ಶಾಂತಿ ಕದಡುವವರಿಗೆ ರೌಡಿಶೀಟ್ ಓಪನ್
Team Udayavani, Jul 25, 2022, 11:45 AM IST
ಮಾದನಹಿಪ್ಪರಗಿ: ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತಮ್ಮ ಬೆಳೆ ಬೇಯಿಸಿ ಕೊಳ್ಳುತ್ತಿರುವ, ಸಾರ್ವಜನಿಕ ಸ್ಥಳಗಳಲ್ಲಿ ಜೂಜು ಮಟಕಾ ಇತರೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರಿಗೆ ಮುಲಾಜಿಲ್ಲದೇ ರೌಡಿಶೀಟ್ ಓಪನ್ ಮಾಡಲಾಗುವುದು ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ದಿನೇಶ ಹೇಳಿದರು.
ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ತಿಂಗಳ ನಾಲ್ಕನೇ ರವಿವಾರ ದಲಿತರ ದಿನ ಆಚರಿಸಲಾಗುವುದು. ಕಾನೂನು ಎಲ್ಲರಿಗೂ ಒಂದೇ ಆಗಿದೆ. ವ್ಯಕ್ತಿ ಎಷ್ಟೇ ಪ್ರಭಾವಿ ಆದರೂ ಸರಿ ಕಾನೂನು ಪಾಲಿಸಲೇಬೇಕು. ದಲಿತರು ಈಗ ಪ್ರಜ್ಞಾನವಂತರಾಗಿದ್ದಾರೆ. ಇಲ್ಲಿ ಎಲ್ಲರೂ ಸಹೋದರತೆ, ಸಹಬಾಳ್ವೆಯಿಂದ ಬದುಕುತ್ತಿದ್ದಾರೆ ಎಂದರು.
ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿವವರ, ರೌಡಿಸಂ, ದಲಿತರ ಮೇಲೆ ದಬ್ಟಾಳಕೆ ಮಾಡುವರ ಬಗ್ಗೆ ಮಾಹಿತಿ ನೀಡಿ ಅಂತವರ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. ಠಾಣೆಗೆ ಬರುವ ಬಡವರ ದಲಿತರ ಕಂಪ್ಲೇಟ್ ಗಳು ಬಂದಾಗ ಅವರನ್ನು ಆದಷ್ಟು ತಿಳಿಸಿ ಸಮಾಜಿಯಿಸಿ ಕಳುಹಿಸಿ ಕೊಡುವ ಪ್ರಯತ್ನ ಮಾಡುತ್ತೇವೆ. ಎಫ್‌ಐಆರ್ ಮಾಡಲೆಬೇಕು ಎಂದರೆ ಅನಿವಾರ್ಯ. ಮುಂದೆ ಕೋರ್ಟ ಕಚೇರಿ ಅಂತ ಅಲೆದು ದುಡ್ಡು ಮತ್ತು ಸಮಯ ಹಾಳು ಮಾಡಿಕೊಂಡು ವ್ಯರ್ಥ ಆಗುವುದು ಬೇಡ ಎಂಬುದು ನನ್ನ ವಿಚಾರ ಎಂದರು.
ಈ ಸಂದರ್ಭದಲ್ಲಿ ಇಕ್ಕಳಕಿ ಗ್ರಾಮದ ದಲಿತ ಮುಖಂಡ ಭೀಮಾಶಂಕರ ಕದಮ್ ಮಾತನಾಡಿದರು. ಮುಖಂಡ ಶಾಂತಮಲ್ಲ ಕೆರೂರ, ಸ್ಥಳೀಯ ಗ್ರಾಪಂ ಉಪಾಧ್ಯಕ್ಷ ಚೆನ್ನಪ್ಪ ಹಾಲೆನವರ್, ಶಿವಲಿಂಗಪ್ ಮಾತಂಗಿ, ಹರಿದಾಸ ಹಜಾರೆ, ವಿಶ್ವನಾಥ ಕೊಂಕಾಟೆ, ಅರ್ಜುನ ಇಂಗಳೆ ಭಾಗಣ್ಣ ಕುರನೂರೆ, ನಾಗೇಂದ್ರ ಹಲಗೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.