ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್: ಭಾರತದ ಶೂಟಿಂಗ್ ತಂಡಕ್ಕೆ ರಜತ ಪದಕ
Team Udayavani, Jul 17, 2022, 11:55 PM IST
ಚಾಂಗ್ವನ್: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಸಂಜೀವ್ ರಜಪೂತ್, ಚೈನ್ ಸಿಂಗ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನು ಒಳಗೊಂಡ ಭಾರತ 3ಪಿ ತಂಡ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇರಿಸಿದೆ.
ವನಿತೆಯರ 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಅಂಜುಮ್ ಮೌದ್ಗಿಲ್ ಕಂಚಿನ ಪದಕ ಜಯಿಸಿದರು.
ಭಾರತ ಒಟ್ಟು 11 ಪದಕಗಳೊಂದಿಗೆ (4 ಚಿನ್ನ, 5 ಬೆಳ್ಳಿ, 2 ಕಂಚು) ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಅಂಜುಮ್ ಮೌದ್ಗಿಲ್ 402.9 ಅಂಕಗಳ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರು. ಜರ್ಮನಿಯ ಅನ್ನಾ ಜಾನ್ಸೆನ್ ಬಂಗಾರ (407.7) ಮತ್ತು ಇಟಲಿಯ ಬಾರ್ಬರ ಗ್ಯಾಂಬರೊ (403.4) ಬೆಳ್ಳಿ ಪದಕ ಜಯಿಸಿದರು.
ಇದರೊಂದಿಗೆ ಅಂಜುಮ್ ಸತತ 2 ವಿಶ್ವಕಪ್ ಕೂಟಗಳಲ್ಲಿ ಪದಕ ಜಯಿಸಿದಂತಾಗಿದೆ. ಕಳೆದ ಬಾಕು ಪಂದ್ಯಾವಳಿಯಲ್ಲೂ ಅವರು ಕಂಚು ಗೆದ್ದಿದ್ದರು.
ಪುರುಷರ 3ಪಿ ವಿಭಾಗದ ಅರ್ಹತಾ ಸ್ಪರ್ಧೆಯಲ್ಲೂ ಭಾರತ ತಂಡ ದ್ವಿತೀಯ ಸ್ಥಾನಿಯಾಗಿತ್ತು. ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಪೀಟರ್ ನಿಂಬುರ್ಸ್‌ಕಿ, ಫಿಲಿಪ್ ನೆಪೆಚಲ್ ಹಾಗೂ ಜಿರಿ ಪ್ರೈವ್ರಾಟ್‌ಸ್ಕಿ ಅವರನ್ನೊಳಗೊಂಡ ತಂಡಕ್ಕೆ ಬಂಗಾರ ಒಲಿಯಿತು. ಅವರು ಭಾರತೀಯ ಸ್ಪರ್ಧಿಗಳ ವಿರುದ್ಧ 16-12 ಅಂತರದ ಮೇಲುಗೈ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.