ದೋಟಿಹಾಳ ಗ್ರಾಮವನ್ನು ಕಂದಾಯ ಹೋಬಳಿ ಕೇಂದ್ರವಾಗಿ ಮಾಡಲು ಹೋರಾಟ
Team Udayavani, Jul 26, 2022, 12:09 PM IST
ದೋಟಿಹಾಳ: ಗ್ರಾಮವನ್ನು ಕುಷ್ಟಗಿ ತಾಲೂಕಿನ ಕಂದಾಯ ಹೋಬಳಿ ಕೇಂದ್ರವನ್ನಾಗಿ ರಾಜ್ಯ ಸರ್ಕಾರ ಘೋಷಿಸುವವರೆಗೂ ನಮ್ಮ ಹೋರಾಟ ನಿಲ್ಲಿಸುವದಿಲ್ಲ ಎಂದು ದೋಟಿಹಾಳ ಹೋಬಳಿ ಕೇಂದ್ರ ಹೋರಾಟ ಸಮಿತಿಯ ಅಧ್ಯಕ್ಷ ರಾಜಸಾಬ್ ಯಲಬುರ್ಗಿ ಅವರು ಹೇಳಿದರು.
ಗ್ರಾಮದ ಶುಕಮುನಿಸ್ವಾಮಿಗಳ ಮಠದಿಂದ ಹೋರಾಟಗಾರರು ಮೆರವಣಿಗೆ ಮೂಲಕ ಆಗಮಿಸಿ ಬಸ್ಸ ನಿಲ್ದಾಣದ ಹತ್ತಿರ ತಮ್ಮ ಹೋರಾಟವನ್ನು ಆರಂಭಿಸಿ ಅವರು ಮಾತನಾಡಿದ ಅವರು ನಮ್ಮ ದೋಟಿಹಾಳ ಗ್ರಾಮವು ಕಂದಾಯ ಹೋಬಳಿಗೆ ಬೇಕಾಗಿರುವಂತಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದು ಈ ಗ್ರಾಮವನ್ನು ಕಂದಾಯ ಹೋಬಳಿಯನ್ನಾಗಿ ಮಾಡಲು ಇಂದಿನಿಂದ ಅನಿರ್ಧಿಷ್ಟಾವಧಿಯ ಹೋರಾಟವನ್ನು ಆರಂಭಿಸಿದ್ದೇವೆ ಎಂದು ಹೇಳಿದರು ಎಂದರು.
ಈ ನಮ್ಮ ಹೋರಾಟದ ಯಶಸ್ವಿಗೆ ದೋಟಿಹಾಳ ಸೇರಿದಂತೆ ಅಕ್ಕಪಕ್ಕದ ಕೇಸೂರು, ಶಿರಗುಂಪಿ, ಬಿಜಕಲ್ ಹಾಗೂ ಕ್ಯಾದಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಸಹಕಾರವಿದೆ. ಕ್ಯಾದಿಗುಪ್ಪಾ, ಕೇಸೂರ, ಬಿಜಕಲ್ಲ, ಶಿರಗುಂಪಿ ಗ್ರಾಪಂಗಳಿಗೆ ದೋಟಿಹಾಳ ಕೇಂದ್ರ ಸ್ಥಾನವಾಗಿದೆ. 5 ಗ್ರಾ.ಪಂ.ಗಳ ವ್ಯಾಪ್ತಿಗೆಯಲ್ಲಿ ಸುಮಾರು 30ಸಾವಿರ ಜನಸಂಖ್ಯೆ ಒಳಗೊಂಡಿದೆ. ದೋಟಿಹಾಳ ಕೇಂದ್ರ ಸ್ಥಾನವನ್ನಾಗಿಸಿ ಹೋಬಳಿಯನ್ನು ರಚಿಸಿದರೆ ಜನರಿಗೆ ಅನುಕೂಲವಾಗಲಿದೆ.
ಸದ್ಯ ಕ್ಯಾದಿಗುಪ್ಪಾ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳು ಪ್ರಸ್ತುತ ಹನುಮಸಾಗರ ಹೋಬಳಿ ವ್ಯಾಪ್ತಿಗೆ ಬರುತ್ತವೆ. ಇಲ್ಲಿಯ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸುಮಾರು 40 ಕಿಲೋಮೀಟರ್ ದೂರದ ಹನುಮಸಾಗರಕ್ಕೆ ಕ್ರಮಿಸಬೇಕಾಗುತ್ತದೆ. ಇದರಿಂದ ಜನರ ಸಮಯ ಮತ್ತು ಹಣ ವೆಚ್ಚವಾಗಲಿದೆ. ಹೀಗಾಗಿ ದೋಟಿಹಾಳ ಹೋಬಳಿ ಕೇಂದ್ರವಾದರೆ ಇವರಿಗೆ ಸಮಯ, ಹಣ ಉಳಿತಾಯ ವಾಗುತ್ತದೆ. ದೋಟಿಹಾಳ ಗ್ರಾಮವು ಹೋಬಳಿ ಮುಖ್ಯ ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದೆ. ದೋಟಿಹಾಳ ಗ್ರಾಮವು ಕುಷ್ಟಗಿ ತಾಲೂಕಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮಗಳಲ್ಲಿ ಒಂದಾಗಿದ್ದು ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, 33/11ಕೆವಿ ಮುಖ್ಯ ವಿತರಣೆ ವಿದ್ಯುತ್ ಉಪಕೇಂದ್ರ, ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಎರಡು ಪ್ರಾಥಮಿಕ ಶಾಲೆಗಳು, ಎರಡು ಖಾಸಗಿ ಶಾಲೆಗಳು, ಕಸ್ತೂರಿಬಾ ವಸತಿ ನಿಲಯ, ಬಾಲಕರ ವಸತಿ ನಿಲಯ, ಸರಿಯಾದ ಸಮರ್ಪಕ ಸಾರಿಗೆ ವ್ಯವಸ್ಥೆ ಸೇರಿದಂತೆ ಹತ್ತಾರು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಹಾಗೂ ನಮ್ಮ ಗ್ರಾಮಕ್ಕೆ ಸಮೀಪ ಇರುವ ಕೇಸೂರ ಗ್ರಾಮ ಪಂಚಾಯಿತಿ, ಬಿಜಕಲ್ ಗ್ರಾಮ ಪಂಚಾಯಿತಿ, ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿ, ಶಿರಗುಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ಇಪ್ಪತ್ತೂಕ್ಕೂ ಹೆಚ್ಚು ಹಳ್ಳಿಗಳಿಗೆ ವ್ಯಾಪಾರ ಹಾಗೂ ವಾಣಿಜ್ಯ ಕೇಂದ್ರವಾಗಿ ದೋಟಿಹಾಳ ಇದೆ. ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು, ದೋಟಿಹಾಳ ಹೋಬಳಿಯನ್ನಾಗಿ ಘೋಷಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದರು.
ನಮ್ಮ ಪ್ರತಿಭಟನೆಯ ಸ್ಥಳಕ್ಕೆ ಕೊಪ್ಪಳ ಉಸ್ತುವಾರಿ ಮಂತ್ರಿ ಆನಂದಸಿಂಗ್, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಆಗಮಿಸಿ ಮನವಿ ಸ್ವೀಕರಿಸಿ ಭರವಸೆಯ ಪತ್ರ ನೀಡುವವರೆಗೂ ನಮ್ಮ ಅನಿರ್ದಿಷ್ಟಾವಧಿ ಧರಣಿ ಮುಂದುವರಿಯಲಿದೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಶ್ರೀನಿವಾಸ ಕಂಟ್ಲಿ ಅವರು ಸಷ್ಟ ಪಡಿಸಿದರು.
ಈ ವೇಳೆ ದೋಟಿಹಾಳ ಹೋಬಳಿ ಕೇಂದ್ರ ಹೋರಾಟ ಸಮಿತಿಯ ಪ್ರಮುಖರಾದ ಬಸವರಾಜ ಕಡಿವಾಲ, ಪ್ರಕಾಶ ಪಟ್ಟೇದ, ಮಂಜೂರಅಲಿ ಬನ್ನು, ಪರಶುರಾಮ್ ಈಳಗೇರ, ಯಮನೂರಪ್ಪ ಕ್ಯಾದಿಗುಪ್ಪಿ, ಹೈ.ಕ. ರಕ್ಷಣಾ ಸಮಿತಿ ಅಧ್ಯಕ್ಷ, ಸುರೇಶ ಹುನಗುಂದ, ಮಾಜಿ ತಾಪಂ ಸದಸ್ಯ ಯಂಕಪ್ಪ ಚವ್ಹಾಚ, ಕೇಶಪ್ಪ ನೀಲಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.