗೂ ಮಂಡಿಯುದ್ದ ಗುಂಡಿ ಬಿದ್ದಿದ್ದು, ನೀರು ತುಂಬಿದ್ದರಿಂದ ಆಗುತ್ತಿರುವ ಅವಾಂತರ ಖಂಡಿಸಿ, ಸಾರ್ವಜನಿಕರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ನಗರದ ಕೆಂಪೇಗೌಡ ಸರ್ಕಲ್ ಬಳಿಯ ಮಾಗಡಿ ಮುಖ್ಯರಸ್ತೆಯಾದ ರಾಜ್ಯ ಹೆದ್ದಾರಿ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಆರಸ್ತೆಯಲ್ಲಿ ಸಂಚಾರಿಸುತ್ತವೆ. ಆದರೆ, ರಾಜ್ಯ ಹೆದ್ದಾರಿಸಂಪೂರ್ಣವಾಗಿ ಗುಂಡಿ ಬಿದ್ದಿದ್ದು, ವಾಹನ ಸವಾರರುಪ್ರಾಣವನ್ನ ಕೈಯಲ್ಲಿ ಹಿಡಿದು ಸಂಚಾರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರು ತುಂಬಿದ ಮಂಡಿಯುದ್ದ ಗುಂಡಿ: ತಾಲೂಕು ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಯಲ್ಲೇ ಮಂಡಿಯುದ್ದ ಗುಂಡಿ ಬಿದ್ದಿದೆ. ಅಲ್ಲದೆ, ಕಳೆದ ಮೂರ್‍ನಾಲ್ಕು ದಿನಗಳಿಂದ ಎಡೆಬಿಡದ ಜಿಟಿಜಿಟಿ ಮಳೆಯ ಪರಿಣಾಮ ಗುಂಡಿ ತುಂಬಾ ನೀರು ನಿಂತಿದ್ದು, ರಸ್ತೆಕಾಣದಾಗಿದೆ. ಕರೆಯೋ, ರಸ್ತೆಯೋ ಎನ್ನುವಅನುಮಾನ ಹುಟ್ಟ ತೊಡಗಿದೆ. ಇದರಿಂದ ಇಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ.
ಅಕ್ಕಪಕ್ಕದಲ್ಲೇ ಮೂರ್‍ನಾಲ್ಕು ಶಾಲೆಗಳಿದ್ದು, ಅಲ್ಲಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಇದೇ ರಸ್ತೆಯಲ್ಲಿ ನಡೆದು ಹೋಗಬೇಕಿದೆ. ಕೆಲವರು ಬೈಕ್‌ಗಳಲ್ಲಿ ಸಂಚರಿಸುತ್ತಾರೆ, ಅದೇ ವೇಳೆಗೆ ಬಸ್ ಅಥವಾ ದೊಡ್ಡ ಯಾವುದೇ ವಾಹನ ಬಂದರೂ ಅದು ಸಾಗುವರಭಸಕ್ಕೆ ಕೊಳಚೆ ನೀರು ಮೈಮೇಲೆ ಬಿದ್ದು ಸಮವಸ್ತ್ರಗಲೀಜಾಗುವ ಸಾಧ್ಯತೆ ಹೆಚ್ಚಾಗಿದೆ. ಕೆಲವೊಮ್ಮೆ ಗುಂಡಿಯ ಆಳ ತಿಳಿಯದ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಕಳಪೆ ಕಾಮಗಾರಿ ಅವಾಂತರ: ಇದೀಗ ಹದಗೆಟ್ಟ ರಸ್ತೆಯನ್ನ ಕೇವಲ ಆರು ತಿಂಗಳ ಹಿಂದೆ ಲಕ್ಷಾಂತರ ರೂ. ವೆಚ್ಚ ಮಾಡಿ ಡಾಂಬರೀಕರಣ ಸಹ ಮಾಡಲಾಗಿತ್ತು. ಆದರೆ, ಕಾಮಗಾರಿ ಮುಗಿದು ಆರು ತಿಂಗಳಲ್ಲೇ ಇಡೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ರಸ್ತೆಯಲ್ಲಿಗುಂಡಿಗಳು ಬಿದ್ದು ನೀರು ತುಂಬಿಕೊಂಡಿತ್ತು. ಕಳಪೆ ಕಾಮಗಾರಿಯಿಂದ ಇಂತಹ ಅವಾಂತರ ಸೃಷ್ಟಿಯಾಗಿದೆ ಎನ್ನುತ್ತಾರೆ ಸ್ಥಳೀಯರಾದ ಕುಮಾರ್ ಮತ್ತು ಗೋಪಾಲ್.
ಮೊಂಡು ಚರ್ಮದ ಅಧಿಕಾರಿಗಳು: ರಸ್ತೆ ಹದಗೆಟ್ಟಿದೆ ಎಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಇತ್ತ ಚಿತ್ತ ಹರಿಸಿಲ್ಲ. ಇನ್ನು ಹೆದ್ದಾರಿಯಲ್ಲಿ ಕೇಬಲ್ ಲೈನ್ ಹಾಕಲು ಒಬ್ಬರು ಬಗೆದು ಗುಂಡಿಮಾಡ್ತಾರೆ, ಮತ್ತೂಬ್ಬರು ಯುಜಿಡಿ ನೆಪದಲ್ಲಿ ಬಗೀತಾರೆ. ಆದರೆ, ಸರಿಯಾಗಿ ಗುಂಡಿ ಮುಚ್ಚುವ ಕೆಲಸ ಮಾಡದ ಕಾರಣ ಇಂತಹ ಅವಾಂತರ ಸೃಷ್ಟಿಯಾಗಿದೆ. ಯಾರು ಏನೇ ಮಾಡಿದರೂ ಸಾರ್ವಜನಿಕರಿಗೆ ಮಾತ್ರ ತೊಂದರೆ ತಪ್ಪಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಿಸಿಗೆ ಕಾಮಗಾರಿ ಆರಂಭ: ಕಳೆದ ಹಲವು ತಿಂಗಳಿಂದ ರಸ್ತೆ ಹದಗೆಟ್ಟಿದ್ರು, ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಜನರ ಪ್ರತಿಭಟನೆಗೆ ಹೆದರಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಪ್ರತಿಭಟನಾನಿರತರ ಮನವೊಲಿಕೆಗೆ ಹರಸಾಹಸ ಪಟ್ಟು ಕೊನೆಗೆ ಕಾಮಗಾರಿ ಆರಂಭಿಸುತ್ತಲೇ ಪ್ರತಿಭಟನೆ ಕೈಬಿಟ್ಟು ಸುಮ್ಮನಾಗಿದ್ದು ಸಾರ್ವಜನಿಕರಿಗಿದ್ದ ಆಕ್ರೋಶದ ಮಟ್ಟವನ್ನು ತಿಳಿಸಿತ್ತು.
ಬೇಸತ್ತು ಪ್ರತಿಭಟನೆ: ಒಂದೊಂದು ಇಲಾಖೆಗಳ ಮೇಲೆ ಒಬ್ಬರೊಬ್ಬರು ಬೊಟ್ಟು ಮಾಡುತ್ತಿರುವ ಅಧಿಕಾರಿಗಳು, ಕಳಪೆ ಕಾಮಗಾರಿ ಮಾಡುವಾಗ ತೆಪ್ಪಗಿದ್ದರು. ಹದಗೆಟ್ಟ ರಸ್ತೆ ಸರಿಪಡಿಸುವಂತೆ ನೂರಾರು ಮನವಿ ಮಾಡಿದರೂ, ಸ್ಥಳೀಯ ಜನಪ್ರತಿನಿಧಿ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರು. ಬೇಸತ್ತು ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆಗಳ ವೈಷಮ್ಯ :
ರಸ್ತೆಯ ಮೂಲಕ ಹಾದು ಬರಲು ಹರಸಾಹಸ ಪಡುತ್ತಿರುವ ವಾಹನ ಚಾಲಕ ಪಾಡು ಹೇಳತೀರದಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಈ ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಪ್ರಾಣವನ್ನ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಇಲಾಖೆ ಇದು ನಗರಸಭೆಯವರ ಸಮಸ್ಯೆ ಅವರೇ ಸರಿಪಡಿಸಬೇಕು ಎನ್ನುವ ಹಾರಿಕೆ ಉತ್ತರ ನೀಡ್ತಾರೆ. ಆದರೆ, ನಗರಸಭೆ ಇದು ರಾಜ್ಯ ಹೆದ್ದಾರಿಯಾಗಿದ್ದು, ನಿಯಮಾನುಸಾರ ಲೋಕೋಪಯೋಗಿ ಇಲಾಖೆಯವರೇ ನಿರ್ವಹಣೆ ಮಾಡಬೇಕು ಎಂದು ಹೇಳುವ ಮೂಲಕ ರಸ್ತೆ ರಿಪೇರಿ ನಿರ್ಲಕ್ಷ್ಯ ಮಾಡುತ್ತಿದ್ದರು. ಇದರಿಂದ ರೊಚ್ಚಿಗೆದ್ದು ಜನ ಪ್ರತಿಭಟನೆ ನಡೆಸಬೇಕಾಯಿತು ಎನ್ನುತ್ತಾರೆ ಸ್ಥಳೀಯರು.
“ಅಕ್ಕಪಕ್ಕದಲ್ಲೇ ಮೂರ್‍ನಾಲ್ಕು ಪ್ರತಿಷ್ಠಿತ ಖಾಸಗಿ ಶಾಲೆಗಳಿದ್ದು, ಅಲ್ಲಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಇದೇ ರಸ್ತೆಯಲ್ಲಿ ನಡೆದು ಹೋಗಬೇಕಿದೆ.ಕೆಲವರು ಬೈಕ್‌ಗಳಲ್ಲಿ ಸಂಚರಿಸುತ್ತಾರೆ. ಅದೇ ವೇಳೆಗೆ ಬಸ್ ಅಥವಾ ದೊಡ್ಡಯಾವುದೇ ವಾಹನ ಬಂದರೂ, ಅದು ಸಾಗುವ ರಭಸಕ್ಕೆ ಕೊಳಚೆ ನೀರುಮೈಮೇಲೆ ಬಿದ್ದು ಸಮವಸ್ತ್ರ ಗಲೀಜಾಗುವ ಸಾಧ್ಯತೆ ಹೆಚ್ಚಾಗಿದೆ. ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಈಗಲಾದರೂ ಗುಣ ಮಟ್ಟದ ಕಾಮಗಾರಿ ಮಾಡಲಿ. – ಕೃಷ್ಣಪ್ಪ, ಸ್ಥಳೀಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.