ಗದ್ದಲದ ಕೆಸರೆರಚಾಟ: ಸಂಸತ್ ಕಲಾಪ ವ್ಯರ್ಥ ಕುರಿತು ಆಡಳಿತ-ವಿಪಕ್ಷಗಳ ವಾಗ್ವಾದ
Team Udayavani, Jul 21, 2022, 1:03 AM IST
ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಿ 3 ದಿನಗಳು ಕಳೆದರೂ ಎರಡೂ ಸದನಗಳಲ್ಲಿ ಸುಗಮ ಕಾರ್ಯಕಲಾಪಗಳು ನಡೆದೇ ಇಲ್ಲ. ಬೆಲೆಯೇರಿಕೆ, ಜಿಎಸ್‌ಟಿ, ಅಗ್ನಿಪಥಕ್ಕೆ ಸಂಬಂಧಿಸಿ ವಿಪಕ್ಷಗಳು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸುತ್ತಿರುವ ಕಾರಣ ಸತತ 3ನೇ ದಿನವೂ ಕಲಾಪಗಳು ಕೊಚ್ಚಿಹೋಗಿವೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಬುಧವಾರ ಕೇಂದ್ರ ಸರಕಾರ ಗರಂ ಆಗಿದೆ. ಪ್ರಹ್ಲಾದ್ ಜೋಷಿ, ಪಿಯೂಷ್ ಗೋಯಲ್, ಸ್ಮತಿ ಇರಾನಿ ಸೇರಿದಂತೆ ಬಿಜೆಪಿ ನಾಯಕರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಆಡಳಿತಾರೂಢ ಮತ್ತು ವಿಪಕ್ಷಗಳ ನಾಯಕರ ನಡುವೆ ವಾಗ್ವಾದ ನಡೆದಿದೆ.
“ಸಂಸತ್ ಕಲಾಪವನ್ನು ಅತೀ ಹೆಚ್ಚು ಹಾಳುಗೆಡವುದು ಯಾರು ಎಂಬ ವಿಚಾರದಲ್ಲಿ ವಿಪಕ್ಷಗಳ ನಡುವೆಯೇ ಪೈಪೋಟಿ ನಡೆಯುತ್ತಿದೆ’ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಜತೆಗೆ, “ಬೆಲೆಯೇರಿಕೆ, ಜಿಎಸ್‌ಟಿ ಕುರಿತ ಚರ್ಚೆಯಿಂದ ಸರಕಾರವೇನೂ ಹಿಂದೆ ಸರಿಯುತ್ತಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾದಿಂದ ಗುಣಮುಖರಾಗಿ ಬಂದ ಕೂಡಲೇ ಚರ್ಚೆಗೆ ಅವಕಾಶ ನೀಡಲಾಗುತ್ತದೆ’ ಎಂದಿದ್ದಾರೆ.
ಕಾಂಗ್ರೆಸ್‌ಗೆ ರಚನಾತ್ಮಕ ಚರ್ಚೆ ಬಗ್ಗೆ ಆಸಕ್ತಿಯಿಲ್ಲ. ಚರ್ಚೆ ನಡೆಯಬೇಕೆಂದರೆ ಸೂಕ್ತ ವಿಧಾನಗಳನ್ನು ಅನುಸರಿಸಬೇಕು. ಅದನ್ನು ವಿಪಕ್ಷಗಳು ಮಾಡುತ್ತಿಲ್ಲ ಎಂದು ಸಚಿವ ಜೋಷಿ ಆರೋಪಿಸಿದ್ದಾರೆ. ಇನ್ನು ಸಚಿವೆ ಸ್ಮತಿ ಇರಾನಿ ಮಾತನಾಡಿ, “ರಾಹುಲ್ “ರಾಜಕೀಯವಾಗಿ ಅನುತ್ಪಾದಕ’ರಾಗಿರಬಹುದು. ಹಾಗಂತ, ಅವರು ಸಂಸತ್‌ನ ಉತ್ಪಾದಕತೆಯನ್ನು ಹಾಳು ಮಾಡಲು ಪ್ರಯತ್ನಿಸಬಾರದು’ ಎಂದಿದ್ದಾರೆ.
ಹಠಮಾರಿತನವೇ ಕಾರಣ: ಗದ್ದಲ ಕುರಿತು ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, “ಸರಕಾರವು ಅಸಂಸದೀಯವಾಗಿ ವರ್ತಿ ಸುತ್ತಿದೆ. ಆಹಾರ ವಸ್ತುಗಳ ಮೇಲಿನ ಜಿಎಸ್‌ಟಿ ಕುರಿತು ಚರ್ಚೆ ನಡೆಸಬೇಕು ಎನ್ನುವುದು ನಮ್ಮ ಕೋರಿಕೆ. ಅದಕ್ಕೆ ಅವಕಾಶ ನಿರಾಕರಿಸುವ ಮೂಲಕ ಸರಕಾರ ಹಠಮಾರಿತನ ಪ್ರದರ್ಶಿಸುತ್ತಿರುವುದೇ ಕಲಾಪ ವ್ಯರ್ಥವಾಗಲು ಕಾರಣ’ ಎಂದಿದ್ದಾರೆ.
ಜಿಎಸ್ಟಿ ಅತ್ಯಂತ ಕ್ರೂರ ಕ್ರಮ: ಕಾಂಗ್ರೆಸ್
ದೇಶದಲ್ಲಿ ಹಣದುಬ್ಬರ ತೀವ್ರವಾಗಿದೆ, ನಿರುದ್ಯೋಗವೂ ಹೆಚ್ಚಾಗಿದೆ. ಇಂತಹ ಹೊತ್ತಿನಲ್ಲಿ ಕೇಂದ್ರ ಸರಕಾರ ಅಗತ್ಯವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಿಸಿರುವುದು ಅತ್ಯಂತ ಕ್ರೂರ ಹೆಜ್ಜೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಮೋದಿ ಸರಕಾರ ಜನರ ಆಸೆಗಳ ಮೇಲೆ ಪ್ರಹಾರ ನಡೆಸಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಶೇ.7ಕ್ಕಿಂತ ಹೆಚ್ಚಾಗಿದೆ, ಸಗಟು ಸೂಚ್ಯಂಕ ಶೇ.15ದಾಟಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಈ ಹೊತ್ತಿನಲ್ಲಿ ಜಿಎಸ್‌ಟಿ ಹೆಚ್ಚಿಸಿರುವುದು ಅತ್ಯಂತ ಕ್ರೂರ ಕ್ರಮ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.
ಸಂಸತ್‌ಗೆ ಸರಕಾರದ ಮಾಹಿತಿ
2016ರಿಂದ 2020ರ ವರೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ 24,134 ಮಂದಿಯ ಬಂಧನ. ಆದರೆ ದೋಷಿಗಳೆಂದು ಸಾಬೀತಾಗಿದ್ದು 212 ಮಂದಿ ಮಾತ್ರ.
ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿದಂತೆ ಸಿಎಪಿಎಫ್ ನಲ್ಲಿ ಅಗ್ನಿವೀರರಿಗೆ ಶೇ.10 ಮೀಸ ಲಾತಿ ಕಲ್ಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಲಕ್ಷದ್ವೀಪ ಹೊರತುಪಡಿಸಿ ದೇಶದ ಉಳಿದೆಡೆ ಒಟ್ಟು 13 ಲಕ್ಷ ವಿದ್ಯುತ್‌ಚಾಲಿತ ವಾಹನಗಳ ನೋಂದಣಿ
ಗಣತಿ ವೇಳೆ ಸಂಗ್ರಹಿಸಲಾದ ವೈಯಕ್ತಿಕ ಮಾಹಿತಿ ಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸು ವುದಿಲ್ಲ ಅಥವಾ ಎನ್‌ಆರ್‌ಸಿಯಂಥ ದತ್ತಾಂಶ ಸಂಗ್ರಹದಲ್ಲೂ ಬಳಕೆ ಮಾಡುವುದಿಲ್ಲ
2019ರ ಆಗಸ್ಟ್‌ನಿಂದ ಈವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 118 ನಾಗರಿಕರು ಹತ್ಯೆಗೀಡಾಗಿ ದ್ದಾರೆ. ಈ ಪೈಕಿ 21 ಮಂದಿ ಹಿಂದೂಗಳು.
2021-22ರಲ್ಲಿ ಯುಪಿಎಸ್‌ಸಿ 4,119 ಅಭ್ಯರ್ಥಿ ಗಳನ್ನು ಮಾತ್ರ ಸರಕಾರಿ ಉದ್ಯೋಗಕ್ಕೆ ಶಿಫಾರಸು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.