ಅಂಗವಿಕಲರ ವಾಹನಕ್ಕೂ ಆದಾಯ ಮಿತಿ ಬರೆ
2 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇದ್ದವರಿಗಿಲ್ಲ ಸೌಲಭ್ಯ
Team Udayavani, Jul 21, 2022, 6:25 AM IST
ಪುತ್ತೂರು: ಅಂಗವಿಕಲರ ಕಲ್ಯಾಣ ಇಲಾಖೆಯು ಅಂಗವಿಕಲರಿಗೆ ಉಚಿತವಾಗಿ ದ್ವಿಚಕ್ರ ವಾಹನ ನೀಡುತ್ತಿದ್ದರೂ ಆದಾಯ ಮಿತಿಯ ಕಾರಣದಿಂದ ಹಲವು ಅರ್ಹರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.
ಶೇ. 75ಕ್ಕೂ ಅಧಿಕ ಅಂಗವಿಕಲರಿಗೆ ಸ್ವಸಾಮರ್ಥ್ಯದಿಂದ ವಾಹನ ಚಲಾಯಿಸಲು ಸಾಧ್ಯವಿಲ್ಲದ ಕಾರಣ ದ್ವಿಚಕ್ರ ವಾಹನ ನೀಡಲಾಗುತ್ತದೆ. ಪ್ರತೀ ವರ್ಷ ಇಲಾಖೆ ರಾಜ್ಯಮಟ್ಟದಲ್ಲಿ ಇದಕ್ಕಾಗಿ ಗುರಿ ನಿಗದಿಪಡಿಸಿ ಅದನ್ನು ಜಿಲ್ಲಾವಾರು ಹಂಚಿಕೆ ಮಾಡುತ್ತದೆ.
ವಾರ್ಷಿಕ 2 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಪ್ರತ್ಯೇಕ 2 ಟಯರ್ ಅಳ ವಡಿಸಿದ ದ್ವಿಚಕ್ರ ವಾಹನ ಖರೀದಿಸ ಬೇಕಾದರೆ 1 ಲಕ್ಷ ರೂ.ಗಳಿಗೂ ಅಧಿಕ ಹಣ ಬೇಕಾಗುತ್ತದೆ. ಅಂಗವಿಕಲರಿಗೆ ಸಾಲ ನೀಡಲು ಬ್ಯಾಂಕ್‌ಗಳು ಕೂಡ ಮೀನಮೇಷ ಎಣಿಸುತ್ತವೆ. ಹೀಗಿರುವಾಗ ಸರಕಾರ ಇನ್ನೂ ಕೂಡ 2 ಲಕ್ಷ ರೂ. ಮಿತಿ ಇಟ್ಟುಕೊಂಡಿರುವುದು ಸರಿಯಲ್ಲ ಎನ್ನುತ್ತಾರೆ ಅಂಗವಿಕಲರು.
1,200 ವಾಹನ
2021-22ನೇ ಸಾಲಿನಲ್ಲಿ ರಾಜ್ಯದಲ್ಲಿ 1,200 ಅಂಗವಿಕಲರಿಗೆ ಉಚಿತ ದ್ವಿಚಕ್ರ ವಾಹನ ಮಂಜೂರು ಮಾಡಲಾಗಿತ್ತು. ಪುತ್ತೂರು-ಕಡಬಕ್ಕೆ 10, ಬೆಳ್ತಂಗಡಿ-4, ಸುಳ್ಯ-6, ಬಂಟ್ವಾಳ-6, ಉಳ್ಳಾಲ – 6, ಮಂಗಳೂರು ನಗರ- 5, ಮಂಗಳೂರು ಉತ್ತರ- 4, ಮೂಡು ಬಿದಿರೆ-5 ಮಂಜೂರಾಗಿದೆ. ದ.ಕ. ಜಿಲ್ಲೆಯಲ್ಲಿ 32 ವಾಹನಗಳ ಗುರಿ ನೀಡ ಲಾಗಿದ್ದು, ಗುರಿ ಮೀರಿ ಸಾಧನೆ ಮಾಡಿ 50 ವಾಹನ ವಿತರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ವಾಹನ ವಿತರಣೆಗೆ ಸಂಬಂಧಿಸಿ ಇಲಾಖೆಯಿಂದ ಇನ್ನೂ ಗುರಿ ನಿಗದಿ ಮಾಡಿ ಆದೇಶ ಬಂದಿಲ್ಲ.
1 ವಾಹನಕ್ಕೆ 92 ಸಾವಿರ ರೂ.
ದ.ಕ. ಜಿಲ್ಲೆಗೆ ಕಳೆದ ಆರ್ಥಿಕ ಸಾಲಿನಲ್ಲಿ ಮಂಜೂರಾದ 50 ದ್ವಿಚಕ್ರ ವಾಹನಗಳು ವಿಳಂಬವಾಗಿ ಪೂರೈಕೆಯಾದ ಕಾರಣ ಈಗ ವಿತರಿಸ ಲಾಗುತ್ತಿದೆ. ಅವುಗಳಿಗೆ ವಿಮೆ ಆಗ ಬೇಕಿದೆ. ಇನ್ನೊಂದು ವಾರ ದಲ್ಲಿ ಫಲಾ ನುಭವಿಗಳಿಗೆ ಆರ್‌ಸಿ ನೀಡಲಾಗು ವುದು. ವಿಶೇಷ ಚಕ್ರಗಳ ಅಳವಡಿಕೆ ಸೇರಿದಂತೆ 1 ವಾಹನಕ್ಕೆ 92 ಸಾವಿರ ರೂ. ಸರಕಾರ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ವಾಹನ ಪಡೆಯಲು ಶೇ. 75 ಅಥವಾ ಅದಕ್ಕಿಂತ ಹೆಚ್ಚಿನ ವೈಕಲ್ಯ ಇರಬೇಕೆಂಬ ನಿಯಮವಿದ್ದು, ಅದನ್ನು ಪರಿಷ್ಕರಿಸಿ ಶೇ. 50ಕ್ಕೆ ಇಳಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಶೇ. 50 ವೈಕಲ್ಯ ಹೊಂದಿದವರೂ ಉಚಿತ ವಾಹನ ಪಡೆಯಬಹುದು. ಆದಾಯ ಮಿತಿ ಹೆಚ್ಚಳದ ಬಗ್ಗೆ ಇದುವರೆಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ.
– ಗೋಪಾಲಕೃಷ್ಣ ,
ಅಂಗವಿಕಲರ ಕಲ್ಯಾಣಾಧಿಕಾರಿ, ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.