ಫ್ಲಿಪ್ ಕಾರ್ಟ್ ಬಿಗ್ ಸೇಲ್ ಆಫರ್: 40 ಸಾವಿರಕ್ಕೆ ಸಿಗುತ್ತಿದೆ ಐಫೋನ್ 11
Team Udayavani, Jul 23, 2022, 12:50 PM IST
ಇ ಕಾರ್ಟ್ ನ ದೈತ್ಯ ಫ್ಲಿಪ್ ಕಾರ್ಟ್ ಇಂದಿನಿಂದ ಪ್ಲಸ್ ಸದಸ್ಯರಿಗೆ ಬಿಗ್ ಸೇವಿಂಗ್ ಡೇ ಆರಂಭಿಸಿದೆ. ಅಮೇಜಾನ್ ಪ್ರೈಮ್ ಡೇ ಜೊತೆಗೆ ಫ್ಲಿಪ್ ಕಾರ್ಟ್ ಈ ಬಿಗ್ ಸೇವಿಂಗ್ ಡೇ ಬಂದಿದೆ. ಈ ಬಾರಿ ಹಲವಾರು ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳಲ್ಲಿ ಫ್ಲಿಪ್ ಕಾರ್ಟ್ ಭಾರೀ ರಿಯಾಯತಿ ನೀಡುತ್ತಿದೆ.
ಐಫೋನ್ 11 ಫೋನ್ ನಲ್ಲಿ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯತಿ ನೀಡುತ್ತಿದೆ. 34 ಜಿಬಿ ಬ್ಲಾಕ್ ಐಫೋನ್ 11 ಮೊಬೈಲ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ 39,999 ರೂ. ಗಳಿಗೆ ಲಭ್ಯವಿದೆ. ಸದ್ಯ ಐಫೋನ್ 11 ಗೆ 42,999 ಎಂದು ಫ್ಲಿಪ್ ಕಾರ್ಟ್ ಪಟ್ಟಿ ಮಾಡಿದ್ದು, ಆದರೆ ಎರಡು ಸಾವಿರ ರೂ ಗಳ ಬ್ಯಾಂಕ್ ಡಿಸ್ಕೌಂಟ್ ನೀಡಿದೆ.
ಅಲ್ಲದೆ ಆರ್ ಬಿಎಲ್ ಬ್ಯಾಂಕ್ ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಸಿಟಿ ಬ್ಯಾಂಕ್ ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಕೋಟಕ್ ಬಯ್ಆಂಕ್ ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಇನ್ನಷ್ಟು ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ. ಅಲ್ಲದೆ ಫ್ಲಿಪ್ ಕಾರ್ಟ್ ಸುಮಾರು 17 ಸಾವಿರ ರೂ ವರೆಗಿನ ಎಕ್ಸ್ ಚೇಂಜ್ ಆಫರ್ ಕೂಡಾ ನೀಡಿದೆ.
ಈ ಎಲ್ಲಾ ಆಫರ್ ಗಳು ಐಫೋನ್ 11 ಬ್ಲ್ಯಾಕ್ ಕಲರ್ ಮೊಡೆಲ್ ಗೆ ಮಾತ್ರ ಲಭ್ಯವಿದೆ. ಇತರ 64 ಜಿಬಿಯ ಐಫೋನ್ 11 ಮೊಬೈಲ್ ಗೆ 46,999 ಬೆಲೆ ನಿಗದಿ ಪಡಿಸಿದೆ. 128 ಜಿಬಿಯ ಐಫೋನ್ 11 ಮೊಬೈಲ್ ಗೆ 51,999 ಬೆಲೆಯಿದೆ. ಇದಕ್ಕೂ ಬ್ಯಾಂಕ್ ಆಫರ್ ಗಳು ಲಭ್ಯವಿದೆ.
ಇದನ್ನೂ ಓದಿ:ಕಳ್ಳತನಕ್ಕಾಗಿ ತ.ನಾಡಿನಿಂದ ಬೆಂಗಳೂರಿಗೆ ಪಯಣ: ಡಿಯೋ ಸ್ಕೂಟರ್ ಗಳೇ ಇವರ ಟಾರ್ಗೆಟ್
ಆದರೆ ಗ್ರಾಹಕರು ಒಂದು ವಿಚಾರ ಗಮನಿಸಬೇಕಿದೆ. ಸದ್ಯಕ್ಕೆ ಈ ಆಫರ್ ಗಳು ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಿಗೆ ಮಾತ್ರ ಲಭ್ಯವಿದೆ. ಬಿಗ್ ಸೇವಿಂಗ್ ಡೇಸ್ ಮಾರಾಟವು ಜುಲೈ 23 ರ ಮಧ್ಯರಾತ್ರಿಯಿಂದ ಎಲ್ಲಾ ಬಳಕೆಗಳಿಗೆ ಲೈವ್ ಆಗಿರುತ್ತದೆ. ಜುಲೈ 27 ರವರೆಗೆ ಮುಂದುವರಿಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.