ಜಡ್ಕಲ್ – ಮುದೂರು ರಸ್ತೆಯುದ್ದಕ್ಕೂ ಗಿಡಗಂಟಿ: ಸವಾರರಿಗೆ ಸಂಕಷ್ಟ
ಅಲ್ಲಲ್ಲಿ ಹದಗೆಟ್ಟ ರಸ್ತೆ; ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದರೂ ನಿರ್ವಹಣೆ ಸಮಸ್ಯೆ
Team Udayavani, Jul 21, 2022, 12:08 PM IST
ಜಡ್ಕಲ್: ಮುದೂರು, ಸೆಳ್ಕೊಡು, ಉದಯನಗರ, ಬೀಸಿನಪಾರೆ ಮತ್ತಿತರ ಪ್ರಮುಖ ಊರುಗಳಿಗೆ ಸಂಪರ್ಕ ಕಲ್ಪಿಸುವ ಜಡ್ಕಲ್ – ಮುದೂರು ರಸ್ತೆಯುದ್ದಕ್ಕೂ ಗಿಡಗಂಟಿಗಳು ಬೆಳೆದು, ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಜಡ್ಕಲ್ – ಸೆಳ್ಕೊಡುವರೆಗೆ ಅಲ್ಲಲ್ಲಿ ಹಲವೆಡೆಗಳಲ್ಲಿ ಹೊಂಡ- ಗುಂಡಿಯಿಂದಾಗಿ ಸಮಸ್ಯೆಯಾಗುತ್ತಿದೆ.
ಜಡ್ಕಲ್‌ನಿಂದ ಮುದೂರುವರೆಗಿನ 10 ಕಿ.ಮೀ. ದೂರದ ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ರಸ್ತೆಗೆ ಬಾಗಿದ ಗಿಡಗಂಟಿಗಳು ಸವಾರರಿಗೆ ಅಪಾಯಕಾರಿಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಬಸ್‌ಗಳ ಗ್ಲಾಸ್‌ಗಳಿಗೂ ಇದರಿಂದ ಹಾನಿಯಾಗಿದೆ.
ಪ್ರಮುಖ ರಸ್ತೆ
ಇತಿಹಾಸ ಪ್ರಸಿದ್ಧ ಎರಡು ಧಾರ್ಮಿಕ ಕೇಂದ್ರಗಳಾದ ಕೊಲ್ಲೂರಿನಿಂದ ಕಮಲಶಿಲೆಯನ್ನು ಸಂಪರ್ಕಿಸುವ ಹತ್ತಿರದ ಮಾರ್ಗ ಇದಾಗಿದೆ. ಇದರೊಂದಿಗೆ ಜಡ್ಕಲ್ ಭಾಗದಿಂದ ಸೆಳ್ಕೊಡು, ಮುದೂರು, ಉದಯನಗರ, ಬೆಳ್ಕಳ್ ತೀರ್ಥ ಕಡೆಗೆ, ಹಳ್ಳಿಹೊಳೆ, ಕಮಲಶಿಲೆ, ಸಿದ್ದಾಪುರ, ಅಮಾಸೆಬೈಲು ಮತ್ತಿತರ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಆಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.
ಮರು ಡಾಮರು ಆಗಿಲ್ಲ
ಜಡ್ಕಲ್‌ನಿಂದ ಸೆಳ್ಕೊಡುವರೆಗಿನ 5-6 ಕಿ.ಮೀ. ವ್ಯಾಪ್ತಿಯಲ್ಲಂತೂ ಹಲವೆಡೆಗಳಲ್ಲಿ ಹೊಂಡ – ಗುಂಡಿಮಯವಾಗಿದ್ದು, ಅಲ್ಲಲ್ಲಿ ರಸ್ತೆ ಜರ್ಜರಿತಗೊಂಡಿದೆ. ಈ ಮಾರ್ಗದಲ್ಲಿ ಮರು ಡಾಮರು ಕಾಮಗಾರಿ ಯಾಗದೇ ಹಲವು ವರ್ಷಗಳೇ ಕಳೆದಿದೆ. ಈ ಬಾರಿಯ ಮಳೆ ಕಡಿಮೆಯಾದ ಅನಂತರವಾದರೂ, ಮರು ಡಾಮರು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಲಿ ಎನ್ನುವುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆ
ಜಡ್ಕಲ್ – ಮುದೂರು – ಸಿದ್ದಾಪುರ ವರೆಗೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದ ಈ ಮಾರ್ಗವು ಈಗ ಅಮಾಸೆಬೈಲು, ಮಡಾಮಕ್ಕಿಯವರೆಗೆ ಸೇರಲ್ಪಟ್ಟು, ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿದೆ. ಆದರೂ ನಿರ್ವಹಣೆ ಸರಿಯಾಗದೆ ಜನ-ಸಾಮಾನ್ಯರು ಸಮಸ್ಯೆ ಅನುಭವಿಸುವಂತಾಗಿದೆ.
ಶೀಘ್ರ ಕಟಾವು: ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿರುವ ಬಗ್ಗೆ ಸರಿಪಡಿಸಲಾಗಿದೆ. ರಸ್ತೆ ಬದಿ ಬೆಳೆದ ಗಿಡ- ಗಂಟಿ ಕಟಾವು ಕಾರ್ಯವನ್ನು ಶೀಘ್ರ ಕೈಗೊಳ್ಳಲಾಗುವುದು. ಇದು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ರಸ್ತೆ ವಿಸ್ತರಣೆ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯಕ್ಕೆ ಯಾವುದೇ ಅನುದಾನವಿಲ್ಲ. ಮುಂದಿನ ದಿನಗಳಲ್ಲಿ ಆಗಬಹುದು. -ದುರ್ಗಾದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತ, ಲೋಕೋಪಯೋಗಿ ಇಲಾಖೆ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.