ಆಟೋಟ ತರಬೇತಿಗೆ ಶಿಕ್ಷಕರ ಕೊರತೆ

ಕೋವಿಡ್‌ನಿಂದ ಸ್ತಬ್ಧವಾಗಿದ್ದ ದೈಹಿಕ ಶಿಕ್ಷಣ ಆರಂಭ

Team Udayavani, Jul 19, 2022, 10:09 AM IST

1

ಸಾಂದರ್ಭಿಕ ಚಿತ್ರ

ಪುತ್ತೂರು: ಕೋವಿಡ್‌ ಕಾರಣದಿಂದ ಶಾಲೆಗಳಲ್ಲಿ ಎರಡು ವರ್ಷಗಳಿಂದ ಸ್ತಬ್ಧವಾಗಿದ್ದ ದೈಹಿಕ ಶಿಕ್ಷಣ ಈ ಶೈಕ್ಷಣಕ ವರ್ಷದಿಂದ ಪುನರಾರಂಭಗೊಂಡಿದೆ. ಆದರೆ ತರಬೇತಿಗೆ ಸಂಬಂಧಿಸಿ ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇದೆ.

ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಮೂಲ ಸೌಲಭ್ಯ ಕೊರತೆ ನೀಗಿಸುವ ವಿಷಯದಲ್ಲಿ ಸರಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ತಾಲೂಕಿನಲ್ಲಿ ವಿದ್ಯಾ ರ್ಥಿಗಳಿಗೆ ದೈಹಿಕ ಶಿಕ್ಷಣ ಕಾಟಾಚಾರಕ್ಕೆ ಎಂಬಂತಿದೆ ಎನ್ನುವುದಕ್ಕೆ ಖಾಲಿ ಇರುವ ಹುದ್ದೆಗಳ ಅಂಕಿ ಅಂಶವೇ ಸಾಕ್ಷಿ.

181 ಸರಕಾರಿ ಪ್ರಾ. ಶಾಲೆ; 39 ಶಿಕ್ಷಕರು ಮಾತ್ರ

ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು ಸಂಖ್ಯೆ 204. ಇದರಲ್ಲಿ 61 ಶಾಲೆಗಳಲ್ಲಿ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರು ಇದ್ದಾರೆ. ಈ ಪೈಕಿ 23 ಪ್ರೌಢಶಾಲೆಗಳ ಪೈಕಿ 1 ಶಾಲೆಯಲ್ಲಿ ಹುದ್ದೆ ಖಾಲಿ ಇದ್ದರೆ ಪ್ರಾಥಮಿಕ ಶಾಲೆಗಳ ಕಥೆಯೇ ಭಿನ್ನ. 181 ಪ್ರಾ. ಶಾಲೆಗಳ ಪೈಕಿ 39 ಶಾಲೆಗಳಲ್ಲಿ ಶಿಕ್ಷಕರಿದ್ದು, ಉಳಿದ 146 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಇಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿ ಇತರ ಶಿಕ್ಷಕರು ತರಬೇತಿ ನೀಡಬೇಕಾದ ಸ್ಥಿತಿ ಇದೆ.

ಹುದ್ದೆ ಕಡ್ಡಾಯ

ಡಾ| ಎಲ್‌.ಆರ್‌. ವೈದ್ಯನಾಥ ವರದಿ ಪ್ರಕಾರ 6ರಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಬೋಧಿಸಬೇಕು ಮತ್ತು ಪ್ರತಿಯೊಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇರಲೇಬೇಕೆಂಬ ನಿಯಮ ಇದೆ. 6ರಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣ ಪಠ್ಯಕ್ರಮ ಇದೆ. ಆದರೆ ಪ್ರಸ್ತುತ ದೈಹಿಕ ಶಿಕ್ಷಕರ ಕೊರತೆಯೇ ಹೆಚ್ಚಿದೆ. ಇದರಿಂದ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಹುತೇಕ ಶಾಲೆಗಳಲ್ಲಿ ಪಾಠ ಬೋಧನೆಯನ್ನು ಇತರ ಸಹ ಶಿಕ್ಷಕರು ನಡೆಸುವಂತೆ ಸೂಚಿಸಲಾಗಿದೆ. ಇದರಿಂದ ಮಕ್ಕಳಿಗೆ ಪರಿಣಾಮಕಾರಿಯಾಗಿ ದೈಹಿಕ ಶಿಕ್ಷಣ ಬೋಧನೆಯಾಗುತ್ತಿಲ್ಲ ಎನ್ನುವುದು ಪೋಷಕರ ದೂರು.

ನೇಮಕ ಮರೀಚಿಕೆ

ಕಳೆದ ಹಲವು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ಹೊಸ ನೇಮಕಾತಿ ಆಗಿಲ್ಲ. ಶಾಲೆಗಳು ಹಾಗೂ ಮಕ್ಕಳ ಸಂಖ್ಯೆಯ ಅನುಪಾತದಲ್ಲಿ ಹುದ್ದೆ ಮಂಜೂರು ಮಾಡಲಾಗುತ್ತಿದೆ. ಆದರೆ ಹೊಸ ಹುದ್ದೆಗಳ ಮಂಜೂರಾತಿಗೆ ಅನುಸರಿಸುವ ಮಾನದಂಡ ಹಳೆಯದು. ಕೆಲವು ವರ್ಷಗಳಿಂದ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಯನ್ನು ಜನರಲ್‌ ಶಿಕ್ಷಕ ಹುದ್ದೆಯಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳೇ ಇಲ್ಲವಾಗುತ್ತಿದೆ.

ಎರಡು ವರ್ಷದ ಬಳಿಕ ಚಟುವಟಿಕೆ

ಕೋವಿಡ್‌ ಕಾರಣದಿಂದ ಎರಡು ವರ್ಷಗಳ ಕಾಲ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿ ತರಬೇತಿ ನಡೆದಿಲ್ಲ. ಇದರಿಂದ ಕ್ರೀಡಾ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ಹಿನ್ನೆಡೆ ಉಂಟಾಗಿದೆ. ಪ್ರಸ್ತುತ ಈ ವರ್ಷ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿ ತರಗತಿಗಳು ಪುನರಾರಂಭಗೊಂಡಿದ್ದು ಎರಡು ವರ್ಷದ ಬಳಿಕ ವಿದ್ಯಾರ್ಥಿಗಳು ಮೈದಾನಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಅಭ್ಯಾಸ ಕ್ರಮ ಆರಂಭದಿಂದಲೇ ಆಗಬೇಕು. ಆದರೆ ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೂಲ ಸೌಲಭ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಕ್ರೀಡಾ ಸಾಮಗ್ರಿಗಳು ಮತ್ತು ಬೋಧನ ಉಪಕರಣಗಳ ಕೊರತೆ ಉಂಟಾಗಿದೆ. ವಲಯ, ತಾಲೂಕು ಮಟ್ಟದ ಕ್ರೀಡಾಕೂಟಗಳಿಗೆ ದಿನ ನಿಗದಿ ಪಡಿಸಲಾಗಿದ್ದು ಕೆಲವು ಸ್ಪರ್ಧೆಗಳು ನಡೆದಿವೆ. ಕಳೆದೆರೆಡು ವರ್ಷದ ಹಿಂದಕ್ಕೆ ಹೋಲಿಸಿದರೆ ಕ್ರೀಡಾಪಟುಗಳ ಸಾಮರ್ಥ್ಯ ಕುಸಿದಿರುವುದನ್ನು ತರಬೇತುದಾರರು ದೃಢಪಡಿಸಿದ್ದಾರೆ. ಮೈದಾನ ಆಧಾರಿತ (ಹೊರಾಂಗಣ) ಅಭ್ಯಾಸ ಕ್ರಮ ಮಾತ್ರ ಇಲ್ಲಿ ಇದ್ದು ಒಳಾಂಗಣ ಸ್ಟೇಡಿಯಂ ಕೊರತೆಯ ಕಾರಣದಿಂದ ಮಳೆಗಾಲದಲ್ಲಿ ಅಭ್ಯಾಸವು ಸಾಗುತ್ತಿಲ್ಲ. ಹೀಗಾಗಿ ದೈಹಿಕ ಶಿಕ್ಷಣ ಕ್ಷೇತ್ರ ಹಲವು ಸಮಸ್ಯೆಗಳಿಂದ ಬಳಲುತ್ತಿದೆ.

ಲಭ್ಯ ಶಿಕ್ಷಕರ ತರಬೇತಿ: 2 ವರ್ಷಗಳ ಬಳಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ತರಗತಿಗಳು ಮತ್ತೆ ಪ್ರಾರಂಭಗೊಂಡಿದೆ. ವಲಯ, ತಾ| ಮಟ್ಟದ ಕ್ರೀಡಾಕೂಟಕ್ಕೆ ದಿನ ನಿಗದಿ ಯಾಗಿದೆ. ಈಗಾಗಲೇ ಈಜು ಸ್ಪರ್ಧೆ ಮುಗಿದಿದೆ. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇರುವುದು ನಿಜ. ಅದಾಗ್ಯೂ ಲಭ್ಯ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡ ಲಾಗುತ್ತಿದೆ. –ಸುಂದರ ಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಪುತ್ತೂರು

ಅವಿಭಜಿತ ಪುತ್ತೂರು ತಾಲೂಕಿನ ಅಂಕಿ-ಅಂಶ

ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಖ್ಯೆ -204

ಪ್ರೌಢಶಾಲೆಗಳ ಸಂಖ್ಯೆ – 23

ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ-01

ಪ್ರಾಥಮಿಕ ಶಾಲೆಗಳ ಸಂಖ್ಯೆ- 181

ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ -146

ಟಾಪ್ ನ್ಯೂಸ್

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

byndoor

Bantwal: ಅಪಘಾತ; ಗಾಯಾಳು ಸಾವು

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.