ಎಲ್ಲಾ ಕಾಂಗ್ರೆಸ್ ನಾಯಕರನ್ನು ಇ ಡಿ ತನಿಖೆಗೊಳಪಡಿಸಬೇಕು: ಸಚಿವ ಸುನಿಲ್
ರಮೇಶ್ ಕುಮಾರ್ ಬಹಳ ದಿನದ ಬಳಿಕ ಸತ್ಯ ಹೇಳಿದ್ದಾರೆ
Team Udayavani, Jul 21, 2022, 7:02 PM IST
![sunil kumar](https://www.udayavani.com/wp-content/uploads/2022/07/sunil-kumar-3-620x381.jpg)
![sunil kumar](https://www.udayavani.com/wp-content/uploads/2022/07/sunil-kumar-3-620x381.jpg)
ಬೆಂಗಳೂರು: ಎಲ್ಲಾ ಕಾಂಗ್ರೆಸ್ ನಾಯಕರನ್ನು ಇ ಡಿ ತನಿಖೆಗೊಳಪಡಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಆಡಳಿತದಿಂದ ಹಿಡಿದು ಸ್ಥಳೀಯ ಆಡಳಿತದ ವರೆಗೂ ಲೂಟಿ ಮಾಡಿದ್ದಾರೆ. ಸೋನಿಯಾ, ರಾಹುಲ್ ಮಾತ್ತವಲ್ಲ, ಎಲ್ಲಾ ಕಾಂಗ್ರೆಸ್ ನಾಯಕರನ್ನು ಇಡಿ ತನಿಖೆಗೆ ಒಳಪಡಿಸಬೇಕು ಎಂದರು.
ರಮೇಶ್ ಕುಮಾರ್ ಹೇಳಿಕೆಯನ್ನ ಸ್ವಾಗತಿಸುತ್ತೇನೆ, ಕಾಂಗ್ರೆಸ್ ಭ್ರಷ್ಟಾಚಾರ ನಮ್ಮ ಹೇಳಿಕೆ ಅಲ್ಲ, ರಮೇಶ್ ಕುಮಾರ್ ಹೇಳಿಕೆ ಮೂಲಕ ಸ್ಪಷ್ಟವಾಗಿದೆ. ಎಷ್ಟು ಪ್ರಮಾಣದಲ್ಲಿ ಆಸ್ತಿ ಮಾಡಿದ್ದಾರೆ ಅಂತ ಬಿಜೆಪಿ ಆರೋಪ ಮಾಡೋದಲ್ಲ.ಸ್ವತಃ ಕಾಂಗ್ರೆಸ್ ಹಿರಿಯ ನಾಯಕರೇ ಒಪ್ಪಿಕೊಂಡಿದ್ದಾರೆ.ಒಂದೆಲ್ಲಾ ಒಂದು ದಿನ ಸತ್ಯ ಹೊರಬರಬೇಕು. ಇಂದು ರಮೇಶ್ ಕುಮಾರ್ ಹೇಳಿಕೆ ರೂಪದಲ್ಲಿ ಹೊರಬಂದಿದೆ.ರಮೇಶ್ ಕುಮಾರ್ ತಮ್ಮ ಸಹಜವಾದ ಭಾಷಣದ ವೇಳೆ ಬಹಳ ದಿನದ ಬಳಿಕ ಸತ್ಯ ಹೇಳಿದ್ದಾರೆ ಎಂದರು.
ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರು ಹೇಳಿಕೊಂಡು ಮೂರು ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ ಎಂದು ರಮೇಶ್ ಕುಮಾರ್ , ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿರುವುದನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಹೇಳಿಕೆ ನೀಡಿದ್ದರು. ಕಿಂಚಿತ್ ತ್ಯಾಗಕ್ಕೆ ನಾವು ತಯಾರಾಗದಿದ್ದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದಿದ್ದರು.
ಇದನ್ನೂ ಓದಿ : ಪಿಎಸ್‌ಐ ಅಕ್ರಮ ಪ್ರಕರಣ: ಆರೋಪಿಗಳ ಜಾಮೀನಿಗೆ ಪ್ರಬಲ ಆಕ್ಷೇಪ