ಪುರಸಭೆ ವ್ಯಾಪ್ತಿ ಮನೆಗಳಿಗೆ ಹರಿಯದ ಹೇಮೆ!


Team Udayavani, Jul 18, 2022, 3:08 PM IST

tdy-16

ಚನ್ನರಾಯಪಟ್ಟಣ: ಪುರಸಭೆ ವ್ಯಾಪ್ತಿಯ ಮೂರನೇ ಹಂತದ ಕುಡಿಯುವ ನೀರಿನ ಯೋಜನೆ 42.72ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದ್ದರು ಪಟ್ಟಣದ 23 ವಾರ್ಡ್‌ಗಳಿಗೂ ನೀರು ಪೂರೈಕೆ ಆಗುತ್ತಿಲ್ಲ.

ಪಟ್ಟಣದಿಂದ 16 ಕಿ.ಮೀ. ದೂರಘನ್ನಿ ಸಮೀಪ ಹೇಮಾವತಿ ಹೊಳೆಯಿಂದ ನೀರು ತಂದು ಹೌಸಿಂಗ್‌ಬೋರ್ಡ್‌ ಸಮೀಪ ಶುದ್ಧೀಕರಣ ಮಾಡಿ ಬೆಲಸಿಂದ ಶ್ರೀ ವನದಲ್ಲಿ ಸುಮಾರು 50 ಲಕ್ಷ ಲೀಟರ್‌ ಸಾಮರ್ಥ್ಯದ ಜಲಸಂಗ್ರಾಹಾರದಲ್ಲಿ ಶೇಖರಣೆ ಮಾಡಿ ಕೆಲ ಮನೆಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ, ಹೊರತು ಪುರಸಭೆಯ 23 ವಾರ್ಡಿನ ಮನೆಗಳಿಗೆ ನೀರು ಸರಬ ರಾಜು ಮಾಡಲಾಗುತ್ತಿಲ್ಲ.

ಮನೆಗಳಿಗೆ ಬಾರದ ನೀರು: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈಯೋಜನೆ ಪೂರ್ಣ ಗೊಂಡು ಪುರಸಭೆಗೆ ಹಸ್ತಾತರಮಾಡಲಾಗಿದೆ. ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಮಂತ್ರಿ ಎಚ್‌.ಡಿ.ರೇವಣ್ಣ ಹಾಗೂ ಶಾಸಕ ಸಿ.ಎನ್‌.ಬಾಲಕೃಷ್ಣಮೂರನೇ ಹಂತದ ಕುಡಿಯುವ ನೀರಿ ಯೋಜನೆಲೋಕಾರ್ಪಣೆ ಮಾಡಿದರು. ಆದರೂ ಪುರಸಭೆಯ ವ್ಯಾಪ್ತಿಯ ಎಲ್ಲ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿಲ್ಲ.

ವಾರ್ಡ್‌ಗಳಿಗೆ ಪೈಪ್‌ಲೈನ್‌ ಅಳವಡಿಸಿಲ್ಲ: ಮೂರನೇ ಹಂತದ ಕುಡಿಯುವ ನೀರಿನಯೋಜನೆಗೆ ಸಂಬಂಧಿಸಿದಂತೆ ಪುರಸಭೆಯ 23 ವಾರ್ಡ್‌ನಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾರ್ಯಮಾಡದೆ ಇರುವುದರಿಂದ ಕೆಲ ವಾರ್ಡ್‌ಗಳಿಗೆಮಾತ್ರ ನೀರು ಪೂರೈಕೆ ಆಗುತ್ತಿದೆ. ಉಳಿದಂತೆಉದಯಗಿರಿ ಬಡಾವಣೆ, ಗೂರನಹಳ್ಳಿ,ಶಾರದಾನಗರ, ಗೂರುಮಾರನಹಳ್ಳಿ, ಶಾಂತಿನಗರ,ಕೆಇಬಿ ಕಾಲೋನಿ, ಕಲ್ಯಾಣಿ ನಗರ, ಸಂಗೊಳ್ಳಿ ರಾಯಣ್ಣ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗೆ ಹೇಮಾವತಿ ನೀರು ತಲುಪುತ್ತಿಲ್ಲ.

ಹಳೇ ಪೈಪ್‌ ಲೈನ್‌ನಲ್ಲಿ ನೀರು ಹರಿಯುತ್ತಿದೆ: ಹೊಸದಾಗಿ ಪೈಪ್‌ಲೈನ್‌ ಮಾಡದೆ ಇರುವುದರಿಂದಪುರಸಭೆ ವ್ಯಾಪ್ತಿ ಹಳೆಯ ಪೈಪ್‌ಲೈನ್‌ ಮೂಲಕ ಕೆಲವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ನೀರು ಪೂರೈಕೆ ಆಗದೆ ಕೆಲ ವಾರ್ಡ್ ನಲ್ಲಿ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ.

5 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌: ಮೂರನೇ ಹಂತದ ಕುಡಿಯುವ ನೀರನ್ನು ಪುರಸಭೆಯ 23 ವಾರ್ಡ್‌ಗಳಿಗೆ ಸರಬರಾಜು ಮಾಡಲು 2019ರಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿಮಂಡಳಿ ಟೆಂಡರ್‌ ಮಾಡಿ ದ್ದು ಮೂರು ವರ್ಷವಾದರೂ ಕಾಮಗಾರಿ ಸಂಪೂರ್ಣ ಮಾಡುವಲ್ಲಿ ಇಲಾಖೆ ವಿಫ‌ಲವಾಗಿದೆ.

ಪುರಸಭೆಯಿಂದ ನಿರ್ವಹಣೆ: ಹೇಮಾವತಿ ನದಿ ತೀರದಲ್ಲಿನ ನೂತನ ಯಂತ್ರಗಾರ, 4 ವಸತಿಗೃಹ,ಹೌಸಿಂಗ್‌ ಬೋರ್ಡ್‌ನಲ್ಲಿ ನಿರ್ಮಿಸಿರುವ 170 ಲಕ್ಷಲೀಟರ್‌ ನೀರು ಶುದ್ಧೀಕರಣ ಘಟಕ, 5 ಲಕ್ಷ ಲೀಟರ್‌ಮೇಲಂತಸ್ಥಿನ ಜಲಸಂಗ್ರಹಾರ, 8 ವಸತಿಗೃಹ, 15 ಲಕ್ಷಲೀಟರ್‌ ನೆಲಹಂತದ ಜಲಸಂಗ್ರಹಗಾರ, ಬೆಲಸಿಂದಶ್ರೀವನದಲ್ಲಿರುವ ನೆಲಸಮದ 50 ಲಕ್ಷ ಲೀಟರ್‌ಜಲಸಂಗ್ರಹಾರ, 2.50 ಲಕ್ಷ ಲೀಟರ್‌ ನೀರುಶೇಖರಣಾ ಟ್ಯಾಂಕ್‌ ಹಾಗೂ ಸಿಬ್ಬಂದಿಗೆ 4 ವಸತಿಗೃಹನಿರ್ಮಾಣ ಮಾಡಿರುವುದನ್ನು ಪುರಸಭೆ ನಿರ್ವಹಣೆ ಮಾಡುತ್ತಿದೆ.

30 ವರ್ಷದವರೆಗೆ ಅನುಕೂಲ: 16 ಕಿಮೀ ದೂರದಿಂದ ಪೈಪ್‌ಲೈನ್‌ ಮೂಲಕ ಹೇಮಾವತಿ ನದಿಯಿಂದ ಬೆಲಸಿಂದ ಶ್ರೀವನದ ವರೆಗೆ ನೀರು ತರಲಾಗುತ್ತಿದೆ. ಈ ಯೋಜನೆ ಮುಂದಿನ 30 ವರ್ಷದವರೆಗೆ ನಗರದಲ್ಲಿ ಸುಮಾರು 1.25 ಲಕ್ಷ ಜನರಿಗೆ ದೊರೆಯಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡ ಳಿ ಸಹಾಯಕ ಅಭಿಯಂತರ ಸುನಿಲ್‌ ಉದಯವಾಣಿಗೆ ಮಾಹಿತಿ ನೀಡಿದರು.

3ನೇ ಹಂತದ ಯೋಜನೆ ಸಿದ್ಧ: ಪ್ರತಿ ನಿತ್ಯ 8 ತಾಸು ಯಂತ್ರ ಚಾಲನೆ ಮಾಡಿದರೆ ನಗರದಲ್ಲಿನ ಎಲ್ಲ ಮನೆಗಳಿಗೆ ಪೈಪ್‌ ಮೂಲಕ ಯಾವುದೇ ಯಂತ್ರ ಬಳಸದೆದಿನದ 24 ತಾಸು ನೀರು ಹರಿಸಬಹುದು. ಆ ಮಾದರಿಯಲ್ಲಿ ಮೂರನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆ ತಯಾರಾಗಿದೆ ಎಂದು ಮಾಹಿತಿ ನೀಡಿದರು.

ಮೂರನೇ ಹಂತದ ಕುಡಿಯುವ ನೀರು ಪುರಸಭೆ ವ್ಯಾಪ್ತಿಯಲ್ಲಿ ಹಲವುವಾರ್ಡ್‌ಗೆ ಕಳೆದ ಒಂದು ವರ್ಷದಿಂದಸರಬರಾಜು ಮಾಡಲಾಗುತ್ತಿದೆ. ನಾವುಮಾತ್ರ ಕೊಳವೆ ಬಾವಿ ನೀರುಕುಡಿಯುವುದು ತಪ್ಪಿಲ್ಲ. ಈ ಬಗ್ಗೆ ಪುರಸಭೆಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಮುಂದಿನ 30ವರ್ಷದವರೆಗೆ ಪುರಸಭೆ ವ್ಯಾಪ್ತಿಯಲ್ಲಿನೀರಿನ ಸಮಸ್ಯೆ ಉಂಟಾಗದ ರೀತಿ ಯೋಜನೆ ಮಾಡಿದ್ದೇವೆ ಎನ್ನುವ ಸರ್ಕಾರನಗರ ವ್ಯಾಪ್ತಿಗೆ ಯಾಕೆ ಸಂಪೂರ್ಣಹೇಮಾವತಿ ನೀರು ಹರಿಸ ಲಾಗುತ್ತಿಲ್ಲ.-ರೇಣುಕುಮಾರ್‌,ಗೂರನಹಳ್ಳಿ ಬಡಾವಣೆ ನಿವಾಸಿ

ಪುರಸಭೆ 23 ವಾರ್ಡ್‌ನ ಮನೆಗೆ ಹೇಮಾವತಿ ಹೊಳೆಯ ನೀರುಹರಿಸಲು ಅಗತ್ಯ ಪೈಪ್‌ಲೈನ್‌ ಅಳವಡಿಕೆಗೆ ನಗರ ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿ ಟೆಂಡರ್‌ ಪ್ರಕ್ರಿಯೆ ಮಾಡು ವುದಾಗಿ ತಿಳಿಸಿದೆ. 6 ತಿಂಗಳ ಒಳಗೆಎಲ್ಲ ವಾರ್ಡ್‌ಗೆ ಹೇಮೆ ನೀರು ಸರಬರಾಜು ಮಾಡಲಾಗುವುದು, ಈಗ ಪೈಪ್‌ಲೈನ್‌ ಇರುವ ಕಡೆಗೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.-ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ

-ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.