![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 23, 2022, 10:33 AM IST
ಬೆಂಗಳೂರು: ಪ್ರತಿ ಬಾರಿಗಿಂತ ಈ ಸಲದ ಗಣೇಶ ಚತುರ್ಥಿ ಭಿನ್ನ ಮತ್ತು ವಿಶಿಷ್ಟವಾಗಿರಲಿದೆ. ಏಕೆಂದರೆ, ಈ ವರ್ಷ ಗಣೇಶನ ಜತೆ ಜತೆಗೆ ಪವರ್ ಸ್ಟಾರ್ ಪುನೀತ್ ಕೂಡ ಬರಲಿದ್ದಾರೆ.
ಹೌದು, ಗಣೇಶನೊಂದಿಗೆ ಪವರ್ ಸ್ಟಾರ್ ಪುನೀತ್ ಪ್ರತಿಷ್ಠಾಪಿಸಿ ಆರಾಧಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಇದರೊಂದಿಗೆ ಗಣೇಶನ ದರ್ಶನಕ್ಕೆ ಬಂದ ಭಕ್ತರು ಪುನೀತ್ ಅವರನ್ನೂ ಕಣ್ತುಂಬಿಕೊಳ್ಳಲಿದ್ದಾರೆ.
ಪ್ರತಿ ವರ್ಷ ಹಲವು ರೂಪಗಳಲ್ಲಿ ಗಣೇಶ ಮೂರ್ತಿಗಳು ರಾರಾಜಿಸುತ್ತಿದ್ದವು. ಈ ಸಲ ಪುನೀತ್ ಅಭಿಮಾನಿಗಳು ಗಣೇಶನ ಜತೆಗೆ ಸದಾ ಹಸನ್ಮುಖೀಯಾಗಿದ್ದ ಪ್ರೀತಿಯ ಅಪ್ಪು ಮೂರ್ತಿ ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದು, ವಿಗ್ರಹ ತಯಾರಕರಿಗೆ ಗಣೇಶ ಜತೆಗೆ ಪುನೀತ್ ಮೂರ್ತಿ ತಯಾರಿಸಲು ಆರ್ಡರ್ ನೀಡುತ್ತಿದ್ದಾರೆ.
ರಾಜಧಾನಿಯಲ್ಲಿ ಮೂರ್ತಿ ತಯಾರಕರೂ ಈ ಬಾರಿ ತುಂಬಾ ಉತ್ಸುಕತೆಯಿಂದ ಗಣೇಶ ಮತ್ತು ಪುನೀತ್ ವಿಗ್ರಹಗಳನ್ನು ತಯಾರಿಸುತ್ತಿರುವಲ್ಲಿ ತೊಡಗಿದ್ದಾರೆ. ಕೊರೊನಾ ಕಾರಣದಿಂದಾಗಿ ಕಳೆದ 2 ವರ್ಷಗಳಲ್ಲಿ ವ್ಯಾಪಾರ ಇಲ್ಲದೇ ವಿಗ್ರಹ ತಯಾರಕರು ಮತ್ತು ಮಾರಾಟಗಾರರು ನಷ್ಟ ಅನುಭವಿಸಿದ್ದರು. ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ವಿಗ್ರಹಗಳನ್ನು ಬುಕ್ ಮಾಡಿರುವುದಲ್ಲದೇ, ಗಣೇಶನೊಂದಿಗೆ ಪುನೀತ್ ಇರುವ ವಿಗ್ರಹಗಳನ್ನು ನೂರಾರು ಸಂಖ್ಯೆಯಲ್ಲಿ ಆರ್ಡರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರ ವಿಂಡೀಸ್ ಪ್ರಯಾಣ ವೆಚ್ಚ 3.5 ಕೋ.ರೂ.!
ಪರಿಸರ ಸ್ನೇಹಿ ಪುನೀತ್: ಪುನೀತ್ ಅವರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿದ್ದರು. ಅವರ ಮಾದರಿಯಾಗಿ, ಪುನೀತ್ ಮತ್ತು ಗಣೇಶನ ವಿಗ್ರಹಗಳನ್ನು ಸಂಪೂರ್ಣ ಮಣ್ಣಿನಿಂದ ತಯಾರಿಸಲಾಗಿದ್ದು, ಪರಿಸರ ಸ್ನೇಹಿ ಮೂರ್ತಿಗಳಾಗಿವೆ. ಇಬ್ಬರು ಸೇರಿಕೊಂಡು ದಿನಕ್ಕೆ ಎರಡು ಅಥವಾ ಮೂರು ವಿಗ್ರಹಗಳನ್ನು ತಯಾರಿಸುತ್ತಾರೆ. ಮೂರ್ತಿಯ ಮೇಲ್ಪದರಕ್ಕೆ ಮಾತ್ರ ಬಣ್ಣ ಹಚ್ಚುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಪಿಒಪಿ ವಿಗ್ರಹಗಳನ್ನು ನಿಷೇಧಿಸಿರುವುದರಿಂದ, ಮಣ್ಣಿನ ವಿಗ್ರವಿವಿಧ ರೂಪದಲ್ಲಿ ಪುನೀತ್ ಪುನೀತ್ ಭುಜದ ಮೇಲೆ ಪಾರಿವಾಳ ಕುಂತಿರುವುದು. ರಾಜಕುಮಾರ ಸಿನಿಮಾದಲ್ಲಿ ನಡೆದುಕೊಂದು ಬರುವ ಸ್ಯಾಂಡಿಂಗ್ ರೂಪ, ಗಣೇಶನು ಪುನೀತ್ ಜತೆಗೆ ಮಾತನಾಡುತ್ತಿರುವುದು, ಆಶೀರ್ವಾದ ಮಾಡುತ್ತಿರುವ ರೀತಿಯ ವಿಗ್ರಹಗಳಿಗೆ ಅಭಿಮಾನಿಗಳು ಆರ್ಡರ್ ನೀಡಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ನಾನಾ ಭಾಗದ ಅಭಿಮಾನಿಗಳು ಹಾಗೂ ಅಭಿಮಾನಿ ಸಂಘದವರು 150ಕ್ಕೂ ಹೆಚ್ಚು ಗಣೇಶನೊಂದಿಗೆ ಪುನೀತ್ ಇರುವ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸಲು ಬುಕ್ ಮಾಡಿದ್ದಾರೆ.
ಸುಮಾರು 10 ವರ್ಷಗಳಿಂದ ವಿವಿಧ ರೂಪದ ವಿಗ್ರಹಗಳನ್ನು ತಯಾರಿಸಿದ್ದೇನೆ. ಅಪ್ಪು ಅಭಿಮಾನಿಯಾದ ನಾನು, ಈ ಬಾರಿ ಸದಾ ನಗು ಮುಖ ಹೊಂದಿದ್ದ ಪುನೀತ್ ಮೂರ್ತಿಗಳನ್ನು ತಯಾರಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. –ಉಮೇಶ, ವಿಗ್ರಹ ತಯಾರಕರು
ಸುಮಾರು 50 ವರ್ಷಗಳಿಂದ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ. ಪ್ರತಿವರ್ಷ ನಾನಾ ರೂಪದ ಗಣೇಶಗಳನ್ನು ಆರ್ಡರ್ ಮಾಡುತ್ತಿದ್ದರು. ಆದರೆ, ಈ ಬಾರಿ ಗಣೇಶ ಜತೆಗೆ ಪುನೀತ್ ಇರುವ ವಿಗ್ರಹಗಳ ಆರ್ಡರ್ ಹೆಚ್ಚು ಬಂದಿವೆ. ಈಗಾಗಲೇ 150ರಿಂದ 200 ವಿಗ್ರಹಗಳ ಆರ್ಡರ್ ಕೊಟ್ಟಿದ್ದಾರೆ. –ಸಂತೋಷ್ ಕುಮಾರ್, ಶ್ರೀ ಪ್ರಸನ್ನ ಗಣಪತಿ ಎಂಟರ್ಪ್ರೈಸಸ್
–ಭಾರತಿ ಸಜ್ಜನ್
You seem to have an Ad Blocker on.
To continue reading, please turn it off or whitelist Udayavani.