ಇಂದಬೆಟ್ಟು ಪ್ರಕರಣ: ಕೊಲೆ, ಪೋಕ್ಸೊ ಕೇಸು ದಾಖಲು
Team Udayavani, Jul 23, 2022, 11:55 PM IST
ಬೆಳ್ತಂಗಡಿ: ಇಂದಬೆಟ್ಟುವಿನಲ್ಲಿ ನಡೆದ ಬಾಲಕಿಗೆ ಲೈಂಗಿಕ ಕಿರುಕುಳ ಮತ್ತು ಅನಂತರ ಹಲ್ಲೆ, ಸಾವು ಘಟನೆಗೆ ಸಂಬಂಧಿಸಿದಂತೆ ದಲಿತ ದೌರ್ಜನ್ಯ, ಕೊಲೆ ಮತ್ತು ಪೋಕ್ಸೊ ಪ್ರಕರಣ ದಾಖಲಾಗಿದೆ.
ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪದ ಹಿನ್ನೆಲೆ ಶುಕ್ರವಾರ ಸಂಜೆ ಯುವಕರ ತಂಡವೊಂದು ಆರೋಪಿ ನಾರಾಯಣ ನಾಯ್ಕ (47)ನಿಗೆ ಹಲ್ಲೆ ನಡೆಸುವ ವೇಳೆ ರಕ್ಷಣೆಗೆ ಧಾವಿಸಿದ ಜಾರಪ್ಪ ನಾಯ್ಕ (55) ಅವರನ್ನು ತಂಡವು ದೂಡಿಹಾಕಿದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದರು.
ಹಲ್ಲೆ ನಡೆಸಿದ್ದಾರೆ ಎನ್ನಲಾದ ಚಂದ್ರಕಾಂತ ನಾಯ್ಕ, ಮನೋಹರ್ ಗೌಡ, ಹರಿಪ್ರಸಾದ್ ಪೂಜಾರಿ, ದೀಪಕ್ ಶೆಟ್ಟಿ ವಿರುದ್ಧ ದೂರು ನೀಡಲಾಗಿದೆ.
ಹಲ್ಲೆಯಿಂದ ಗಾಯಗೊಂಡ ನಾರಾಯಣ ನಾಯ್ಕ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಮೃತರಾದ ಜಾರಪ್ಪ ನಾಯ್ಕ ಅವರು ಹಲ್ಲೆಗೊಳಗಾದ ನಾರಾಯಣ ನಾಯ್ಕ ಅವರ ಪತ್ನಿಯ ಅಕ್ಕನ ಗಂಡನಾಗಿದ್ದು ವಿವರ ಅರಿತು ಸ್ಥಳಕ್ಕೆ ಆಗಮಿಸಿದ ಜಾರಪ್ಪ ನಾಯ್ಕ ಅವರ ಪುತ್ರ ರಾಜಶೇಖರ್ ಅವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಪೋಕ್ಸೊ ಪ್ರಕರಣ ದಾಖಲು
ಘಟನೆ ವಿಚಾರವಾಗಿ ಹಲ್ಲೆಗೊಳ ಗಾಗಿರುವ ನಾರಾಯಣ ನಾಯ್ಕರ ವಿರುದ್ಧ 6ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ತಾಯಿ ದೂರಿದ ಹಿನ್ನೆಲೆ ಶನಿವಾರ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ನಾರಾಯಣ ನಾಯ್ಕ ಜು. 8ರಂದು ಸಂಜೆ ಮಗುವನ್ನು ಪುಸಲಾಯಿಸಿ ಮನೆಗೆ ಬರ ಹೇಳಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಗುವಿನ ಭವಿಷ್ಯದ ವಿಚಾರದಿಂದ ಆಸ್ಪತ್ರೆಗೂ ಹೋಗದೆ, ದೂರನ್ನೂ ನೀಡಿರಲಿಲ್ಲ.
ಆದರೆ ಆರೋಪಿಯು ಅನಂತರದ ದಿನಗಳಲ್ಲೂ ಕೂಡ ಮಗುವನ್ನು ಕರೆದಿರುವುದರಿಂದ ಈ ದಿನ ದೂರು ನೀಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.