ಆರೋಗ್ಯ ಇಲಾಖೆ ವಸತಿ ಗೃಹಗಳಿಗೇ ಅನಾರೋಗ್ಯ
ಹಿರೇ ಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರ ವಸತಿ ಗೃಹಗಳು; 14ರ ಪೈಕಿ ಮೂರರಲ್ಲಿ ಮಾತ್ರ ಸಿಬ್ಬಂದಿ ವಾಸ
Team Udayavani, Jul 25, 2022, 3:18 PM IST
ಹಿರೇಬಾಗೇವಾಡಿ: ಜನರ ಆರೋಗ್ಯ ರಕ್ಷಣೆಗೆ ದಿನರಾತ್ರಿ ಶ್ರಮಿಸುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅವುಗಳನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಗೆ 45 ಗ್ರಾಮಗಳು ಇದ್ದು, ಈ ಭಾಗದ ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಮಾರು 12 ವರ್ಷಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಾಗಿ 14 ವಸತಿಗೃಹಗಳು ಇದ್ದು, ಅದರಲ್ಲಿ 11 ವಸತಿ ಗೃಹಗಳು ನಿರ್ವಹಣೆಯ ಕೊರತೆಯಿಂದಾಗಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. 3 ಮಾತ್ರ ಉಪಯೋಗವಾಗುತ್ತಿವೆ. ಆದರೆ ಅವು ಸಹ ಶಿಥಿಲಗೊಂಡಿದ್ದು, ಅನಿವಾರ್ಯವಾಗಿ ಕೆಲವು ಸಿಬ್ಬಂದಿ ಈ ಕಟ್ಟಡಗಳಲ್ಲಿ ಆತಂಕದ ನಡುವೆ ವಾಸ ಮಾಡುತ್ತಿದ್ದಾರೆ.
ಈ ಕೇಂದ್ರಕ್ಕೆ ಮಂಜೂರಾದ ಹುದ್ದೆಗಳು 44. ಅಷ್ಟು ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲವಾದರೂ ಸದ್ಯ ಇರುವ ಸಿಬ್ಬಂದಿಗೂ ವಸತಿ ಗೃಹಗಳು ಇಲ್ಲದೆ ಇರುವುದರಿಂದ ಅನಿವಾರ್ಯವಾಗಿ ಸಿಬ್ಬಂದಿ ಬಾಡಿಗೆ ಮನೆ ಮಾಡುವಂತಾಗಿದೆ. ಆಸ್ಪತ್ರೆಯ ಆವರಣದಲ್ಲಿಯೇ ಇರುವ ವಸತಿ ಗೃಹಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರೆ ರೋಗಿಗಳಿಗೂ ಅನುಕೂಲ ಎನ್ನುವುದು ಜನರ ಅಭಿಪ್ರಾಯ.
ಮಳೆಗಾಲ ಬಂತೆಂದರೆ ಸಾಕು, ಇಲ್ಲಿನ ವಸತಿ ಗೃಹದಲ್ಲಿ ಇರುವವರ ಬದುಕು ಮೂರಾಬಟ್ಟೆ ಎಂದೇ ಅರ್ಥ. ಬಿರುಕು ಬಿಟ್ಟಿರುವ ಮೇಲ್ಚಾವಣಿಯಿಂದ ನಿರಂತರವಾಗಿ ಸೋರುವ ನೀರು, ವಸತಿ ಗೃಹದ ಸುತ್ತಮುತ್ತಲು ಕೆಸರಿನ ಹೊಂಡವೇ ಸೃಷ್ಟಿಯಾಗಿರುತ್ತದೆ. ಹಳೆಯ ವಿದ್ಯುತ್ ಜೋಡಣೆಯಿಂದಾಗಿ ಶಾಕ್ ತಗಲುವ ಭಯ ವಸತಿ ಗೃಹದಲ್ಲಿರುವ ಸಿಬ್ಬಂದಿ ಕುಟುಂಬಗಳಿಗೆ ಕಾಡುತ್ತದೆ.
ಆರೋಗ್ಯ ಇಲಾಖೆಯು ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಹಿತದೃಷ್ಟಿಯಿಂದ ಹಳೆಯ ಕಟ್ಟಡಗಳನ್ನು ಕೆಡವಿ ಜಿ+2 ಮಾದರಿಯ ಮನೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಈ ಭಾಗದ ಜನರ ಅನಿಸಿಕೆ. ಜನರು ಆಡಳಿತಕ್ಕೆ ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಹಿಂದೆ ಕೂಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಗಬೇಕಾದ ಅನುಕೂಲತೆಗಳ ಬಗ್ಗೆ ಡಿಎಚ್‌ಓ ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಲಾಗಿತ್ತು. ಅವರಿಂದ ಸಮಸ್ಯೆ ಪರಿಹಾರದ ಭರವಸೆ ಪಡೆದು ವರ್ಷಗಳೇ ಗತಿಸಿದ್ದರೂ ಸಹ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ. –ಮಂಜುನಾಥ ವಸ್ತ್ರದ, ಪ್ರಧಾನ ಕಾರ್ಯದರ್ಶಿ ಉ.ಕ. ಜನ ಸಂಗ್ರಾಮ ಪರಿಷತ್
ಮಾಧ್ಯಮ ಹಾಗೂ ಸಾರ್ವಜನಿಕರ ನಿರೀಕ್ಷೆಯಂತೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು. –ಶಿವಾನಂದ ಮಾಸ್ತಿಮರರ್ಡಿ, ತಾಲೂಕು ವೈದ್ಯಾಧಿಕಾರಿ, ಬೆಳಗಾವಿ.
ಆಸ್ಪತ್ರೆಗೆ ಎಲ್ಲ ಮೂಲಭೂತ ಸೌಕರ್ಯಗಳ ಕುರಿತಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ನೀಡಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. –ಡಾ| ನೀತಾ ಚವ್ಹಾಣ, ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ಹಿರೇಬಾಗೇವಾಡಿ.
-ಶಿವಾನಂದ ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.