ಕಡಲಲ್ಲೇ ಉಳಿದ ಪ್ರಿನ್ಸೆಸ್ ಮಿರಾಲ್ ಹಡಗು
Team Udayavani, Jul 18, 2022, 5:15 AM IST
ಮಂಗಳೂರು: ಸಿರಿಯಾದ “ಪ್ರಿನ್ಸೆಸ್ ಮಿರಾಲ್’ ಸರಕು ಸಾಗಾಟ ಹಡಗು ಉಳ್ಳಾಲ ಬಟಪಾಡಿ ಕಡಲಿನಲ್ಲಿ ಮುಳುಗಿ ತಿಂಗಳು ಸಮೀಪಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್ ಅಂತ್ಯದ ವರೆಗೂ ನೌಕೆಯಿಂದ ತೈಲ ತೆರವು ಮಾಡುವ ಸಾಧ್ಯತೆ ಇಲ್ಲ.
ಮುಂಬಯಿ ಹಾಗೂ ಗೋವಾದಿಂದ ಎರಡು ಪ್ರತ್ಯೇಕ ತಂಡ ಆಗಮಿಸಿ ತೈಲ ತೆರವು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಪರಿಶೀಲಿಸಿ ತೆರಳಿರುವುದು ಬಿಟ್ಟರೆ ಯಾವುದೇ ಬೆಳವಣಿಗೆ ಇಲ್ಲ. ಸದ್ಯದ ಮಟ್ಟಿಗೆ ಹಡಗು ಬಟ್ಟಪಾಡಿಯಲ್ಲಿ ನೆಲಸ್ಪರ್ಶಿಸಿ ನಿಂತಿದೆ. ಆದರೆ ಪೂರ್ತಿ ಮುಳುಗಿಲ್ಲ. ಆದರೆ ಡೆಕ್ ವರೆಗೂ ನೀರು ತುಂಬಿಕೊಂಡಿರುವುದರಿಂದ ಅದರೊಳಗೆ ಪ್ರವೇಶಿಸಲು ತಜ್ಞರ ಕಾರ್ಯಾಚರಣೆ ಅಗತ್ಯವಿದೆ. ಈಗಿನ ಪರಿಸ್ಥಿತಿಯಲ್ಲಿ ಕಡಲಿನ ಅಬ್ಬರ ಜೋರಾಗಿರುವುದರಿಂದ ಕಾರ್ಯಾ ಚರಣೆ ನಡೆಸುವ ಸ್ಥಿತಿಯಲ್ಲಿ ತಜ್ಞರಿಲ್ಲ.
ಸದ್ಯ ನೌಕಾಯಾನ ಸಚಿವಾಲಯದ ಟಗ್‌ಬೋಟ್ ವಾಟರ್‌ಲಿಲ್ಲಿಯನ್ನು ಮಂಗಳೂರು ಬಂದರಿನಲ್ಲಿ ತಂದು ನಿಲ್ಲಿಸಲಾಗಿದೆ. ತೈಲ ಸೋರಿಕೆಯಾದರೆ ಅದನ್ನು ನಿಯಂತ್ರಿಸುವುದು ಇದರ ಉದ್ದೇಶ. ಅಲ್ಲದೆ ಕೋಸ್ಟ್ ಗಾರ್ಡ್ ನೌಕೆ ಹಾಗೂ ಕರಾವಳಿ ಕಾವಲು ಪೊಲೀಸ್ ಬೋಟ್‌ಗಳು ನಿಗಾ ಇರಿಸಿವೆ. ಆದರೆ ನಿರಂತರವಾಗಿ ಹಡಗಿನ ಮೇಲೆ ಕಣ್ಗಾವಲು ಸದ್ಯ ನಡೆಸಲಾಗುತ್ತಿಲ್ಲ, ಇಂತಹ ಪ್ರಕರಣ ಗಳಲ್ಲಿ ಸುದೀರ್ಘವಾಗಿ ಕಣ್ಗಾವಲು ನಡೆಸಲಾಗದು ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಜೂ. 21ರಂದು ಸಿರಿಯಾದ ಪ್ರಿನ್ಸಿಸ್ ಮಿರಾಲ್ ಹೆಸರಿನ ಸರಕು ನೌಕೆ ಉಳ್ಳಾಲ ಸಮುದ್ರ ತೀರದಲ್ಲಿ ಮುಳುಗಡೆ ಯಾಗಿತ್ತು. ಕೋಸ್ಟ್ ಗಾರ್ಡ್ ಸಿಬಂದಿ ಈ ನೌಕೆಯಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು. ಈ ಮಂದಿ ಈಗ ಮಂಗಳೂರಿನಲ್ಲೇ ಇದ್ದಾರೆ. ಅವರಲ್ಲಿ ದಾಖಲೆ ಸಮಸ್ಯೆ ಇರುವ ಕಾರಣ ಸಿರಿಯಾ ದೇಶಕ್ಕೆ ಕರೆದೊಯ್ಯುವ ಕಾರ್ಯ ಪೂರ್ಣ ಗೊಂಡಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹಡಗಿನ ಮಾಲಕರ ಪ್ರತಿನಿಧಿಗಳು ನಿರಂತರ ಯತ್ನದಲ್ಲಿದ್ದು ಮುಂದಿನ ವಾರ ಅವರ ದೇಶಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.
ಈ ಮಧ್ಯೆ ಸಿರಿಯಾದ ನೌಕೆ ಮಲೇಷ್ಯಾದಿಂದ ಇಟಲಿಗೆ ತೆರಳುವ ಮಧ್ಯೆ ಉಳ್ಳಾಲ ಕಡಲ ತೀರಕ್ಕೆ ಬರಲು ಕಾರಣವಾದ ಅಂಶಗಳನ್ನು ಡಿಜಿ ಶಿಪ್ಪಿಂಗ್ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದೆ. ಲಭ್ಯ ಮಾಹಿತಿ ಪ್ರಕಾರ ಶ್ರೀಲಂಕಾ ಮಾರ್ಗವಾಗಿ ತೆರಳುವ ವೇಳೆ ನೌಕೆಯ ತಳಭಾಗದಲ್ಲಿ ರಂಧ್ರ ಕಾಣಿಸಿದ ಕಾರಣ ಕಡಲ ತೀರದ ಮಾರ್ಗವಾಗಿ ಪ್ರಯಾಣ ಬೆಳೆಸಿತ್ತು. ಇದರಿಂದಾಗಿ ಉಳ್ಳಾಲ ಸಮುದ್ರ ತೀರ ತಲುಪಿದೆ ಎನ್ನುವುದು ವರದಿಯ ಮುಖ್ಯಾಂಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Train; ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ?
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.