ಕೊರಟಗೆರೆ: ಹಾಸ್ಟೆಲ್ ಗಳಲ್ಲಿ ಆಹಾರ ವಿತರಣೆಯಲ್ಲಿ ದೊಡ್ಡ ಭ್ರಷ್ಟಾಚಾರ !

ವಾರ್ಡನ್ ಗಳ ವಿರುದ್ಧ ವಿದ್ಯಾರ್ಥಿಗಳ ‌ಹಿಡಿ ಶಾಪ

Team Udayavani, Jul 21, 2022, 6:41 PM IST

1-ddsdsadsad

ಕೊರಟಗೆರೆ : ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ನೂರಾರು ಕೋಟಿ ರೂ ಅನುದಾನ ಬಳಸುತ್ತಿದ್ದರೂ ಮೇಲುಸ್ತುವಾರಿ ವಹಿಸಿಕೊಂಡ ಅಧಿಕಾರಿಗಳ ಹಣದಾಹಕ್ಕೆ ವಿದ್ಯಾರ್ಥಿಗಳು ಸೊರಗುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಿದೆ ವಾರ್ಡನ್ ಗಳ ವಿರುದ್ಧ ವಿದ್ಯಾರ್ಥಿಗಳು ‌ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ವಸತಿ ನಿಲಯಗಳ ನಿರಂತರ ಸಮಸ್ಯೆಗಳು ತಾಂಡವಾಡುತ್ತಿದ್ದು, ವಿದ್ಯಾರ್ಥಿಗಳು ಒಂದಲ್ಲ ಒಂದು ಸಮಸ್ಯೆಯಲ್ಲಿ ತೊಳಲಾಡುತ್ತಾ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದರೆ ಅಧಿಕಾರಿಗಳ ಹಾಗೂ ಅಡುಗೆ ಅವರಿಂದ ನಿರಂತರ ಕಿರುಕುಳ ಅನುಭವಿಸುವ ಭಯದಲ್ಲಿ ವಿದ್ಯಾರ್ಥಿಗಳು ತುಟಿ ಬಿಚ್ಚದೆ ಕೂರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಒಟ್ಟು 22 ವಿದ್ಯಾರ್ಥಿನಿಲಯಗಳಿದ್ದು, ಇದರಲ್ಲಿ 6 ವಸತಿ ಶಾಲೆಗಳು ಸೇರಿದಂತೆ ಒಟ್ಟು 2000ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಸ್ಟೆಲ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆಲವು ಹಾಸ್ಟೆಲ್ ಗಳ ಅವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಊಟ ಬಹಿಷ್ಕಾರ ಸೇರಿದಂತೆ ಪ್ರತಿಭಟನೆ ನಡೆಸಿ ವಾರ್ಡನ್ ಹಾಗೂ ಮೇಲುಸ್ತುವಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿದರ್ಶನಗಳು ಬಹಳಷ್ಟಿವೆ.

ತಾಲೂಕಿನಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ 10 ಹಾಸ್ಟೆಲ್ ಗಳು , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 6 ಹಾಸ್ಟೆಲ್ ಗಳು ಕೊರಟಗೆರೆ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿದ್ದು, ಉಳಿದಂತೆ 6 ಕಡೆ ವಸತಿ ನಿಲಯಗಳಿದ್ದು ಇದರಲ್ಲಿ ಇಂದಿರಾ ಗಾಂಧಿ ವಸತಿ ನಿಲಯ, ಅಂಬೇಡ್ಕರ್ ವಸತಿ ನಿಲಯ, ಮುರಾರ್ಜಿ ವಸತಿ ಶಾಲೆಗಳು 2, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಇದರಲ್ಲಿ ಬಹಳಷ್ಟು ಹಾಸ್ಟೆಲ್ ಗಳು ವಾರ್ಡನ್ ಗಳ ಹಣದ ಆಸೆಗೆ ಗುಣಮಟ್ಟದ ಆಹಾರ ಮತ್ತು ಸರ್ಕಾರದ ಸವಲತ್ತುಗಳ ವಿತರಣೆಯಲ್ಲಿ ಲೋಪವಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿರುವ ಬಹಳಷ್ಟು ನಿದರ್ಶನಗಳು ಕಂಡುಬರುತ್ತವೆ.

ಸರ್ಕಾರ ವಿದ್ಯಾರ್ಥಿಗಳ ಅಪೌಷ್ಠಿಕತೆ ಹೋಗಲಾಡಿಸಿ ಗುಣಮಟ್ಟ ಶಿಕ್ಷಣ ನೀಡುವ ಧೇಯೋದ್ದೇಶದಿಂದ ನೂರಾರು ಕೋಟಿ ಅನುದಾನ ಬಿಡುಗಡೆಗೊಳಿಸುತ್ತಿದ್ದರೂ ಅಧಿಕಾರಿಗಳ ಹಣದ ದಾಹಕ್ಕೆ ಯೋಜನೆಗಳು ಹಳ್ಳ ಹಿಡಿಯುತ್ತಿರುವುದು ದುರಂತ ಮಯವಾಗಿದೆ.

ತಾಲೂಕಿನ ಹುಲಿಕುಂಟೆ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಾರ್ಡನ್ ವಿರುದ್ಧ ನೂರಾರು ವಿದ್ಯಾರ್ಥಿಗಳು ಆರೋಪಗಳ ಸುರಿಮಳೆ ಗೆರೆದು ಸಮರ್ಪಕ ಗುಣಮಟ್ಟದ ಆಹಾರ ಪೂರೈಕೆ ಮಾಡದ ವಿರುದ್ಧ ವಿದ್ಯಾರ್ಥಿನಿಯರು ಊಟ ತೊರೆದು ಮಧ್ಯರಾತ್ರಿವರೆಗೂ ಶಾಲೆಯಿಂದ ಹೊರಹೊಳಿದು ವಾರ್ಡನ್ ವಿರುದ್ಧ ಪ್ರತಿಭಟನೆ ನಡೆಸಿರುವುದು ಹಾಸ್ಟೆಲ್ ಗಳ ವ್ಯವಸ್ಥೆ ಗೆ ಹಿಡಿದ ಕೈಗನ್ನಡಿ ಎನ್ನಬಹುದಾಗಿದೆ.

ಇದೇ ಮಾದರಿಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯರು ಅಲ್ಲಿನ ವಾರ್ಡನ್ ವಿರುದ್ಧ ಸಮರ್ಪಕ ಗುಣಮಟ್ಟದ ಆಹಾರ ಸರಬರಾಜು ಸೇರಿದಂತೆ ಇನ್ನಿತರ ಸವಲತ್ತುಗಳ ವಿಚಾರದಲ್ಲಿ ಪ್ರತಿಭಟನೆ ನಡೆಸಿರುವುದು ಸಹ ಹಾಸ್ಟೆಲ್ ಗಳ ಅವ್ಯವಸ್ಥೆಗೆ ಸಾಕ್ಷಿ ಆದಂತಾಗಿದೆ.

ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ಇತ್ತೀಚೆಗೆ ಸಮಸ್ಯೆಯ ಅಗರವಾಗಿದ್ದು, ಇಲ್ಲಿನ ವಾರ್ಡನ್ ತಾರಾ. ಸಿ ಯವರ ಉದ್ಧಟತನಕ್ಕೆ ಹಾಗೂ ಹಣದ ದಾಹಕ್ಕೆ ವಿದ್ಯಾರ್ಥಿನಿಯರು ಸೊರಗಿ ಹೋಗಿದ್ದು, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಅನುದಾನ ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳ ಹೊಟ್ಟೆಗೆ ಕನ್ನ ಹಾಕುತ್ತಿದ್ದು, ಅವರಿಗೆ ನೀಡುವ ಆಹಾರದಲ್ಲಿ ಕೊರತೆಯಾಗುತ್ತಿದೆ ಎಂದು ನೂರಾರು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ವಾರ್ಡನ್ ಆತ್ಮಹತ್ಯೆ ಹೈಡ್ರಾಮಾ ಮಾಡಿದ್ದರಿಂದ ಜಂಟಿ ನಿರ್ದೇಶಕರು ಹಾಗೂ ಡಿಸಿಓ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರುಗಳೊಂದಿಗೆ ಕೂಲಂಕಷವಾಗಿ ಚರ್ಚೆ ನಡೆಸಿ ವಾರ್ಡನ್ ತಾರಾ.ಸಿ ವಿರುದ್ಧ ಮೇಲಧಿಕಾರಿಗಳಿಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದರು ಸಹ ಈವರೆಗೂ ಕ್ರಮ ತೆಗೆದುಕೊಳ್ಳದಿರುವುದು ಹಾಸ್ಟೆಲ್ ಗಾರ್ಡನ್ ಹಾಗೂ ಮೇಲಾಧಿಕಾರಿಗಳ ನಡುವಿನ ಕಮಿಷನ್ ದಂಧೆಗೆ ಸಾಕ್ಷಿಯಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪ ಮಾಡುತ್ತಿದ್ದಾರೆ.

ದೀನ- ದಲಿತ, ಹಿಂದುಳಿದ ಅಲ್ಪಸಂಖ್ಯಾತ ಮತ್ತು ಬಡ ವಿದ್ಯಾರ್ಥಿಗಳ ಅಪೌಷ್ಟಿಕತೆ ಹೋಗಲಾಡಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸಾವಿರಾರು ಕೋಟಿ ರೂ ಅನುದಾನ ನೀಡಿ ಗುಣಮಟ್ಟ ಆಹಾರ, ಶುದ್ಧ ಕುಡಿಯುವ ನೀರು ಮೂಲಭೂತ ಸೌಕರ್ಯ ಕೊರತೆಯಾಗದಂತೆ ಹಲವು ಮಹತ್ವದ ಯೋಜನೆಗಳ ಅನುಷ್ಠಾನದೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಯೋಜನೆಗಳನ್ನು ಜಾರಿಗೆ ತಂದರೂ ಮೇಲುಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳ ಹಣದ ದಾಹಕ್ಕೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.

ತಾಲೂಕಿನ ಬಹುತೇಕ ಹಾಸ್ಟೆಲ್ ಗಳಲ್ಲಿ ಆಹಾರ ಚಾರ್ಟ್ ಮೆನು ರೀತಿಯಲ್ಲಿ ಎಂದೂ ಆಹಾರ ಸರಬರಾಜು ನಡೆಯುತ್ತಿಲ್ಲ, ಬೆಳಿಗ್ಗೆ ತಿಂಡಿ ಬದಲಾಗಲಿದೆ, ಹಾಲು, ಟೀ ಕಾಫಿ ಎಲ್ಲವೂ ಕೊರತೆ,2 ಚಪಾತಿ ಬದಲು 1 ಚಪಾತಿ ನೀಡಿ ವರ್ಷವಿಡಿ ಒಂದೇ ರೀತಿಯ ಸಾಗು -ಪಲ್ಯ ತಿಂದು ರೋಸಿ ಹೋದಂತಾಗಿದೆ ಸಾಂಬಾರ್ ಗಳಿಗೆ ಮೊಳಕೆ ಕಟ್ಟಿದ ಕಾಳುಗಳನ್ನ ಕಾಣುವುದೇ ಪುಣ್ಯ, ಮೆನು ಚಾಟ್ ನಂತೆ ಯಾವುದು ವಿತರಣೆಯಾಗುತ್ತಿಲ್ಲ. ಡ್ರೈ ಫ್ರೂಟ್ಸ್ ಹಾಗೂ ಬಾದಾಮಿ ಹಾಲನ್ನ ಇಲ್ಲಿನವರೆಗೂ ನಾವು ನೋಡಿಯೇ ಇಲ್ಲ ಮೆನು ಚಾಟ್ ನಲ್ಲಿ ಮಾತ್ರ ನೋಡುತ್ತಿದ್ದೇವೆ ಎಂಬುವುದು ವಿದ್ಯಾರ್ಥಿಗಳ ದೂಡ್ಡ ಆರೋಪವಾಗಿದೆ .ಹಾಸ್ಟೆಲ್ ಗಳಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚು ವಾಸವಾಗಿದ್ದು, ಇಂತಹ ವಿದ್ಯಾರ್ಥಿಗಳ ಅಪೌಷ್ಟಿಕತೆ ಹೋಗಲಾಡಿಸಿ ಗುಣಮಟ್ಟ ಶಿಕ್ಷಣ ನೀಡಬೇಕೆಂದು ನೂರಾರು ಕೋಟಿ ರೂ ಬಳಕೆಯಾಗುತ್ತಿದ್ದರು ವಾರ್ಡನ್ ಗಳ ಹಣದ ದಾಹಕ್ಕೆ ವಿದ್ಯಾರ್ಥಿಗಳು ಸೊರಗಿ ಹೋಗಿದ್ದಾರೆ. ವಿದ್ಯಾರ್ಥಿನಿಲಯಗಳಲ್ಲಿ ವಾರಕ್ಕೆ 3 ಬಾರಿ ಮೊಟ್ಟೆ ಬಾಳೆಹಣ್ಣು ನೀಡಬೇಕು 1-2 ಬಾರಿ ನೀಡಿ ಕುಂಟು ನೆಪ ಹೇಳಲಿದ್ದಾರೆ ಒಂದು ಬಾರಿ ಒಂದು ವಿದ್ಯಾರ್ಥಿ ನಿಲಯಗಳಲ್ಲಿ ಬಾಳೆಹಣ್ಣು ನೀಡದಿದ್ದರೆ ಅಥವಾ ಮೊಟ್ಟೆ ನೀಡದಿದ್ದರೆ ಕನಿಷ್ಠ 250 ವಿದ್ಯಾರ್ಥಿಗಳಿಗೆ 5ಸಾವಿರ ದುಡ್ಡು ಉಳಿಯಲಿದೆ ತಿಂಗಳಿಗೆ ನಾಲ್ಕು ಬಾರಿ ಉಳಿಸಿದ್ರೆ, 20,000 ಕಡ್ಡಂತೆ ಉಳಿಸಿಕೊಳ್ಳಬಹುದು ಉಳಿದಂತೆ ವಾರಕ್ಕೆ ಒಂದು ಬಾರಿ ಚಿಕನ್ ನೀಡ ಬೇಕು ಆದರೆ ಕೆಲವು ಹಾಸ್ಟೆಲ್ ಗಳಲ್ಲಿ ತಿಂಗಳಿಗೆ 1-2 ಬಾರಿ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ, ಚಿಕನ್ 25 ಕೆಜಿ ವಿತರಿಸುವ ಜಾಗದಲ್ಲಿ ಕೇವಲ 7-8 ಕೆಜಿಗಳಲ್ಲಿ ಸರಿದೂಗಿಸಲಿದ್ದಾರೆ ಚಿಕನ್ ನಲ್ಲಿಯೂ ಸಹ ವಾರ್ಡನ್ ಗೆ ಪ್ರತಿ ಮಾಹೆ 25-30 ಸಾವಿರ ಹಣ ಉಳಿತಾಯವಾಗಲಿದೆ ಇನ್ನೂ ತರಕಾರಿ ಸೊಪ್ಪು ಕಳಪೆ ಗುಣಮಟ್ಟದಿಂದ ಕೂಡಿದ್ದು ಹಣ ಕಡಿಮೆ ಇರುವಂತಹ ತರಕಾರಿಗಳನ್ನು ತಂದು ಅಡುಗೆ ಮಾಡಲಾಗುತ್ತದೆ ಇದರಲ್ಲೂ ಕನಿಷ್ಠ ಪ್ರತಿ ತಿಂಗಳು 15-20 ಸಾವಿರ ಸಣ್ಣಪುಟ್ಟ ಹಾಸ್ಟೆಲ್ ಗಳಲ್ಲಿ ಉಳಿತಾಯವಾಗಲಿದೆ ಇನ್ನೂ ದೊಡ್ಡ ಮಟ್ಟದ ವಸತಿ ನಿಲಯಗಳಲ್ಲಿ ನೀವೇ ನಿರೀಕ್ಷಿಸಬಹುದು ಹಣ ಎಷ್ಟು ಅಧಿಕಾರಿಗಳು ಕೊಳ್ಳೆ ಹೊಡೆಯುತ್ತಾರೆ ಹಗಲು ದರೋಡೆ ಮಾಡುತ್ತಾರೆ ಎಂದು ಆದರೂ ಇಷ್ಟೆಲ್ಲಾ ವರಮಾನವಿದ್ದರೂ ಹಾಸ್ಟೆಲ್ ಗಳ ವಾರ್ಡನ್ ಗಳು ವಿದ್ಯಾರ್ಥಿಗಳ ತಟ್ಟೆ ಮೇಲಿನ ಅನ್ನಕ್ಕೆ ಕೈ ಹಾಕುತ್ತಾರೆ ಎಂದರೆ ಇವರಿಗೆ ಭಗವಂತ ಒಳ್ಳೆಯದನ್ನು ಬಯಸುತ್ತಾನೆಯೇ ಎಂದು ಅಲ್ಲಿಯ ಕೆಲವು ಹಾಸ್ಟೆಲ್ ಗಳ ಶಿಕ್ಷಕರುಗಳೇ ಅಸಹ್ಯ ಪಡುತ್ತಿರುವುದಲ್ಲದೆ ಪೋಷಕರೂ ಸಹ ಇಂತಹ ವಾರ್ಡನ್ ಗಳ ವಿರುದ್ಧ ಸಿಡಿಮಿಡಿ ಗೊಂಡಿದ್ದಾರೆ.

ಹಾಸ್ಟೆಲ್ ಗಳ ಬಹುತೇಕ ವಾರ್ಡನ್ ಗಳು ದೊಡ್ಡ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಹಗಲು ದರೋಡೆ ನಡೆಸುತ್ತಿದ್ದಾರೆ, ಟೆಂಡರ್ ದಾರರ ಜೊತೆ ಒಳ ಹೊಪ್ಪಂದ ಮಾಡಿಕೊಂಡು ಆಹಾರಕ್ಕಿಂತ ಕಡಿಮೆ ಪ್ರಮಾಣದ ಆಹಾರವನ್ನ ಇಳಿಸಿಕೊಂಡು ಉಳಿಕೆ ಆಹಾರವನ್ನ ಟೆಂಡರ್ ದಾರಿಗೆ ಬಿಟ್ಟು ಇಂತಿಷ್ಟು ಹಣ ಎಂದು ವಾಪಸ್ ಪಡೆಯುತ್ತಾರೆ ಇದು ಕೊರಟಗೆರೆ ತಾಲೂಕಿಗೆ ಮಾತ್ರ ಸೀಮಿತವಲ್ಲ ಇಡೀ ಜಿಲ್ಲೆಯಲ್ಲಿ ಈ ಅವ್ಯವಸ್ಥೆ ಹಾಸ್ಟೆಲ್ ಗಳಲ್ಲಿ ತಾಂಡವಾಡುತ್ತಿದೆ ದೊಡ್ಡ ಬ್ರಷ್ಟಾಚಾರ ನಡೆಯುತ್ತಿದೆ ಕೆಲವು ಹಾಸ್ಟಲ್ ಗಳ ನಿಷ್ಠಾವಂತ ಶಿಕ್ಷಕರೇ ಈ ಅವ್ಯವಸ್ಥೆಯ ವಿರುದ್ಧ ಇಡೀ ಶಾಪಾಗುತ್ತಿರುವುದಲ್ಲದೆ ವಿದ್ಯಾರ್ಥಿಗಳ ಪೋಷಕರು ಸಹ ಆರೋಪ ಮಾಡುತ್ತಿದ್ದಾರೆ.

ಸರ್ಕಾರ ನೀಡುವ ಅನುದಾನ ಸಮರ್ಪಕವಾಗಿ ಬಳಕೆಮಾಡಿದರೆ ಪ್ರತಿ ವಿದ್ಯಾರ್ಥಿಗಳು ಸಹ ಮೃಷ್ಠಾನ್ನ ಭೋಜನ ಸವಿಯಬಹುದು.ಜೊತೆಗೆ ಸರ್ಕಾರದಿಂದ ಬರುವ ಸವಲತ್ತುಗಳು ಬಳಕೆ ಆದರೆ ಸಾಕು ಹಾಸ್ಟಲ್ ಗಳು ತುಂಬಾ ವ್ಯವಸ್ಥಿತವಾಗಿರುತ್ತವೆ ವಿದ್ಯಾರ್ಥಿಗಳು ಸಹ ಗುಣಮಟ್ಟ ಆಹಾರ ಸೇವನೆ ಮಾಡಿ ಅಪೌಷ್ಟಿಕತೆಯಿಂದ ಹೊರಬರುವುದಲ್ಲದೆ ಶೈಕ್ಷಣಿಕ ಗುಣಮಟ್ಟ ಹೆಚ್ಚಲಿದೆ ಆದರೆ ವಾರ್ಡನ್ ಗಳ ದುರಾಸೆಗೆ ಇಡೀ ವ್ಯವಸ್ಥೆ ಹಾಳಾಗಿದ್ದು , ಒಬ್ಬ ವಾರ್ಡನ್ ಗೆ ಪ್ರತಿ ಮಾಹೆ ನಿರೀಕ್ಷೆ ಮೀರಿ ಹಣ ಉಳಿಯುತ್ತಿದ್ದು, ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಮೇಲ್ಪಟ್ಟ ಎಲ್ಲಾ ಅಧಿಕಾರಿಗಳಿಗೂ ಇಂತಿಷ್ಟು ಎಂದು ಹಣ ನೀಡುತ್ತಿದ್ದು ಯಾರೊಬ್ಬ ಅಧಿಕಾರಿಗಳು ಅದಕ್ಕಾಗಿಯೇ ಹಾಸ್ಟಲ್ ಗಳಿಗೆ ಭೇಟಿ ನೀಡದೆ ಕೈಕಟ್ಟಿ ಕುಳಿತುಕೊಂಡಿರುವುದು ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಗಳ ಸುರಿಮಳೆಗೆರಿಯುತ್ತಿದ್ದಾರೆ.

ಹಾಸ್ಟೆಲ್ ಗಳಲ್ಲಿ ನೀಡುವ ಸರ್ಕಾರಿ ಸೌವಲತ್ತುಗಳಲ್ಲಿ ಎಣ್ಣೆ, ಮೈ ಸೋಪು ,ಪೇಸ್ಟ್ ,ಬ್ರಷ್ ,ಬಟ್ಟೆ ಸೋಪು, ಲೇಖನ ಸಾಮಗ್ರಿಗಳು, ಪಠ್ಯಪುಸ್ತಕ, ಯೂನಿಫಾರ್ಮ್ಸ್, ಹಾಸಿಗೆ ,ಓದಿಕೆ, ದಿಂಬು ಸೇರಿದಂತೆ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರತಿಕೂಲ ವಾತಾವರಣ ಕಲ್ಪಿಸುವಂತಹ ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಸಹ ಸರ್ಕಾರ ಒದಗಿಸುತ್ತಿದ್ದು ಇಷ್ಟೆಲ್ಲಾ ಮೂಲಭೂತ ಸೌಕರ್ಯಗಳಲ್ಲಿ ಒಂದಿಷ್ಟು ಸಣ್ಣಪುಟ್ಟ ಲೋಪದೋಷಗಳು ಕಂಡುಬಂದು ಇಲ್ಲಿಯೂ ಅಲ್ಪ ಪ್ರಮಾಣದ ಹಣ ಲೋಪವಾಗುತ್ತಿದೆ ಆದರೂ ಹಾಸ್ಟೆಲ್ ನಲ್ಲಿ ಪ್ರಮುಖವಾಗಿ ಆಹಾರ ವಿತರಣೆಯಲ್ಲಿ ದೊಡ್ಡ ಭ್ರಷ್ಟಾಚಾರ ವಾಗುತ್ತಿದೆ ಎಂಬ ಆರೋಪ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕೇಳಿ ಬರುತ್ತಿದೆ.

ಹಾಸ್ಟೆಲ್ ಗಳಿಗೆ ರಾಜ್ಯಾದ್ಯಂತ ಏಕರೂಪ ಟೆಂಡರ್ ಪ್ರಕ್ರಿಯೆ ಇದ್ದು, ಅವರಿಂದಲ್ಲೇ ಆಹಾರ ಸರಬರಾಜು ನಿಯೋಜನೆಗೊಂಡಿರುತ್ತದೆ ಟೆಂಡರ್ ದಾರನಿಂದ ಆಹಾರ ದಾಸ್ತಾನು ತೆಗೆದುಕೊಳ್ಳುವಾಗ ಗುಣಮಟ್ಟದ ಆಹಾರವನ್ನು ಇಳಿಸಿಕೊಳ್ಳುವಲ್ಲಿ ವಾರ್ಡನ್ ಪಾತ್ರ ಪ್ರಮುಖವಾಗಿರುತ್ತದೆ ಆದರೆ ಟೆಂಡರ್ ದಾರರು ಹಾಗೂ ವಾರ್ಡನ್ ಒಳ ಒಪ್ಪಂದದಿಂದ ಇದ್ಯಾವುದು ಲೆಕ್ಕಕ್ಕೆ ಬಾರದೆ ಟೆಂಡರ್ದಾರರು ನೀಡುವ ಆಹಾರವನ್ನ ಅವರಿಬ್ಬರ ಒಪ್ಪಂದದಂತೆ ಇಳಿಸಿಕೊಳ್ಳಲಾಗುತ್ತಿದ್ದು ಇಲ್ಲಿ ಗುಣಮಟ್ಟ ಹಾಗೂ ಅಳತೆ ಯಾವುದು ಪ್ರಮುಖವಾಗಿರುವುದಿಲ್ಲ. ಎಲ್ಲವೂ ಅವರಿಬ್ಬರ ಒಳ ಒಪ್ಪಂದದಂತೆ ನಡೆಯುತ್ತಿರುವುದು ದೊಡ್ಡ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸುತ್ತಾರೆ.

ಹಾಸ್ಟೆಲ್ ಗಳಲ್ಲಿ ಟೆಂಡರ್ ಪ್ರಕ್ರಿಯೆ ಎರಡು ಮಾದರಿಯಲ್ಲಿ ನೆಡೆಯುತ್ತದೆ, ಪಾರ್ಟಿ ಎ. ಪಾರ್ಟಿ ಬಿ ಎಂದು, ಪಾರ್ಟಿ.ಎ ಟೆಂಡರ್ ದಾರದಿಂದ ಕಾಳು -ಕಡಿ-ಅಕ್ಕಿ – ಬೇಳೆ – ಸಾಂಬಾರ್ ಪದಾರ್ಥಗಳು ಸೇರಿದಂತೆ ದಿನಸಿಗೆ ಸಂಬಂಧಿಸಿದಂತ ವಸ್ತುಗಳಾಗಿರುತ್ತವೆ,
ಪಾರ್ಟಿ- ಬಿ. ಸ್ವ ಇಚ್ಛೆಯಿಂದ ವಾರ್ಡನ್ ಗಳೇ ಕೊಂಡುಕೊಳ್ಳುವ ಅಧಿಕಾರವಿರುವ ಟೆಂಡರ್ ಇಲ್ಲಿ ತರಕಾರಿ, ಬಾಳೆಹಣ್ಣು, ಮೊಟ್ಟೆ, ಚಿಕನ್, ಸ್ನಾಕ್ಸ್ ಹಾಲು ಸೇರಿದಂತೆ ಇನ್ನೀತರ ವಸ್ತುಗಳು ಕೊಂಡುಕೊಂಡು ವಿದ್ಯಾರ್ಥಿಗಳಿಗೆ ಹಂಚುವ ಅಧಿಕಾರವಿರುತ್ತದೆ, ಇಲ್ಲಿ ಎರಡು ಟೆಂಡರ್ ಪ್ರಕ್ರಿಯೆಯಲ್ಲೂ ವಾರ್ಡನ್ ಗಳಿಗೆ ಅಧಿಕ ಹಣ ಉಳಿತಾಯವಾಗಲಿದ್ದು, ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಆಹಾರ ಸರಬರಾಜು ಗೊಳಿಸಿದರು ಪ್ರತಿ ವಿದ್ಯಾರ್ಥಿಗಳಿಗೂ ಮೃಷ್ಟಾನ್ನ ಭೋಜನ ನೀಡಿಯೂ ಸಹ ಹಣಗಳಿಸಬಹುದು ಆದರೆ ಕೆಲವು ವಾರ್ಡನ್ ಗಳು ಹಣದ ದುರಾಸೆಗೆ ವಿದ್ಯಾರ್ಥಿಗಳ ಅನ್ನಕ್ಕೂ ಕೈ ಹಾಕುತ್ತಿರುವುದು ದುರಾದೃಷ್ಟಕರ ಸಂಗತಿ.

ಹಾಸ್ಟೆಲ್ ಗಳಲ್ಲಿ ವಾರ್ಡನ್ ಗಳು ಕೇಂದ್ರ ಸ್ಥಾನದಲ್ಲಿಯೇ ಉಳಿದುಕೊಳ್ಳಬೇಕು ಎಂಬ ನಿಯಮವಿದೆ ಆದರೆ ಇಲ್ಲಿ ಬಹಳಷ್ಟು ವಾರ್ಡನ್ ವಾಸವಿಲ್ಲ ಬೇರೆ ಕಡೆಯಿಂದ ಅಂದರೆ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ವಾಸವಿದ್ದು, ಹಾಸ್ಟೆಲ್ ಗಳಲ್ಲಿ ನಿಲಯ ಪಾಲಕರು ಗೈರು ಹಾಜರಾಗಿ ಅಡುಗೆ ಪಾಲಕರೇ ನಿಲಯ ಪಾಲಕರಾಗಿರುತ್ತಾರೆ, ವಸತಿ ನಿಲಯಗಳಲ್ಲಿ ಪ್ರತ್ಯೇಕ ಕ್ವಾರ್ಟರ್ಸ್ ಗಳು ನೀಡಿದರು ಸಹ ಅಲ್ಲಿ ವಾಸವಿಲ್ಲದೆ ಬೇರೆಡೆ ವಾಸವಾಗಿದ್ದು, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ದೇವರೇ ಬಲ್ಲ ಎಂಬ ಪರಿಸ್ಥಿತಿ ಪ್ರತಿ ಹಾಸ್ಟೆಲ್ ಗಳೆಲ್ಲೂ ಸರ್ವೇಸಾಮಾನ್ಯವಾಗಿದ್ದು, ಜವಾಬ್ದಾರಿ ಹುದ್ದೆ ಹಾಗೂ ಆರ್ಥಿಕ ವರಮಾನವಿರುವ ಹುದ್ದೆಗಳೇ ಇಷ್ಟೊಂದು ಅವ್ಯವಸ್ಥೆಯಾದರೆ ಇಲಾಖೆಯ ಪಾಡೇನು ? ಎಂಬುದೇ ಯಕ್ಷ ಪ್ರಶ್ನೆಯಾಗಿಗದೆ ಜೋತೆ ಗೆ ಹಾಸ್ಟೆಲ್ ಗಳಲ್ಲಿ ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಮೇಲಾಧಿಕಾರಿಗಳು ಜಾಣ ಕೂಡುತನ -ಕಿವುಡುತನ ಮೆರೆಯುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಾಗಿದೆ.

ಒಟ್ಟಾರೆ ಅಪೌಷ್ಟಿಕತೆ ಹೋಗಲಾಡಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತಹ ಜ್ಞಾನ ಕೇಂದ್ರಗಳು ಇಂದು ಅಧಿಕಾರಿಗಳ ಹಣದ ದಾಹಕ್ಕೆ ಸೊರಗುತ್ತಿದ್ದು, ಮುಂದೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಡ ಹಾಕಲಿದ್ದಾರೆಯೇ ಕಾದು ನೋಡಬೇಕಿದೆ ಎಂಬುದೇ ಕೇಲವು ಪ್ರಜ್ಞಾವಂತರ ವಾದವಾಗಿದೆ.

ಕೆಲವೊಂದು ಹಾಸ್ಟೆಲ್ ಗಳ ಬಗ್ಗೆ ಆರೋಪ ಕೇಳಿ ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಒಂದಷ್ಟು ವಿದ್ಯಾರ್ಥಿಗಳಿಂದ ಆರೋಪಗಳನ್ನ ಆಲಿಸಿ ಅಲ್ಲಿನ ಶಿಕ್ಷಕರುಗಳಿಂದ ಮಾಹಿತಿ ಕಲೆ ಹಾಕಿ ವಾತಾವರಣ ತಿಳಿಗೊಳಿಸಿ ಕೆಲವು ವಾರ್ಡನ್ ಗಳಿಗೆ ಎಚ್ಚರಿಕೆಯ ಜೊತೆಗೆ ನೋಟಿಸ್ ಜಾರಿಗೊಳಿಸಿ ಶಿಸ್ತು ಕ್ರಮಕ್ಕೂ ಬರೆಯಲಾಗಿದೆ, ಬಹಳಷ್ಟು ಹಾಸ್ಟೆಲ್ ಗಳಲ್ಲಿ ಸಣ್ಣಪುಟ್ಟ ಲೋಪಗಳು ಸಾಮಾನ್ಯವಾಗಿವೆ, ಗುಣಮಟ್ಟ ಆಹಾರ ವಿತರಣೆ ವಿಚಾರದಲ್ಲಿ ರಾಜಿ ಇಲ್ಲ ಎಲ್ಲಾ ವಾರ್ಡನ್ ಗಳಿಗೂ ಖಡಕ್ ಎಚ್ಚರಿಕೆ ನೀಡಲಾಗಿದೆ ಜೊತೆಗೆ ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಎಲ್ಲಿಯೂ ಲೋಪವಾಗದಂತೆ ನಿಗ ವಹಿಸಲಾಗಿದೆ.

ಪ್ರೇಮಾ, ಜಿಲ್ಲಾ ಸಮಾಜ ಕಲ್ಯಾಣ ಜಂಟಿ ನಿರ್ದೇಶಕಿ ತುಮಕೂರು

ತಾಲೂಕುಗಳಲ್ಲಿ ಹಾಸ್ಟೆಲ್ ಗಳಲ್ಲಿ ಶಿಕ್ಷಣ ಗುಣಮಟ್ಟದಲ್ಲಿ ಯಾವುದೇ ತೊಂದರೆ ಇಲ್ಲ, ಆಹಾರ ವಿತರಣೆ ವಿಚಾರದಲ್ಲಿ ಒಂದಷ್ಟು ವಿದ್ಯಾರ್ಥಿಗಳಿಂದ ಆರೋಪ ಕೇಳಿ ಬರುತ್ತಿದೆ ಅಂತಹ ವಾರ್ಡನ್ ಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಮುಂದಿನ ದಿನಗಳಲ್ಲಿ ಯಾವುದೇ ಹಾಸ್ಟೆಲ್ ಗಳಿಂದಲೂ ವಿಧ್ಯಾರ್ಥಿಗಳಿಂದ ಆರೋಪ ಬಾರದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಜೊತೆಗೆ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಯಾವುದೇ ಹಾಸ್ಟೆಲ್ ಗಳಲ್ಲಿ ತೊಂದರೆ ಬಾರದಂತೆ ನೋಡಿಕೊಳ್ಳಲಾಗಿದೆ ‌

ಕಸ್ತೂರಿ ಕುಮಾರ್, ಜಿಲ್ಲಾ ಸಮನ್ವಯ ಅಧಿಕಾರಿ ತುಮಕೂರು

ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಆಹಾರ ವಿತರಣೆಯಾಗುತ್ತಿಲ್ಲ, ಮೆನು ಚಾರ್ಟ್ ನೆಪ ಮಾತ್ರಕ್ಕೆ ಮಾತ್ರ ಬರೆಯಲಾಗಿದೆ ಅದರಂತೆ ಯಾವುದೇ ತಿಂಡಿ ಊಟ ನೀಡುತ್ತಿಲ್ಲ, ಗುಣಮಟ್ಟದ ತರಕಾರಿ, ಮೊಳಕೆ ಕಟ್ಟಿದ ಕಾಳು ಸಿಗುತ್ತಿಲ್ಲ , ಡ್ರೈ ಫ್ರೂಟ್ಸ್, ಬಾದಾಮಿ ಹಾಲು ಎರಡು ಮೂರು ವರ್ಷಗಳಿಂದಲೂ ನೋಡಿಯೇ ಇಲ್ಲ, ಬಾಳೆಹಣ್ಣು, ಮೊಟ್ಟೆ, ಚಿಕ್ಕನ್ ಸಮರ್ಪಕವಾಗಿ ವಿತರಣೆಯಾಗುವುದಿಲ್ಲ ಇಲ್ಲಿ ಶೈಕ್ಷಣಿಕ ಗುಣಮಟ್ಟ ಚೆನ್ನಾಗಿದೆ ಗುಣಮಟ್ಟ ಆಹಾರ ಸರಬರಾಜು ಗೊಳ್ಳುತ್ತಿಲ್ಲ.

ಶೋಭಾ, ವಸತಿ ಶಾಲೆ ವಿದ್ಯಾರ್ಥಿನಿ

ಸರ್ಕಾರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಲವು ಸೌಲಭ್ಯಗಳ ಮೂಲಕ ಲಕ್ಷಾಂತರ ರೂ ಹಣ ವ್ಯಯ ಮಾಡುತ್ತಿದ್ದು, ಇದನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸದೆ ವಿದ್ಯಾರ್ಥಿಗಳಿಗೆ ತುಂಬಾ ಅಡಚಣೆಯಾಗುತ್ತಿದೆ, ತಾಲೂಕಿನಲ್ಲಿನ ಇಂತಹ ವಾರ್ಡನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ‌

ದೊಡ್ಡೇರಿ ಕಣ್ಮಯ್ಯ, ಪೋಷಕ

ಸಿದ್ದರಾಜು ಕೆ ಕೊರಟಗೆರೆ

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

hejjenu

Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.