ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಪ್ರಶಸ್ತಿ ಪ್ರಕಟ
Team Udayavani, Jul 21, 2022, 10:44 PM IST
ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2022ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಅಧ್ಯಕ್ಷ ಡಾ| ಅಜಕ್ಕಳ ಗಿರೀಶ ಭಟ್ಪ್ರಕಟಿಸಿದ್ದಾರೆ.
ಕರ್ನಾಟಕ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ| ಸಿ.ಆರ್. ಯರವಿನ ತೆಲಿಮಠ, ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಆರ್. ವಿ.ಎಸ್. ಸುಂದರಂ, ಲೇಖಕಿ ವಿಜಯಾ ಗುತ್ತಲ, ಭಾಷಾಂತರಕಾರ ಕೆ.ನಲ್ಲತಂಬಿ ಹಾಗೂ ಅನುವಾದಕ ವಿ.ಕೃಷ್ಣ ಅವರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು 50 ಸಾ. ರೂ. ಮತ್ತು ಪುರಸ್ಕಾರ ಒಳಗೊಂಡಿದೆ.
ಪುಸ್ತಕ ಬಹುಮಾನ :
2021ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪುಸ್ತಕ ಬಹುಮಾನಗಳನ್ನೂ ಪ್ರಕಟಿಸಲಾಗಿದೆ.
ಕನ್ನಡದಿಂದ ಇಂಗ್ಲಿಷ್ಗೆ ಅನುವಾದಗೊಂಡ “ದ ಎಸೆನ್ಶಿಯಲ್ ಮಹಾಭಾರತ’ ಕೃತಿ (ಅನುವಾದಕರು: ಅರ್ಜುನ ಭಾರದ್ವಾಜ ಮತ್ತು ಹರಿ ರವಿಕುಮಾರ್)ಗೆ ಪುಸ್ತಕ ಬಹುಮಾನ ದೊರೆತಿದೆ.
ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರ ಗೊಂಡ “ಪರ್ದಾ -ಪಾಲಿಗಮಿ’ (ಅನುವಾದಕರು: ದಾದಾಪೀರ್ ಜೈಮನ್ ) ಕೃತಿ ಮತ್ತು ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ನೀಡುವ ಬಹುಮಾನಕ್ಕೆ ಮಲರಿÌಳಿ ಕೆ. ಅವರ “ಕಳ್ಳಿಗಾಡಿನ ಇತಿಹಾಸ’ ಕೃತಿ ಮತ್ತು ಮೋಹನ ಕುಮಾರ ಕುಂಟಾರು ಅವರ “ಪ್ರೇಮಪತ್ರ’ ಕೃತಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ.
ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ ನೀಡುವ ಪುಸ್ತಕ ಬಹುಮಾನಕ್ಕೆ ಡಾ| ಎಚ್.ಆರ್. ವಿಶ್ವಾಸ ಅವರ “ಉತ್ತರಕಾಂಡಂ’ ಕೃತಿ ಆಯ್ಕೆ ಆಗಿದೆ. ಪುಸ್ತಕ ಬಹುಮಾನವು ತಲಾ 25 ಸಾವಿರ ರೂ. ಬಹುಮಾನ ಮತ್ತು ಪುರಸ್ಕಾರ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.