ಬೆಳೆಗಳಿಗೆ ಜಿಂಕೆಗಳ ಹಾವಳಿ ತಪ್ಪಿಸಲು ಜಿಲ್ಲಾಧಿಕಾರಿಗೆ ಮನವಿ
Team Udayavani, Jul 22, 2022, 6:09 PM IST
ರಾಯಚೂರು: ತಾಲೂಕಿನ ಮನ್ಸಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆಗಳಿಗೆ ಜಿಂಕೆಗಳ ಹಾವಳಿ ಮಿತಿ ಮೀರುತ್ತಿದ್ದು, ಬೆಳೆಯೆಲ್ಲ ಹಾಳಾಗುತ್ತಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಿತ್ಯ ಬೆಳಗ್ಗೆ, ಸಂಜೆ ಜಮೀನುಗಳಿಗೆ ಲಗ್ಗೆ ಇಡುತ್ತಿರುವ ಜಿಂಕೆಗಳ ಹಿಂಡುಗಳು ಈಗ ತಾನೆ ಮೊಳಕೆ ಬಂದಿರುವ ಬೆಳೆಯನ್ನೆಲ್ಲ ತಿಂದು, ತುಳಿದಾಡಿ ಹಾಳು ಮಾಡುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಮನ್ಸಲಾಪುರ, ಕುಕನೂರು, ಮರ್ಚೇಡ್, ಏಗನೂರು, ಚಿಕ್ಕಸೂಗೂರು, ಹೊಸಪೇಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈ ಸಮಸ್ಯೆ ಎದುರಾಗಿದೆ. ತೊಗರಿ, ಹತ್ತಿ ಸೇರಿ ಇನ್ನಿತರ ಬೆಳೆಗಳನ್ನು ಲಕ್ಷಾಂತರ ರೂ. ಸಾಲ ಮಾಡಿ ಬೆಳೆಯಲಾಗಿದೆ. ಬೀಜ ಮೊಳಕೆ ಹೊಡೆದಿದ್ದು, ಮಳೆಗೆ ಚನ್ನಾಗಿ ಬರುತ್ತಿದೆ. ಪ್ರತಿ ಎಕರೆಗೆ 50 ರಿಂದ 80 ಸಾವಿರ ಖರ್ಚು ಮಾಡಿದ್ದು, ಜಿಂಕೆಗಳು ಬೆಳೆಯೆಲ್ಲ ಹಾಳು ಮಾಡುತ್ತಿವೆ. ಹಗಲಿರುವಳು ಜಿಂಕೆಗಳನ್ನು ಕಾಯುವುದೇ ಕಾಯಕವಾದಂತಾಗಿದೆ ಎಂದು ದೂರಿದರು.
ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಜಿಂಕೆಗಳ ಹಾವಳಿ ತಪ್ಪಿಸಿ ರೈತರ ಬೆಳೆಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಮನ್ನಲಾಪುರ ಗ್ರಾಮಸ್ಥರಾದ ಮಲ್ಲಿಕಾರ್ಜುನ ಗೌಡ, ಮಲ್ಲಪ್ಪಗೌಡ, ಸಿದ್ದಯ್ಯ ಸ್ವಾಮಿ, ಶಶಿಧರ ಗೌಡ, ಲಿಂಗಯ್ಯ ದಿಡ್ಡಿ, ಶಂಕರಪ್ಪ ಗೌಡ, ಶರಣಪ್ಪ, ವೆಂಕಟೇಶ, ಮೂಕಪ್ಪ, ಸಾಜೀದ್, ಮಲ್ಲಯ್ಯ, ನಾಗಪ್ಪ, ಬೀಸಪ್ಪ, ಪಾಗುಂಟಪ್ಪ, ರಾಘವೇಂದ್ರ, ತಿಪ್ಪಣ್ಣ, ವೆಂಕ ಟರೆಡ್ಡಿ, ತಿಮ್ಮಪ್ಪ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.