ಸಮೃದ್ಧ ಕನ್ನಡಿಗರ ಒಗ್ಗಟ್ಟಿನ ಕಾರ್ಯಕ್ರಮ ಜರಗುತ್ತಿರಲಿ: ರಘುನಾಥ ರಾವ್‌ ಮಲಕಾಪುರೆ


Team Udayavani, Jul 19, 2022, 12:02 PM IST

ಸಮೃದ್ಧ ಕನ್ನಡಿಗರ ಒಗ್ಗಟ್ಟಿನ ಕಾರ್ಯಕ್ರಮ ಜರಗುತ್ತಿರಲಿ: ರಘುನಾಥ ರಾವ್‌ ಮಲಕಾಪುರೆ

ಮುಂಬಯಿ: ಪ್ರಪಂಚದಲ್ಲಿ ಅತೀ ದೊಡ್ಡ ಪ್ರಜಾ ಪ್ರಭುತ್ವದ ದೇಶ ಭಾರತವಾಗಿದೆ. ಇಲ್ಲಿ ದೇಶ, ನಾಡು- ನುಡಿ, ಸಂಸ್ಕೃತಿಯ ದಿಕ್ಕುದೆಸೆ ನಿರ್ಧಾರ ಸರಕಾರದ್ದು. ಪಕ್ಷದ ಪ್ರಣಾಳಿಕೆ ಮೂಲಕ ಸರಕಾರ ನಡೆಸುವ ವ್ಯವಸ್ಥೆ ನಮ್ಮ ಪ್ರಜಾಪ್ರಭುತ್ವದ್ದು. ಭವಿಷ್ಯ ದಲ್ಲಿ ಪ್ರಜಾಪ್ರಭುತ್ವಕ್ಕೆ ಹೊಸ ನಿರೀಕ್ಷೆ ತರುವಲ್ಲಿ ಯುವ ಪ್ರತಿಭೆಗಳು ಮುಂದೆ ಬರಬೇಕು. ಕರ್ನಾಟಕ ಸಾಂಸ್ಕೃತಿಕ ನೆಲೆಯ ರಾಜ್ಯವಾಗಿದ್ದು, ನಮ್ಮ ಭಾಷಾ ವೈಶಿಷ್ಟ್ಯಗಳು ಇತರ ಆರು ನೆರೆ ರಾಜ್ಯಗಳಿಗೆ ವ್ಯಾಪಿಸಿದೆ. ಕನ್ನಡ ಭಾಷೆ, ಸಂಸ್ಕೃತಿ ಯನ್ನು ಉಳಿಸುವಲ್ಲಿ ಕನ್ನಡಿಗರ ಪ್ರೀತಿ, ಸಹಕಾರ ಅನನ್ಯವಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ರಘುನಾಥ ರಾವ್‌ ಮಲಕಾಪುರೆ ಮಹಾನಗರ ಕನ್ನಡಿಗರ ಭಾಷೆ, ಸಂಸ್ಕೃತಿ, ಅಭಿಮಾನಕ್ಕೆ ಅಭಿನಂದನೆ ಸಲ್ಲಿಸಿದರು.

ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಕರ್ನಾಟಕ ಸಂಘ ಅಂಧೇರಿ, ಚೆಂಬೂರು ಕರ್ನಾ ಟಕ ಸಂಘ ಹಾಗೂ ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತು ಮುಂಬಯಿಯ ವಿವಿಧ ಕನ್ನಡ ಸಂಘ-ಸಂಸ್ಥೆಗಳ ಸಹಯೋಗದಿಂದ ಜು. 17ರಂದು ಜರಗಿದ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮವನ್ನು ಅತಿಥಿಗಳ ಜತೆಗೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಕನ್ನಡ ಬೆಳೆದು ವಿಜೃಂಭಿಸುತ್ತಿರುವುದು ನಮ್ಮ ಸೌಭಾಗ್ಯ. ದೇಶದ ಯಾವುದೇ ಭಾಗದಲ್ಲಿ ಕನ್ನಡಿಗರ ಸಂಘಟನೆ ಇದ್ದಲ್ಲಿ, ಅವರ ಜತೆ ಕರ್ನಾಟಕ ಸರಕಾರ ಇದೆ. ಪರರ ಜತೆ ಜೀವಿಸುವ ಜತೆಗೆ ಭಾಷಾ ಬಾಂಧವ್ಯ ಮೇಳೈಸುವ ಪ್ರಬುದ್ಧ ಕಾರ್ಯಕ್ರಮ ಇಂದು ನಡೆದಿದೆ. ಇಂತಹ ಸುಂದರ ಸಮೃದ್ಧ ಕನ್ನಡಿಗರ ಒಗ್ಗಟ್ಟಿನ ಕಾರ್ಯಕ್ರಮ ಸದಾ ಜರಗುತ್ತಿರಲಿ. ಸರಕಾರ, ಪ್ರಾಧಿಕಾರ ಸದಾ ನಿಮ್ಮ ಜತೆಗೆ ಇದೆ ಎಂದು ತಿಳಿಸಿ ಶುಭ ಹಾರೈಸಿದರು.

ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ್‌ ಐಎಎಸ್‌ ಪ್ರಾಸ್ತಾ ವಿಕವಾಗಿ ಮಾತನಾಡಿ, ಮುಂಬಯಿ ಕನ್ನಡಿಗರು ಭಾವನಾತ್ಮಕವಾಗಿ ನಮ್ಮ ಹೃದಯದಲ್ಲಿ ನೆಲೆನಿಂತಿದ್ದಾರೆ. ಕರಾವಳಿ ಕನ್ನಡ ನಾಡಿನ ಮಣ್ಣಿನ ಗುಣಇಲ್ಲಿನ ಕನ್ನಡಿಗರಲ್ಲಿದೆ. ಕನ್ನಡಿಗರು

ಗಂಭೀರ ಸಂವೇದನಾಶೀಲ ಚಿತ್ತ ದವರು. ಹೊರ ನಾಡಿನಲ್ಲಿ ಕನ್ನಡ ಪ್ರಜ್ಞೆಯನ್ನುಂಟುಮಾಡಿ ಸಂಸ್ಕೃತಿ ಪ್ರಸಾರ ಮಾಡುವ ಉದ್ದೇಶ ಗಡಿ ಪ್ರಾಧಿಕಾರದ್ದು. ಪ್ರೀತಿ, ಅಂತಃಕರಣ, ಸಹಿಷ್ಣುತೆ, ಮಾನವೀಯತೆ ಮೂಲಕ ಮೊದಲು ಮಾನವನಾಗುವುದನ್ನು ನಾವು ಕಲಿಯಬೇಕು. 19 ಜಿಲ್ಲೆಗಳ 63 ತಾಲೂಕುಗಳಲ್ಲಿ ಗಡಿನಾಡ ಪ್ರಾಧಿಕಾರದ ಅಭಿವೃದ್ಧಿ ಕೆಲಸಗಳು ನಡೆಯು ತ್ತಿದ್ದು, ಮಹಾನಗರದಲ್ಲಿ ಕನ್ನಡ ಶಾಲೆ ಗಳಸ್ಥಿತಿಗತಿಗಳ ಬಗ್ಗೆ ಭೇಟಿ ನೀಡಿ ಚರ್ಚಿಸಲಾಗುವುದು. ರಾಷ್ಟ್ರಭಕ್ತಿ, ನಾಡ ಭಕ್ತಿ ಹೊಂದಿಕೊಂಡು ಎಲ್ಲರೂ ಒಕ್ಕೂಟದಿಂದ ಮಾಡುವ ಕೆಲಸಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ಆ ನಿಟ್ಟಿನಲ್ಲಿ ಮಹಾನಗರ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಚಿಂತಿಸುವ ಕಾಲ ಪರಿಪಕ್ವವಾಗಿದೆ ಎಂದರು.

ಸಮೂಹ ಕಾರ್ಯಕ್ರಮದ ಸ್ವಾಗತ  ಸಮಿತಿಯ ಅಧ್ಯಕ್ಷ ಎಸ್‌. ಎನ್‌. ಉಡುಪ ಮಾತನಾಡಿ, ಸ್ವಾತಂತ್ರ್ಯೋವದ ಅಮೃತ ಮಹೋತ್ಸವದ ಸಂದರ್ಭ ಜರಗಿದ ಇಂದಿನ ಕಾರ್ಯಕ್ರಮ ಮಹಾನಗರ ಕನ್ನಡಿಗರ ಸಂಸ್ಕೃತಿ, ಭಾಷಾ ಪ್ರೀತಿಗೆ ದೊರೆತ ಗೌರವ. ಸಂಸ್ಕೃತಿ, ಆರಾಧನ ಬದುಕು ನಮ್ಮದಾ ಗಬೇಕು. ಇದನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸಲು ಪ್ರೋತ್ಸಾಹ ನೀಡುತ್ತಿರುವ ಕರ್ನಾಟಕ ಸರಕಾರದ ಕಾರ್ಯ ಸ್ತುತ್ಯರ್ಹ ಎಂದರು.

ಕನ್ನಡ ಸಾಧಕರ ಭಾವಚಿತ್ರ ಅನಾ ವರಣಗೊಳಿಸಿದ ಮಹಾನಗರ ಹಿರಿಯ ಆರ್ಥಿಕ ತಜ್ಞ ಪ್ರವೀಣ್‌ ಭೋಜ ಶೆಟ್ಟಿ ಮಾತನಾಡಿ, 40 ಲಕ್ಷ ಹೊರನಾಡ ಕನ್ನಡಿಗರ ಬಗ್ಗೆ ಗಾಢವಾಗಿ ಚಿಂತಿಸುವ ಪರಿಪಕ್ವ ಕಾಲದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಕವಿಚಿಂತನೆಯ ಗೀತೆಯನ್ನು ಸ್ಮರಿಸುವುದು ಇಂದು ಅನಿವಾರ್ಯ. ಮುಂಬಯಿ ಕನ್ನಡಿಗರು ಬೆಳೆಸಿಕೊಂಡ ಭಾಷಾಭಿಮಾನದ ಪ್ರೀತಿ ಇಂದಿನ ಈ ಕನ್ನಡ ಉತ್ಸವಕ್ಕೆ ಸಾಕ್ಷಿಯಾಗಿದೆ. ಒಂದು ಸಾವಿರ ವರ್ಷಗಳಿಂದ ಮಾರ್ಪಾಡು ಹೊಂದದ ಶುದ್ಧ ಭಾಷೆಯಿದ್ದರೆ ಅದು ಕನ್ನಡ ಮಾತ್ರ. ಹೊರನಾಡಿನಲ್ಲೂ ನಮ್ಮ ಭಾಷೆ, ಸಂಸ್ಕೃತಿಗೆ ಗೌರವ ನೀಡಬೇಕು. ಇದು ಪ್ರತಿಯೋರ್ವ ಕನ್ನಡಿಗರ ಆದ್ಯ ಕರ್ತವ್ಯ ಎಂದರು.

ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಸಧಾಕರ ಅರಾಟೆ ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ಈ ಸಂಭ್ರಮವು ಸಮಸ್ತ ಮುಂಬಯಿ ಕನ್ನಡಿಗರಿಗೆ ಸಂಧ ಗೌರವವಾಗಿದೆ ಎಂದು ತಿಳಿಸಿ, ಸಂಘದ ವಿಸ್ತೃತ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ನೀಡಿದರು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಪತ್ರಕರ್ತ ದಯಾ ಸಾಗರ್‌ ಚೌಟ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಬಳಿಕ ಗಣ್ಯರಿಗೆ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮದ ಕಿರುಕಾಣಿಕೆಯನ್ನಿತ್ತು ಗೌರವಿಸಲಾಯಿತು.

ಕೃತಿ ಬಿಡುಗಡೆ :

ಈ ಸಂದರ್ಭ ಕವಿ ಭೋಜರಾಜ್‌ ಶೆಟ್ಟಿ ಅವರ ಕಲ್ಪವೃಕ್ಷ ಮತ್ತು ಕಾಮಧೇನು ಕೃತಿಯನ್ನು ಸಭಾಪತಿ ರಘುನಾಥ್‌ ರಾವ್‌ ಮಲಕಾಪುರೆ ಬಿಡುಗಡೆಗೊಳಿಸಿದರು. ಲೇಖಕಿ ಲತಾ ಸಂತೋಷ್‌ ಶೆಟ್ಟಿ ಮುದ್ದುಮನೆ ಕೃತಿ ಪರಿಚಯಿಸಿದರು. ತುಳು ಅಧ್ಯಯನ ಪೀಠ ಮಂಗಳೂರು ವಿವಿ ಸದಸ್ಯ ಪ್ರವೀಣ್‌ ಕುಮಾರ್‌ ಕೊಡಿಯಾಲ್‌ಬೈಲು, ತುಳು ಅಧ್ಯಯನ ಪೀಠ ಮಂಗಳೂರು ವಿವಿಯ ನವೀನ್‌ಚಂದ್ರ ಸನಿಲ್‌, ವಾಸ್ತುತಜ್ಞ, ಕವಿ, ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಉದನೇಶ್ವರ ಪ್ರಸಾದ್‌ ಭಟ್‌ ಮೂಲಡ್ಕ ಅವರನ್ನು ಸಮ್ಮಾನಿಸಲಾಯಿತು.

ಕವಿಗೋಷ್ಠಿ, ನೃತ್ಯ ಸ್ಪರ್ಧೆ :

ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರ-ನಾಡ ಪ್ರೀತಿ ಕನ್ನಡ ಸಮೂಹ ಗಾಯನ ಸ್ಪರ್ಧೆ ಜರಗಿತು. ಮಧು ಅಶೋಕ್‌ ವಸ್ತ್ರದ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ವೇಣುಗೋಪಾಲ್‌ ಶೆಟ್ಟಿ ಇನ್ನಂಜೆ, ಆಲೂರು ಪಿ. ಸುಧಾಕರ್‌, ಗಾಯತ್ರಿ ನಾಗೇಶ್‌, ಜಯಲಕ್ಷ್ಮೀ ಪಿ. ಶೆಟ್ಟಿ, ಪ್ರಫುಲ್ಲಾ ಡಿ. ಶೆಟ್ಟಿ, ಪ್ರಭಾಕರ ಶೆಟ್ಟಿ ಕವನ ವಾಚಿಸಿದರು. ವಿವಿಧ ಕನ್ನಡ ಸಂಸ್ಥೆಗಳಿಂದ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ನಡೆಯಿತು.

ನಾಗರಾಜ ಶೆಟ್ಟಿ ಪಡುಕೋಣೆ, ಮಾಧವ ಶೆಟ್ಟಿ, ಕರ್ನಾಟಕ ಗಡಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್‌ ಮತ್ತಿಹಳ್ಳಿ, ಉದ್ಯಮಿ ಗಣಪತಿ, ಚೆಂಬೂರು ಕರ್ನಾಟಕ ಸಂಘದ ಉಪಾಧ್ಯಕ್ಷ ದೇವದಾಸ್‌ ಶೆಟ್ಟಿಗಾರ್‌, ಕರ್ನಾಟಕ ಸಂಘ ಅಂಧೇರಿ ಮಾಜಿ ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಪಿ. ಧನಂಜಯ ಶೆಟ್ಟಿ, ಸಮಾಜ ಸೇವಕ, ಉದ್ಯಮಿ ಮಹೇಶ್‌ ಶೆಟ್ಟಿ, ಅಂಧೇರಿ ಕರ್ನಾಟಕ ಸಂಘದ ಸಂಸ್ಥಾಪಕ ಕೃಷ್ಣ ಬಿ. ಶೆಟ್ಟಿ, ಅಧ್ಯಕ್ಷ ಭಾಸ್ಕರ ಸುವರ್ಣ ಸಸಿಹಿತ್ಲು, ಕಾರ್ಯದರ್ಶಿ ಉದಯ ಕಾರ್ಗಲ್‌, ಜಂಟಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾಗತ ಸಮಿತ ಸಮಿತಿಯ ಸಂಚಾಲಕ ಬಾಬಾ ಪ್ರಸಾದ್‌ ಅರಸ, ಅಮೃತಾ ಶೆಟ್ಟಿ, ವಿದುಷಿ ಶ್ಯಾಮಲಾ ರಾಧೇಶ್‌, ನಾರಾಯಣ ನಂದಳಿಕೆ, ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ, ಪತ್ರಕರ್ತ ದಯಾಸಾಗರ್‌ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿದರು.

ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಶಾಸ್ತ್ರೀಯವಾಗಿ ಬೆಳೆದು ನಿಂತಿದೆ. ಉತ್ಕೃಷ್ಟ ಸಂಸ್ಕೃತಿ, ಸಂಸ್ಕಾರಗಳ ಜತೆಗೆ 8 ಜ್ಞಾನಪೀಠ ಪ್ರಶಸ್ತಿ, 3 ಭಾರತರತ್ನ ಪಡೆದುಕೊಂಡಿರುವ ಕನ್ನಡ ನಾಡು ನಮಗೆಲ್ಲರಿಗೂ ಹೆಮ್ಮೆ. ನಮ್ಮ ಪೂರ್ವಜರು ರಾಷ್ಟ್ರಕ್ಕೆ ನೀಡಿದ ಕೊಡುಗೆ, ಪ್ರಾಚೀನ ಪರಂಪರೆ, ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಯಲ್ಲಿ ಅರಳಲಿ.-ವೀರೇಶ್‌ ಪ್ರಭು ಐಪಿಎಸ್‌ ಹೆಚ್ಚುವರಿ ಪೊಲೀಸ್‌ ಆಯುಕ್ತರು ಮುಂಬಯಿ

ತುಳುವರು ಅನುಷ್ಠಾನದಲ್ಲಿ ಅಗ್ಯಗಣ್ಯರು. ಮಾತೃ ಸಂಸ್ಕೃತಿಯನ್ನು ಗಟ್ಟಿ ಮಾಡಿಕೊಂಡು ಸಾಂಸ್ಕೃತಿಕ, ಶೈಕ್ಷಣಿಕವಾಗಿ ಬದುಕುವವರು. ಗಡಿ ಪ್ರಾಧಿಕಾರದ ಮೂಲಕ ಸಮಸ್ತ ಕನ್ನಡಿಗರ ಚಿಂತಿಸುವ ಏಕೈಕ ಘನ ಸರಕಾರ ಕರ್ನಾಟಕ ಸರಕಾರ. ಮಹಾನಗರದ ಮಕ್ಕಳನ್ನು, ಚಿಂತಕರನ್ನು, ಗಣ್ಯರನ್ನು ಕರ್ನಾಟಕದ ವಿವಿಧ ಕಾರ್ಯಕ್ರಮಗಳಲ್ಲಿ ಸಮ್ಮಾನಿಸುವ ಬಗ್ಗೆ ಕರ್ನಾಟಕ ಸರಕಾರ ಕ್ರಮ ಕೈಗೊಳ್ಳಬೇಕು.-ಪ್ರದೀಪ ಕುಮಾರ ಕಲ್ಕೂರ, ಕಲ್ಕೂರ ಪ್ರತಿಷ್ಠಾನ ಮಂಗಳೂರು

-ಚಿತ್ರ-ವರದಿ: ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

13-uv-fusion

UV Fusion: ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಬೆಳೆಸೋಣ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

12-uv-fusion

UV FUsion: ಇತರರನ್ನು ಗೌರವಿಸೋಣ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.