ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜು. 31 ಕೊನೇ ದಿನ
Team Udayavani, Jul 19, 2022, 6:10 AM IST
ಆದಾಯ ತೆರಿಗೆ ಪಾವತಿ ಮಾಡುವುದು ದೇಶವಾಸಿಗಳ ಆದ್ಯ ಕರ್ತವ್ಯವೂ ಹೌದು. ಪ್ರತೀ ವರ್ಷದಂತೆಯೇ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ಪ್ರಕ್ರಿಯೆಯೂ ಶುರುವಾಗಿದೆ. ಯಾರಿಗೆ ಯಾವ ರೀತಿಯ ಐಟಿಆರ್ ಫಾರಂಗಳು ಮತ್ತು ವಿಳಂಬವಾದರೆ ಯಾವ ರೀತಿ ದಂಡ ವಿಧಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣ ದಿಂದಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕಗಳು ಮುಂದೂಡಿಕೆಯಾಗಿದ್ದವು. ಇದ ರಿಂದಾಗಿ ರಿಟರ್ನ್ಸ್ ಸಲ್ಲಿಕೆಗೆ ಹೆಚ್ಚಿನ ಸಮಯದ ಅವಕಾಶ ಸಿಕ್ಕಿತ್ತು. ಆದರೆ ಈ ಬಾರಿ ಅಂಥ ಸಮಸ್ಯೆ ಗಳು ಏನೂ ಅಲ್ಲ. ಹೀಗಾಗಿ ಪ್ರಸಕ್ತ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜು. 31.
ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇಲಾಖೆಯ ಬಳಿ ನೀವು ಮಾಡುವ ಬಹಳಷ್ಟು ವ್ಯವಹಾರಗಳ ಬಗ್ಗೆ ಮಾಹಿತಿ ಇದೆ. ಉದಾಹರಣೆಗೆ 50 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿಸಿದ್ದರೆ, 10 ಲಕ್ಷ ರೂ.ಗಳಿಗೂ ಮೇಲ್ಪಟ್ಟ ಮೊತ್ತವನ್ನು ಠೇವಣಿ ಇರಿಸಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಗಳಿಗೂ ಮೇಲ್ಪಟ್ಟು ಹಣವನ್ನು ಜಮೆ ಮಾಡಿದ್ದರೆ, ನೀವು ಮನೆ ಬಾಡಿಗೆ ನೀಡಿದ್ದು ಹೀಗೆ ಹಲವಾರು ರೀತಿಯಲ್ಲಿ ವಿತ್ತೀಯ ವ್ಯವಹಾರ ನಡೆಸಿದ ಮಾಹಿತಿಗಳು ಆದಾಯ ತೆರಿಗೆ ಇಲಾಖೆಯಲ್ಲಿ ಭದ್ರವಾಗಿ ಇರುತ್ತದೆ. ಹೀಗಿರುವಾಗ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ಮೊದಲು ಎಚ್ಚರಿಕೆ ವಹಿಸಿ, ಸಲ್ಲಿಕೆ ಮಾಡಬೇಕು.
ನಿಮಗಿರುವ ಅಗತ್ಯಗಳು
ಆದಾಯ ತೆರಿಗೆಯ ರಿಟರ್ನ್ಸ್ಗಳನ್ನು ಈಗ ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು. ಅದಕ್ಕಾಗಿ ನೀವು ಇಲಾಖೆಯ ವೆಬ್‌ಸೈಟ್ ಮೂಲಕ ಅದನ್ನು ಸಲ್ಲಿಸಲು ಅವಕಾಶ ಇದೆ ಅಥವಾ ಲೆಕ್ಕ ಪರಿಶೋಧಕರ ನೆರವನ್ನು ಪಡೆಯ ಬಹುದು. ಯಾವುದೇ ರೀತಿಯಲ್ಲಿ ರಿಟರ್ನ್ಸ್ ಸಲ್ಲಿಕೆ ಮಾಡುವುದಿದ್ದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ.
ಆದಾಯ ತೆರಿಗೆ ಪೋರ್ಟಲ್‌ನ ಲಾಗ್‌ಇನ್ ಮತ್ತು ಪಾಸ್‌ವರ್ಡ್ (ಔಟಜಜಿn ಚnಛ ಟಚssಡಿಟ್ಟಛ) ಸಂಬಳದಾರರಾದರೆ ಫಾರಂ 16 ಇಲಾಖೆಯ ಪೋರ್ಟಲ್‌ನಿಂದ ಫಾರಂ 26ಎಎಸ್
ಟಿಎಎಸ್ (ಖಅಖ) - ಆದಾಯ ತೆರಿಗೆ ಪಾವತಿದಾರರ ಮಾಹಿತಿ ಎಐಎಸ್ (ಅಐಖ) -ವಾರ್ಷಿಕ ಮಾಹಿತಿ ವ್ಯವಸ್ಥೆ ನೀವು ಮೇಲಿನ ಮಾಹಿತಿಗಳನ್ನು ಡೌನ್‌ಲೋಡ್ ಮಾಡಿದಾಗ ನೀವು ಯಾವ ಯಾವ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕು ಎಂಬ ಮಾಹಿತಿ ಸಿಗುತ್ತದೆ. ನೀವು ಇದನ್ನು ಗಮನಿಸದೇ ರಿಟರ್ನ್ಸ್ ಸಲ್ಲಿಸಿದರೆ, ನೋಟಿಸ್ ಬರುವುದು ಖಚಿತ.
ಇನ್ನು ಹಿಂದಿನಂತೆ ಗೃಹ ಸಾಲದ ಬಡ್ಡಿಗೆ 2 ಲಕ್ಷ ರೂ. ವರೆಗೆ ಮತ್ತು ವಿಮೆ, ಪಿಪಿಎಫ್, ಶಾಲಾ ಕಾಲೇಜುಗಳ ಶುಲ್ಕ ಇತ್ಯಾದಿಗಳಿಗೆ 1.50 ಲಕ್ಷ ರೂ. ಗಳಿಗೆ ತೆರಿಗೆ ವಿನಾಯಿತಿ ಇದೆ. ಇನ್ನು ವೈದ್ಯಕೀಯ ವಿಮೆಗೆ 25 ಸಾವಿರ ರೂ., ನೀವು ಅಥವಾ ನಿಮ್ಮ ಕುಟುಂಬದಲ್ಲಿ ದಿವ್ಯಾಂಗರು ಇದ್ದಲ್ಲಿ ಅವರ ವೈದ್ಯಕೀಯ ವೆಚ್ಚ 75 ಸಾವಿರ ರೂ, ಅಂಗವಿಕಲತೆ ಶೇ. 80ಕ್ಕಿಂತ ಹೆಚ್ಚು ಇದ್ದಲ್ಲಿ 1,25,000 ರೂ. ವರೆಗೆ ತೆರಿಗೆ ವಿನಾಯಿತಿ ಇದೆ.
ನಿಮ್ಮ ಆದಾಯದ ಮಾಹಿತಿಯನ್ನು ಸರಿಯಾದ ಸ್ಥಳದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. ನೆನಪಿರಲಿ ಅನಂತರ ನೀವು ಇ-ವೆರಿಫೈ (ಉ Vಛಿrಜಿfಜಿcಚಠಿಜಿಟn) ಕಡ್ಡಾಯ ವಾಗಿ ಮಾಡಬೇಕು. ಅಂದರೆ ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಪರ್ಕ ಕಲ್ಪಿಸಿ ಒಟಿಪಿ ಮೂಲಕ ಖಚಿತಪಡಿಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ರಿಟರ್ನ್ಸ್ ಸಲ್ಲಿಕೆ ಪೂರ್ಣವಾಗುತ್ತದೆ. ಅಕಸ್ಮಾತ್ ಮಾಹಿತಿ ತಪ್ಪಾಗಿದ್ದರೆ ನೀವು ತೆರಿಗೆ ರಿಟರ್ನ್ಸ್ಗಳನ್ನು ನಿಗದಿತ ದಿನಾಂಕದೊಳಗೆ ತಿದ್ದುಪಡಿ ಮಾಡಬಹುದು.
ನೆನಪಿರಲಿ ಜು. 31ರ ಒಳಗೆ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿ.
ದಂಡ ಪಾವತಿ ಮಾಡಬೇಕು
1 ಸಾವಿರ ರೂ. : 5 ಲಕ್ಷ ರೂ. ವರೆಗೆ ಆದಾಯ ಇರುವವರಿಗೆ
5 ಸಾವಿರ ರೂ. : 234 ಎಫ್ ವ್ಯಾಪ್ತಿಯವರಿಗೆ
ವರ್ಷಾಂತ್ಯದವರೆಗೆ ಅವಧಿ : ದಂಡ ಸಹಿತ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೂ ನಿಗದಿತ ಅವಧಿ ಇದೆ. ಕೇಂದ್ರ ಸರಕಾರದ ಮಾಹಿತಿ ಪ್ರಕಾರ ಡಿ. 31 ಕೊನೇ ದಿನ.
ಐಟಿಆರ್ ವಿಧಗಳು
ಐಟಿಆರ್-1 ಸಹಜ್: 50 ಲಕ್ಷ ರೂ. ವರೆಗೆ ಆದಾಯ ಇರುವವರು ಈ ಫಾರಂ ಮೂಲಕ ರಿಟರ್ನ್ಸ್ ಸಲ್ಲಿಕೆ ಮಾಡಬೇಕು. ತಿಂಗಳ ಸಂಬಳ ಪಡೆಯುವ ಉದ್ಯೋಗಿಗಳೂ ಇದೇ ಫಾರಂ ಮೂಲಕ ರಿಟರ್ನ್ಸ್ ಸಲ್ಲಿಕೆ ಮಾಡಬೇಕಾಗುತ್ತದೆ.
ಐಟಿಆರ್-2: ಮ್ಯೂಚ್ಯುವಲ್ ಫಂಡ್‌ಗಳು, ಸ್ಟಾಕ್‌ಗಳ ಮಾರಾಟದಿಂದ ಲಾಭವಾಗಿದ್ದರೆ, ಒಂದಕ್ಕಿಂತ ಹೆಚ್ಚು ಮನೆಗಳು ಇದ್ದರೆ ಅವರು ಐಟಿಆರ್-2 ಫಾರಂ ಮೂಲಕ ಮಾಹಿತಿ ನೀಡಬೇಕು.
ಐಟಿಆರ್-3: ವ್ಯಾಪಾರ ವಹಿವಾಟಿನ ಮೂಲಕ ಲಾಭ ಪಡೆದುಕೊಂಡಿದ್ದರೆ ಅಂಥವರು ಐಟಿಆರ್- 3ರ ಮೂಲಕ ರಿಟರ್ನ್ಸ್ ಸಲ್ಲಿಕೆ ಮಾಡಬೇಕು.
ಐಟಿಆರ್-4: ಹಿಂದೂ ಅವಿಭಕ್ತ ಕುಟುಂಬ (ಎಚ್‌ಯುಎಫ್) ಸೇರಿದ ವ್ಯಕ್ತಿಗಳು ಈ ವ್ಯವಸ್ಥೆಯ ಮೂಲಕ ಮಾಹಿತಿ ಅಪ್‌ಡೇಟ್ ಮಾಡಬೇಕು. ಅವರಿಗೆ 50 ಲಕ್ಷ ರೂ. ವರೆಗೆ ಆದಾಯ ಇರಬೇಕು.
ಐಟಿಆರ್-5: ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬಗಳು, ಕಂಪೆನಿಗಳಿಗೆ ಹೊರತಾದವರು ಈ ಫಾರಂ ಮೂಲಕ ತಮ್ಮ ಆದಾಯದ ಮಾಹಿತಿ ನೀಡಬೇಕು.
ಐಟಿಆರ್-6: ಕಂಪೆನಿಗಳು ಈ ವ್ಯವಸ್ಥೆ ಮೂಲಕ ವಾರ್ಷಿಕ ಆದಾಯ ಮತ್ತಿತರ ಅಂಶಗಳ ಬಗ್ಗೆ ವಿವರ ನೀಡಬೇಕು.
– ವಿಜಯ ರಾಜೇಶ್ ತೆರಿಗೆ ಸಲಹೆಗಾರರು ಮತ್ತು ವಕೀಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.