ಸೋನಿಯಾ ಗಾಂಧಿ,ರಾಹುಲ್ ಸಂವಿಧಾನಕ್ಕಿಂತ ದೊಡ್ಡವರೇ? : ಬಿಜೆಪಿ ಕಿಡಿ

ಮೋದಿ ಅವರನ್ನು ವಿಚಾರಣೆ ಮಾಡಿಲ್ಲವೇ? ಶಾ ಜೈಲಿಗೆ ಹೋಗಿಲ್ಲವೇ?, ಇ ಡಿ,‌ ಸುಪ್ರೀಂ ಕೋರ್ಟ್ ಮುಚ್ಚುತ್ತೇವೆ ಅಂತ ಪ್ರಣಾಳಿಕೆ ಮಾಡಿ

Team Udayavani, Jul 22, 2022, 4:48 PM IST

bjp-congress

ಬೆಂಗಳೂರು : ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರ ಹಾಕಿದ್ದು, ಪ್ರಜಾಪ್ರಭುತ್ವದ ವ್ಯಾಪ್ತಿಯೊಳಗಡೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಲ್ಲವೇ ಎಂದು ಪ್ರಶ್ನಿಸಿದೆ.

ಶುಕ್ರವಾರ ಸಚಿವ ಬಿ.ಸಿ ನಾಗೇಶ್, ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಮತ್ತು ನವೀನ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಎನ್. ರವಿಕುಮಾರ್ ಮಾತನಾಡಿ, ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನ ವಿಚಾರಣೆಗೆ ಕರೆಯಬಾರದು. ಇ ಡಿ, ಸಿಬಿಐ ಯಾವುದೇ ಇದ್ದರೂ ಕಾಂಗ್ರೆಸ್ ನಾಯಕರನ್ನ ಕರೆಯಬಾರದು.ಕೇಂದ್ರ ಸರ್ಕಾರದ ನಿರ್ಧಾರದಂತೆ ಎಲ್ಲವೂ ಕಾರ್ಯಾಚರಣೆ ಮಾಡುತ್ತಿವೆ ಎಂದು ಗಂಭೀರ ಆಪಾದನೆ ಮಾಡಿದ್ದಾರೆ.ಸಿಬಿಐ, ಇ ಡಿ ಎಲ್ಲವೂ ಬಿಜೆಪಿ ಬಂದ ಬಳಿಕ ಬಂದದ್ದಲ್ಲ, ಕಾಂಗ್ರೆಸ್ ಇದ್ದಾಗ, ಸ್ವಾತಂತ್ರ್ಯ ಬಂದ ನಂತರ, ಗಣತ್ರಂತ್ರ ಬಂದ ನಂತರ ಬಂದಿದೆ ಎಂದರು.

ಮೋದಿ ಅವರನ್ನು ವಿಚಾರಣೆ ಮಾಡಿಲ್ಲವೇ? ಅಮಿತ್ ಶಾ ವಿಚಾರಣೆ ಎದುರಿಸಿ ಜೈಲಿಗೆ ಹೋಗಿಲ್ಲವೇ?. ಪ್ರಜಾಪ್ರಭುತ್ವದಲ್ಲಿ ಸೋನಿಯಾ, ರಾಹುಲ್ ಗಾಂಧಿ ಇಲ್ಲವೇ? ಆಲ್ ಇಂಡಿಯಾ ಬಾಡೀಸ್ ಎಲ್ಲವೂ ಸಂವಿಧಾನ ವ್ಯವಸ್ಥೆ ಆಗಿವೆ‌. ಸೋನಿಯಾ, ರಾಹುಲ್ ಗಾಂಧಿ ಸಂವಿಧಾನಕ್ಕಿಂತ ದೊಡ್ಡವರೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ಎಲ್ಲಾ ಪ್ರತಿಭಟನಾ ನಿರತರನ್ನು ಪ್ರಶ್ನೆ ಮಾಡುತ್ತೇನೆ, ಕಾಂಗ್ರೆಸ್ ಪಕ್ಷವನ್ನು ಬಗ್ಗು ಬಡಿಯಲು ಈ ರೀತಿ ಮಾಡುತ್ತಿದ್ದಾರೆ ಅನ್ನುವ ಆರೋಪ‌ ಇದೆ. ಆದರೆ ಆ ರೀತಿ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ. ನೀವು 60ವರ್ಷ ಆಡಳಿತ ನಡೆಸಿದ್ದೀರಿ. ಅನೇಕ ಕೆಲಸ ಮಾಡಿದ್ದೀರಿ.ಆದರೆ ಈಗ ಪ್ರತಿಭಟನೆ ಮಾಡುವುದು ನಾಚಿಕೆಗೇಡಿನ ಸಂಗತಿ. ಮೋದಿ ವಿಚಾರಣೆ ವೇಳೆ ಬಿಜೆಪಿ ಪ್ರತಿಭಟನೆ ನಡೆಸಿತ್ತಾ? ಅಮಿತ್ ಶಾ ಜೈಲಿಗೆ ಕಳುಹಿಸಿದಾಗ ಪ್ರತಿಭಟನೆ ಮಾಡಿದ್ದೇವಾ? ಇದು ಸಂವಿಧಾನ ವಿರೋಧಿ ಕಾರ್ಯಕ್ರಮ ಎಂದರು.

ನಿನ್ನೆ ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ. ಬ್ರಿಟಿಷರು ಲೂಟಿ ಮಾಡಿದ ರೀತಿಯಲ್ಲೇ ನೀವು ಲೂಟಿ ಮಾಡಿದ್ದೀರಿ.ನ್ಯಾಷನಲ್ ಹೆರಾಲ್ಡ್ ಮೂಲಕ ಅನ್ಯಾಯ, ಅಕ್ರಮದ ಮೂಲಕ ನೀವು ಹಣ ಮಾಡಿದ್ದೀರಿ. ಸುಪ್ರೀಂ ಕೋರ್ಟ್, ಇಡಿ ಬಂದ್ ಮಾಡಬೇಕು ಅಂತ ಹೇಳಿ.ನಾವು ಅಧಿಕಾರಕ್ಕೆ ಬಂದ ಮೇಲೆ ಇ ಡಿ,‌ ಸುಪ್ರೀಂ ಕೋರ್ಟ್ ಮುಚ್ಚುತ್ತೇವೆ ಅಂತ ಪ್ರಣಾಳಿಕೆ ಮಾಡಿ ಹೊರಡಿಸಿ, ಬನ್ನಿ ಚುನಾವಣೆಗೆ ಹೋಗೋಣ ಎಂದು ರವಿಕುಮಾರ್. ಸವಾಲು ಹಾಕಿದರು.

ನಿನ್ನೆ ನಲಪಾಡ್ ಬಾಯಿಗೆ ಬಂದಂತೆ ಭಾಷಣ ಮಾಡಿದ್ದಾರೆ. ಅವರೂ ಬೇಲ್ ಮೇಲೆ ಹೊರಗೆ ಇರುವ ಗಿರಾಕಿ. ಟ್ರಾಫಿಕ್ ಜಾಮ್ ಆಗುವಂತೆ, ಸಾರ್ವಜನಿಕರಿಗೆ ತೊಂದರೆ ಆಗುವಂತೆ ಪ್ರತಿಭಟನೆ ಯಾಕೆ ಮಾಡಿದಿರಿ? ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಯಾವುದಾದರೂ ಪ್ರತಿಭಟನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.