‘ಲವ್ ಮಾಕ್ಟೇಲ್ 2’ ಹುಡುಗಿ ಕೈ ತುಂಬಾ ಸಿನಿಮಾ: ಸಖತ್ ಬ್ಯುಸಿಯಾದ ರಚೆಲ್ ಡೇವಿಡ್
Team Udayavani, Jul 22, 2022, 2:55 PM IST
ಇತ್ತೀಚೆಗೆ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿ ಕೊಳ್ಳುತ್ತಿರುವ ನಟಿಯರಲ್ಲಿ “ಲವ್ ಮಾಕ್ಟೇಲ್’ ಖ್ಯಾತಿಯ ರಚೆಲ್ ಡೇವಿಡ್ ಕೂಡ ಒಬ್ಬರು. ಸದ್ಯ “ಕಂಟ್ರಿ ಮೇಡ್’ ಸೇರಿದಂತೆ ಒಂದಷ್ಟು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಚೆಲ್, ಸದ್ದಿಲ್ಲದೆ ಮತ್ತೂಂದು ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
“ರಾಮಾ ರಾಮಾ ರೇ’, “ಒಂದಲ್ಲ ಎರಡಲ್ಲ ‘ ಸಿನಿಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾದಲ್ಲಿ ರಚೆಲ್ ಡೇವಿಡ್, ನವನಟ ಮಿಲಿಂದ್ ಜೊತೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದಲ್ಲದೇ “ಭುವನಂ ಗಗನಂ’ ಚಿತ್ರದಲ್ಲೂ ರಚೆಲ್ ನಾಯಕಿ.
ಇದನ್ನೂ ಓದಿ:ಅಬ್ಬರಿಸಲು ಪ್ರಜ್ವಲ್ ದೇವರಾಜ್ ರೆಡಿ: ಆಗಸ್ಟ್ 12ಕ್ಕೆ ‘ಅಬ್ಬರ’ ತೆರೆಗೆ
2018ರಲ್ಲಿ ತೆರೆಕಂಡ ಅನಂತನಾಗ್ ಅಭಿನಯದ “ವೀಕೆಂಡ್’ ಸಿನಿಮಾದಲ್ಲಿ ನಟಿಸಿದ್ದ ಮಿಲಿಂದ್ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಈ ಸಿನಿಮಾದ ಮೂಲಕ ಮಿಲಿಂದ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಮಿಲಿಂದ್, ರಚೆಲ್ ಜೋಡಿ ಹೊಸ ರೀತಿಯಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಇಂದಿನ ಜನರೇಶನ್ ಆಡಿಯನ್ಸ್‌ಗೆ ಇಷ್ಟವಾಗುವಂಥ ಕಥೆ ಸಿನಿಮಾದಲ್ಲಿದೆ ಎನ್ನುವುದು ಚಿತ್ರತಂಡದ ಮಾತು.
ಈ ಹಿಂದೆ “ಭಾಗ್ಯರಾಜ್’, “ರಾಜು ಜೇಮ್ಸ್ ಬಾಂಡ್’, “ಕಳ್ಬೆಟ್ಟದ ದರೋಡೆಕೋರರು’ ಸಿನಿಮಾಗಳನ್ನು ನಿರ್ದೇಶಿಸಿದ್ದ ದೀಪಕ್ ಮಧುವನಹಳ್ಳಿ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಇನ್ನು ಚಿತ್ರಕ್ಕೆ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಲವಿತ್ ಛಾಯಾಗ್ರಹಣ, ಅಜಯ್ ಸಂಕಲನವಿದೆ. “ಸತ್ಯ’ ಹಾಗೂ “ಮಯೂರ ಪಿಕ್ಚರ್’ ಬ್ಯಾನರ್‌ನಡಿ ಸತ್ಯ ಪ್ರಕಾಶ್ ಮತ್ತು ಮಂಜುನಾಥ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಸದ್ಯ ಈ ಸಿನಿಮಾ ಶುರುವಾಗುವ ಸುದ್ದಿಯಷ್ಟೇ ಖಚಿತವಾಗಿದ್ದು, ಸಿನಿಮಾದ ಟೈಟಲ್, ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.