ಅಮೆರಿಕದ ಮ್ಯೂಸಿಯಂನಲ್ಲಿ ಸೆರ್ಪೋಜಿ 2 ಕಲಾಕೃತಿ ಪತ್ತೆ!
Team Udayavani, Jul 23, 2022, 7:10 AM IST
ವಾಷಿಂಗ್ಟನ್: ಕೆಲ ವರ್ಷಗಳ ಹಿಂದೆ ತಮಿಳುನಾಡಿನ ತಾಂಜಾವೂರಿನ ಸರಸ್ವತಿ ಮಹಲ್‌ನಿಂದ ಕಳ್ಳತನವಾಗಿದ್ದ ಮಹಾರಾಜ ಇಮ್ಮಡಿ ಸೆರ್ಪೋಜಿ ಮತ್ತು ಅವರ ಪುತ್ರ “ಇಮ್ಮಡಿ ಶಿವಾಜಿ’ ಇರುವ ಕಲಾಕೃತಿ ಅಮೆರಿಕದ ಮ್ಯಾಸಚೂಸೆಟ್ಸ್‌ನ ಪೀಬಾಡಿ ಎಸೆಕ್ಸ್ ವಸ್ತು ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ವಿಗ್ರಹ ವಿಭಾಗದ ಪೊಲೀಸರು ಚಿತ್ರಕಲೆಯನ್ನು ಪತ್ತೆ ಹಚ್ಚಿದ್ದಾರೆ.
ತಂಜಾವೂರಿನ ರಾಜ ಸೆರ್ಪೋಜಿ 1832ರಲ್ಲಿ ನಿಧನರಾಗಿದ್ದರು. ಅನಂತರ ಅವರ ಮಗ ಶಿವಾಜಿ 2 1855ರವರೆಗೆ ಆಳ್ವಿಕೆ ನಡೆಸಿದ್ದರು. ಅನಂತರ ಪ್ರದೇಶವು ಬ್ರಿಟಿಷರ ಪಾಲಾಗಿತ್ತು. ತಂದೆ-ಮಗ ಇಬ್ಬರೂ ಇರುವ ಚಿತ್ರವನ್ನು 1822-1827ರ ಕಾಲದಲ್ಲಿ ಬರೆಯಲಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಈ ಐತಿಹಾಸಿಕ ಚಿತ್ರವನ್ನು 2006ರಲ್ಲಿ ಅಂತಾರಾಷ್ಟ್ರೀಯ ಪುರಾತನ ವಸ್ತುಗಳ ವ್ಯಾಪಾರಿ ಸುಭಾಷ್ ಕಪೂರ್‌ರಿಂದ 28 ಲಕ್ಷ ರೂ.ಗಳಿಗೆ ಖರೀದಿಸಲಾಗಿತ್ತು.
ಬಳಿಕ ಅದನ್ನು ಸರಸ್ವತಿ ಮಹಲ್‌ನಲ್ಲಿ ಪ್ರದರ್ಶನಕ್ಕಿಡ ಲಾಗಿತ್ತು. ಆದರೆ ಈ ಚಿತ್ರವು ಕಳುವಾಗಿದ್ದಾಗಿ 2017ರಲ್ಲಿ ದೂರು ದಾಖಲಾಗಿದೆ. ವಿದೇಶಗಳಿಗೆ ಪುರಾತನ ವಸ್ತು ಕಳ್ಳಸಾಗಾಣಿಕೆ ಮಾಡುತ್ತಿರುವ ಆರೋಪದಲ್ಲಿ ಸುಭಾಷ್ ಕಪೂರ್‌ರನ್ನು 2011ರಲ್ಲಿಯೇ ಬಂಧಿಸಲಾಗಿದೆ. ಈ ಕಳ್ಳತನದ ಹಿಂದೆಯೂ ಅವರದ್ದೇ ಸಂಚಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.