ಉಡುಪಿ: ಯೂಸರ್ ಐಡಿ ಕದ್ದು ಲಕ್ಷಾಂತರ ರೂ. ವಂಚನೆ: ದೂರು
Team Udayavani, Jul 18, 2022, 1:47 AM IST
ಉಡುಪಿ: ಕಾರ್ಕಳ ಕುಕ್ಕುಂದೂರು ಬಂಗ್ಲೆಗುಡ್ಡೆ ರುಡಾಲ್ಫ್ ಡಿ’ಸೋಜಾ (44) ಅವರು 2018-19ನೆ ಸಾಲಿನ ಟಿಬಿಓ ಟಾಕ್ ಕಂಪೆನಿಯ ಸ್ಕೈಲೈನ್ ಎಂಟರ್‌ಪ್ರೈಸಸ್ ಮತ್ತು ಟ್ರಾವೆಲ್ಸ್‌ನಲ್ಲಿ ವಿಮಾನ, ರೈಲು ಟಿಕೆಟ್ ಬುಕ್ ಮಾಡುವ ಫ್ರಾಂಚೈಸಿ ಪಡೆದು ಸಂಸ್ಥೆಯ ಯೂಸರ್ ಐಡಿ ಹೊಂದಿದ್ದರು.
2022ರ ಎಪ್ರಿಲ್ ತಿಂಗಳಿನ ಕೊನೆಯಲ್ಲಿ ಟಿಬಿಓ ಕಂಪೆನಿಯಿಂದ ರುಡಾಲ್ಫ್ ಡಿ’ಸೋಜಾ ಅವರಿಗೆ ಕರೆ ಬಂದಿದ್ದು, ನಿಮ್ಮ ಐಡಿಗೆ 14,76,284 ರೂ. ಹಣ ಪಾವತಿಸಲಾಗಿದೆ. ಅದನ್ನು ಕೂಡಲೇ ಮರುಪಾವತಿ ಮಾಡುವಂತೆ ಸೂಚಿಸಲಾಗಿತ್ತು.
ಆದರೆ ರುಡಾಲ್ಫ್ ಅವರು ಕಳೆದ ಎರಡು ವರ್ಷಗಳಿಂದ ಈ ಐಡಿಯನ್ನು ಬಳಸಿರುವುದಿಲ್ಲ. ಇವರ ಸಂಸ್ಥೆಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುವ ವ್ಯಕ್ತಿಯು ರುಡಾಲ್ಫ್ ಅವರ ಐಡಿಯನ್ನು ಕದ್ದು, ಇನ್ನೋರ್ವನ ಮೂಲಕ ಕಂಪೆನಿಯ ಐಡಿ ಪಾಸ್‌ವರ್ಡ್ ರೀಸೆಟ್ ಮಾಡಿಸಿದ್ದ.
ರುಡಾಲ್ಫ್ ಅವರಿಂದಲೇ ಐಡಿ ಯನ್ನು ಬಳಸುತ್ತಿರುವಂತೆ ಬಿಂಬಿಸಿ, ಕಂಪೆನಿಯಿಂದ ಬಂದಿರುವ ಹಣವನ್ನು ಟಿಕೆಟ್ ಬುಕ್ಕಿಂಗ್ ಖರ್ಚು ಮಾಡಿ, ಹಣ ಮರುಪಾವತಿಸದೇ ಕಂಪೆನಿಗೆ ಹಾಗೂ ರುಡಾಲ್ಫ್ ಡಿ’ಸೋಜಾ ಅವರಿಗೆ ನಷ್ಟ ಉಂಟು ಮಾಡಲಾಗಿದೆ ಎಂದು ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.