ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Jul 26, 2022, 7:05 AM IST
ಮೇಷ:
ಹೆಚ್ಚಿದ ಪರಿಶ್ರಮ. ಹಠ ಮಾಡದೇ ತಾಳ್ಮೆಯಿಂದ ಕಾರ್ಯಪ್ರವೃತ್ತರಾಗಿ. ದೂರದ ವ್ಯವಹಾರಗಳಿಂದ ಹೆಚ್ಚಿದ ವರಮಾನ. ಗುರುಹಿರಿಯರ, ಮೇಲಧಿಕಾರಿಗಳ ಮಾರ್ಗದರ್ಶನ ಪಾಲಿಸುವುದರಿಂದ ಯಶಸ್ಸು ಲಭಿಸೀತು. ಗೃಹದಲ್ಲಿ ನೆಮ್ಮದಿಯ ವಾತಾವರಣ.
ವೃಷಭ:
ಉದ್ಯೋಗ ವ್ಯವಹಾರಗಳಲ್ಲಿ ಉದಾರತೆ ತೋರುವುದರಿಂದ ಜನಮನ್ನಣೆ. ನಿರೀಕ್ಷಿತ ಸ್ಥಾನ ಸುಖ. ಯಶಸ್ಸು ಲಭಿಸಿದ ಮನತೃಪ್ತಿ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ದೀರ್ಘ ಪ್ರಯಾಣ ಸಂಭವ.
ಮಿಥುನ:
ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ. ದಂಪತಿಗಳು ಪಾಲುದಾರರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿಕೊಳ್ಳಿ. ನಿರೀಕ್ಷಿತ ಧನಾಗಮ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ.
ಕರ್ಕ:
ಉತ್ತಮ ಸ್ಥಾನಮಾನಕ್ಕಾಗಿ ಪ್ರಯತ್ನ. ಅಧ್ಯಯನದಲ್ಲಿ ತತ್ಪರತೆ. ಕುಟುಂಬಿಕರಲ್ಲಿ ತಾಳ್ಮೆ, ಸಹನೆಯಿಂದ ವರ್ತಿಸಿ. ಪರಕಾರ್ಯದಲ್ಲಿ ಆಸಕ್ತಿ. ಹಣಕಾಸಿನ ವಿಚಾರದಲ್ಲಿ ಕೃಪಣತೆ ಮಾಡದಿರಿ. ಸಾಂಸಾರಿಕ ಸುಖ ಮಧ್ಯಮ.
ಸಿಂಹ:
ಹಿರಿಯರಿಂದ ಸಂತೋಷ. ಗೃಹ ವಾಹನಾದಿ ವಿಚಾರಗಳಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಣಯದಿಂದ ನಷ್ಟ ಸಂಭವ.
ಕನ್ಯಾ:
ಧೈರ್ಯ ಸಾಹಸ ಪರಾಕ್ರಮದಿಂದ ಕೂಡಿದ ಕಾರ್ಯವೈಖರಿ. ನಿರೀಕ್ಷೆಗೂ ಮಿರೀದ ಧನಾಗಮನ ಹಾಗೂ ವರಮಾನ. ದೂರದ ಮಿತ್ರರ ಭೇಟಿ. ಕೆಲಸಕಾರ್ಯಗಳಲ್ಲಿ ಗೌರವ ಪ್ರಾಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ.
ತುಲಾ:
ಸ್ತ್ರೀ ಪುರುಷರಿಗೆ ಪರಸ್ಪರರಿಂದ ಸಹಕಾರ ಅನುಕೂಲತೆ. ಗೌರವದಿಂದ ಕೂಡಿದ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಸಹೋದರಾದಿ ವರ್ಗ ದವರಿಗೆ ಅಭಿವೃದ್ಧಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಸಮಯ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ದಿನ.
ವೃಶ್ಚಿಕ:
ಧನಾಗಮ ವಿಚಾರದಲ್ಲಿ ಏರಿಳಿತ ಪರಿಸ್ಥಿತಿ ಇದ್ದರೂ ಸ್ಥಾನಕ್ಕೆ ಚ್ಯುತಿಯಾಗದು. ಸ್ವಪ್ರಯತ್ನ ಸಹೋದರ ಸಹಾಯದಿಂದಲೂ ಕಾರ್ಯರಂಗ ದಲ್ಲಿ ಉತ್ತಮ ಫಲಿತಾಂಶ. ಸೊಂಟದ ಆರೋಗ್ಯ ಗಮನವಿರಲಿ. ಪರದೇಶಕ್ಕೆ ಹೋಗಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅನುಕೂಲ.
ಧನು:
ಆರೋಗ್ಯದಲ್ಲಿ ವೃದ್ಧಿ. ಸಹೋದರಾದಿ ಸಹಾಯ. ಉತ್ತಮ ಧನಾರ್ಜನೆ. ಕಾರ್ಯಕ್ಷೇತ್ರ ದಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ. ಮಕ್ಕಳಲ್ಲಿ ನಾಯಕತ್ವ ಗುಣ ವೃದ್ಧಿಯಿಂದ ಹಿರಿಯರಿಗೆ ಸಂತೋಷ. ಪ್ರಯಾಣ ದೇವತಾ ಕಾರ್ಯಗಳಲ್ಲಿ ವಿಳಂಬ.
ಮಕರ:
ಸಂಪತ್ತಿನ ವಿಚಾರದಲ್ಲಿ ಕಟ್ಟಿಹಾಕಿದ ಪರಿಸ್ಥಿತಿ. ಕಾರ್ಮಿಕರಲ್ಲಿ ಸಹೋದರ ಸಮಾನರಲ್ಲಿ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿ. ದಂಪತಿಗಳು ಚರ್ಚೆಗೆ ಅವಕಾಶ ನೀಡದಿರಿ. ದೇವತಾ ಕೆಲಸ ಕಾರ್ಯಗಳಿಗೆ ಪ್ರಯಾಣ. ಆರೋಗ್ಯ ವೃದ್ಧಿ.
ಕುಂಭ:
ಅನಿರೀಕ್ಷಿತ ಧನಲಾಭ. ಮಿತ್ರರಿಂದಲೂ ಸಹೋದರರಿಂದಲೂ ಸುಖ. ಮಕ್ಕಳು ವಿದ್ಯಾರ್ಥಿಗಳ ವಿಚಾರದಲ್ಲಿ ಸಂತೋಷದ ಪರಿಸ್ಥಿತಿ. ಆಹಾರೋದ್ಯಮ ಉದ್ಯೋಗದವರಿಗೆ ಅಭಿವೃದ್ಧಿ. ಜಲೋತ್ಪನ್ನ ವಸ್ತುಗಳ ವ್ಯವಹಾರಸ್ಥರಿಗೆ ಉತ್ತಮ ದಿನ.
ಮೀನ:
ಆರೋಗ್ಯ ಉತ್ತಮ. ಉದ್ಯೋಗದಲ್ಲಿ ನಿರೀಕ್ಷಿತ ಗೌರವ. ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಏರಿಳಿತದ ಅನುಭವ. ಧಾರ್ಮಿಕ ಕಾರ್ಯಗಳಿಗೆ ಮಿತವ್ಯಯ. ಸಣ್ಣ ಪ್ರಯಾಣ. ಮಕ್ಕಳಿಂದ ಸುಖ. ಸಹೋದರರಲ್ಲಿ ಪ್ರೀತಿಯಿಂದ ವ್ಯವಹರಿಸಿ ಕಾರ್ಯಸಾಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.